ಸುದ್ದಿಮೂಲ ವಾರ್ತೆ ಮಾನ್ವಿಿ, ನ.28:
ಮಾನ್ವಿಿ ತಾಲೂಕಿನ ಅಡವಿಅಮರೇಶ್ವರ ಮಠದ ಪೀಠಾಧಿಪತಿಗಳಾಗಿದ್ದ ಸುವರ್ಣಗಿರಿ ವಿರಕ್ತಮಠದ ಶ್ರೀ ಮ.ನಿ.ಪ್ರ ಶಾಂತಮಲ್ಲ ಮಹಾಸ್ವಾಾಮಿಗಳು (86 ವರ್ಷ) ಶುಕ್ರವಾರ ಸಾಯಂಕಾಲ 7 ಗಂಟೆಗೆ ಲಿಂಗೈಕ್ಯರಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ವಯೋ ಸಹಜ ಕಾಯಿಲೆಯಿಂದ ಅನಾರೋಗ್ಯಕ್ಕೀಡಾಗಿದ್ದ ಶ್ರೀಗಳ ಆರೋಗ್ಯದಲ್ಲಿ ಶುಕ್ರವಾರ ಬೆಳಿಗ್ಗೆೆ ಏರು ಪೇರಾಗಿತ್ತು. ಸೂಕ್ತ ಚಿಕಿತ್ಸೆೆಗಾಗಿ ಸಿಂಧನೂರಿನ ಕೇರ್ ಆಸ್ಪತ್ರೆೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆೆ ಲಕಾರಿಯಾಗದೇ ಶುಕ್ರವಾರ ಸಾಯಂಕಾಲ ಅಪಾರ ಭಕ್ತ ವೃಂದದವರನ್ನು ಬಿಟ್ಟಗಲಿದ್ದಾರೆ.
ಅಡವಿ ಅಮರೇಶ್ವರ ಸುವರ್ಣಗಿರಿ ವಿರಕ್ತಮಠದ ಶ್ರೀ ಶಾಂತಮಲ್ಲ ಮಹಾಸ್ವಾಾಮಿಗಳು ಅಡವಿ ಅಮರೇಶ್ವರ ಮಠದ ಪೀಠಾಧಿಪತಿಗಳಾಗಿ ನೇಮಕಗೊಂಡು ಅನೇಕ ವರ್ಷಗಳ ಕಾಲ ಈ ಭಾಗದ ಭಕ್ತರ ಪಾಲಿಗೆ ದೈವಿ ಸಂಭೂತರಾಗಿದ್ದರು.
ಅಂತ್ಯಕ್ರಿಿಯೆ: ಲಿಂಗೈಕ್ಯ ಅಡವಿ ಅಮರೇಶ್ವರ ಮಠದ ಪೀಠಾಧಿಪತಿ ಸುವರ್ಣಗಿರಿ ವಿರಕ್ತ ಮಠದ ಶ್ರೀಶಾಂತಮಲ್ಲ ಮಹಾಸ್ವಾಾಮಿಗಳ ಕ್ರಿಿಯಾ ವಿಧಾನ ಶನಿವಾರ ಮಧ್ಯಾಾಹ್ನ 3 ಗಂಟೆಗೆ ಮಠದ ಅವರಣದಲ್ಲಿ ನೆರವೇರಲಿದ್ದು, 50 ಕ್ಕೂ ಹೆಚ್ಚು ಹರಗುರು ಚರಮೂರ್ತಿಗಳು, ವಿವಿಧ ಮಠಗಳ ಮಠಾಧೀಶರು, ಸಚಿವರು, ಶಾಸಕರು, ಮಾಜಿ ಶಾಸಕರು, ಮುಖಂಡರು, ಹಾಗೂ ಅಪಾರ ಸಂಖ್ಯೆೆಯಲ್ಲಿ ಭಕ್ತಾಾದಿಗಳು ಪಾಲ್ಗೊೊಳ್ಳುವರು.
ಜೀವನ ಹಿನ್ನೆೆಲೆ: ಶ್ರೀ ಮ.ನಿ.ಪ್ರ ಶಾಂತಮಲ್ಲ ಶಿವಯೋಗಿಗಳು ಅಡವಿ ಅಮರೇಶ್ವರ ಮಠದ ಪ್ರಥಮ ಪೀಠಾಧಿಪತಿಗಳಾಗಿ 86 ವರ್ಷ ಸಾರ್ಥಕ ಜೀವನ ನಡೆಸಿದವರಾಗಿದ್ದಾರೆ. ಇವರು 1941 ರಲ್ಲಿ ಧಾರವಾಡದ ಮುರುಘಾ ಮಠದಲ್ಲಿ ಜನಿಸಿದ್ದು ಇವರಿಗೆ ಮುರುಘಾ ಮಠದ ಶ್ರೀ ಮೃತ್ಯುಂಜಯ ಅಪ್ಪಗಳ ಹೆಸರನ್ನು ಇಡಲಾಯಿತು.
5 ನೇ ವರ್ಷದಲ್ಲಿ ಶಿವಯೋಗ ಮಂದಿರದಲ್ಲಿ ಪ್ರಾಾಥಮಿಕ, ಪ್ರೌೌಢ, ವೇದ, ಶಾಸ, ವಚನ ಸಾಹಿತ್ಯ ಅಭ್ಯಾಾಸ ಮಾಡಿದ ಇವರನ್ನು 1960 ರಲ್ಲಿ ವಳಬಳ್ಳಾಾರಿ ಸುವರ್ಣಗಿರಿ ವಿರಕ್ತ ಮಠಕ್ಕೆೆ ನಿಯೋಜಿತ ಮರಿದೇವರೆಂದು ನೇಮಕ ಮಾಡಲಾಯಿತು.
ನಂತರ ವಳಬಳ್ಳಾಾರಿ ವಿರಕ್ತ ಮಠದ ಶಾಖಾ ಮಠವಾದ ಅಡವಿ ಅಮರೇಶ್ವರ ಶ್ರೀ ಮಠಕ್ಕೆೆ ದಿನಾಂಕ 7-5-1979 ರಲ್ಲಿ ಪಟ್ಟಾಾಧಿಕಾರ ಮಾಡಲಾಯಿತು. ನಂತರ ಇವರು ಅಡವಿ ಅಮರೇಶ್ವರ ಮಠದ ಶ್ರೀ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಿ ಗೆ ಶ್ರಮಿಸಿ ಶಿಕ್ಷಣ, ಧಾರ್ಮಿಕ, ಸಾಹಿತ್ಯ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿ ಈ ಭಾಗದಲ್ಲಿ ಹೆಸರು ವಾಸಿಯಾಗಿದ್ದರು.
ಸಂತಾಪ: ಶ್ರೀ ಅಡವಿ ಅಮರೇಶ್ವರ ಮಠದ ಪೀಠಾಧಿಪತಿ ಸುವರ್ಣಗಿರಿ ವಿರಕ್ತಮಠದ ಶ್ರೀಶಾಂತಮಲ್ಲ ಮಹಾಸ್ವಾಾಮಿಗಳ ನಿಧನಕ್ಕೆೆ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು, ಶಾಸಕರಾದ ಹಂಪಯ್ಯ ನಾಯಕ, ಡಾ.ಶಿವರಾಜ ಪಾಟೀಲ್, ಹಂಪನಗೌಡ ಬಾದರ್ಲಿ, ಬಸನಗೌಡ ದದ್ದಲ್, ಮಾಜಿ ಸಂಸದರಾದ ಬಿ.ವಿ.ನಾಯಕ, ಕೆ.ವಿರೂಪಾಕ್ಷಪ್ಪ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ಕೆ.ಶಿವನಗೌಡ ನಾಯಕ, ಶಾಸಕರಾದ ಬಸನಗೌಡ ಬ್ಯಾಾಗವಾಟ, ಗಂಗಾಧರ ನಾಯಕ, ರಾಜಾ ವೆಂಕಟಪ್ಪ ನಾಯಕ, ಮುಖಂಡರಾದ ದೊಡ್ಡಬಸ್ಸಪ್ಪಗೌಡ ಭೋಗಾವತಿ, ಬಸನಗೌಡ ಮಾಲಿ ಪಾಟೀಲ್, ನಯೋಪ್ರಾಾ ಅಧ್ಯಕ್ಷ ಅಬ್ದುಲ್ ಗರ್ೂ ಸಾಬ್, ಎಂ.ಈರಣ್ಣ, ಎ.ಬಿ.ಉಪ್ಪಳಮಠ ವಕೀಲರು, ಮಲ್ಲನಗೌಡ ನಕ್ಕುಂದಿ, ಎಸ್.ತಿಮ್ಮಾಾರೆಡ್ಡಿಿ ಭೋಗಾವತಿ, ವೀರಭದ್ರಗೌಡ ಭೋಗಾವತಿ, ಬಾಲಸ್ವಾಾಮಿ ಕೊಡ್ಲಿಿ, ಶರಣಪ್ಪ ನಾಯಕ ಗುಡದಿನ್ನಿಿ, ಕಿರಿಲಿಂಗಪ್ಪ ಕವಿತಾಳ, ಗೋಪಾಲ್ ಕೃಷ್ಣಮೂರ್ತಿ ಅಮರೇಶ್ವರ ಕ್ಯಾಾಂಪ್, ಕೆ.ಬಸವಂತಪ್ಪ, ಹನುಮೇಶ ಮದ್ಲಾಾಪುರ, ಎಂ.ಮಲ್ಲಿಕಾರ್ಜುನಗೌಡ ಪೋತ್ನಾಾಳ್, ಚಂದ್ರಕಲಾಧರಸ್ವಾಾಮಿ, ಕಿಡಿಗಣಯ್ಯಸ್ವಾಾಮಿ, ಉಮೇಶ ಸಜ್ಜನ್, ಹನುಮಂತಪ್ಪ ನಾಯಕ ದೇವಿಪುರ ವಕೀಲರು, ಚಂದ್ರಶೇಖರ ಓತೂರು, ಶಿವರಾಜ ಜಾನೇಕಲ್, ಶಿವಕುಮಾರ ಸ್ವಾಾಮಿ ಕೊಟ್ನೆೆಕಲ್ ಸೇರಿದಂತೆ ಶ್ರೀ ಮಠದ ಅಪಾರ ಭಕ್ತ ಸಮೂಹ ತೀವೃ ಸಂತಾಪ ವ್ಯಕ್ತಪಡಿಸಿದ್ದಾರೆ.
ಅಡವಿ ಅಮರೇಶ್ವರ ಮಠದ ಶ್ರೀ ಶಾಂತಮಲ್ಲ ಮಹಾಸ್ವಾಾಮಿಗಳು ಲಿಂಗೈಕ್ಯ, ಇಂದು ಅಂತ್ಯಕ್ರಿಿಯೆ..

