ಸುದ್ದಿಮೂಲ ವಾರ್ತೆ ಬೀದರ, ನ.29:
ಮಾಹಿತಿ ಹಕ್ಕು ಕಾಯ್ದೆೆ ಅಡಿ ಅರ್ಜಿದಾರರಿಗೆ ಸಂಬಂಧಿಸಿದ ಅಧಿಕಾರಿಗಳು ನಿರ್ಲಕ್ಷ್ಯ ತೋರದೇ ಮಾಹಿತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ಮಾಹಿತಿ ಆಯುಕ್ತರಾದ ರುದ್ರಣ್ಣ ಹರ್ತಿಕೋಟೆ, ವೆಂಕಟಸಿಂಗ್ ಹಾಗೂ ರಾಜಶೇಖರ್ ಎಸ್ ಜಂಟಿಯಾಗಿ ತಿಳಿಸಿದ್ದಾರೆ.
ಶನಿವಾರ ಜಿಲ್ಲಾ ಪಂಚಾಯತ ಕಛೇರಿ ಸಭಾಂಗಣದಲ್ಲಿ ನಡೆದ ಮಾಹಿತಿ ಹಕ್ಕು ಕಾಯ್ದೆೆಯ ತರಬೇತಿ ಕಾರ್ಯಾಗಾರ ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು.
ಅರ್ಜಿದಾರ ಕೇಳಿರುವ ಮಾಹಿತಿಯನ್ನು ಸಂಬಂಧಪಟ್ಟ ಅಧಿಕಾರಿಗಳು 30 ದಿನಗಳಲ್ಲಿ ಮಾಹಿತಿ ನೀಡಬೇಕು. ಮಾಹಿತಿ ಹಕ್ಕು ಕೂಡ ಒಂದು ಮೂಲಭೂತ ಹಕ್ಕು ಆಗಿದೆ. 2005 ರಲ್ಲಿ ಮಾಹಿತಿ ಹಕ್ಕು ಕಾಯ್ದೆೆ ಜಾರಿಗೆ ತರಲಾಯಿತು. ರಾಜ್ಯದಲ್ಲಿ ಒಟ್ಟು ಇದುವರೆಗೆ 55143 ಅರ್ಜಿಗಳಲ್ಲಿ 36206 ಅರ್ಜಿ ವಿಲೇವಾರಿಯಾಗಿವೆ. ಉಳಿದ ಅರ್ಜಿಗಳು ಕೂಡ ವೇಗ ಗತಿಯಲ್ಲಿ ಇತ್ಯರ್ಥ ಗೊಳಿಸಲಾಗುವುದು ಎಂದು ರುದ್ರಣ್ಣ ಹರ್ತಿಕೋಟೆ ತಿಳಿಸಿದ್ದಾರೆ.
ಮಾಹಿತಿ ಹಕ್ಕು ಕಾಯ್ದೆೆಯಡಿ 10735 ಅರ್ಜಿ ಪ್ರಕರಣದಲ್ಲಿ 10.16 ಕೋಟಿ ದಂಡ ವಿಧಿಸಲಾಗಿದೆ. ಇದರಲ್ಲಿ 3084 ಅರ್ಜಿದಾರರು 2.70 ಕೋಟಿ ರೂಪಾಯಿ ಮಾತ್ರ ದಂಡ ಪಾವತಿಸಿದ್ದಾರೆ. ಬೀದರ ಜಿಲ್ಲೆಯಲ್ಲಿ 383 ಅರ್ಜಿ ಬಾಕಿ ಇವೆ. ಇದರಲ್ಲಿ ಗ್ರಾಾಮೀಣ ಅಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಇಲಾಖೆಯ 215, ನಗರಾಭಿವೃದ್ಧಿಿ ಪ್ರಾಾಧಿಕಾರದ 58, ಕಂದಾಯ ಇಲಾಖೆಯ 54, ಸಮಾಜ ಕಲ್ಯಾಾಣ ಇಲಾಖೆಯ 21 ಮತ್ತು ಇತರ ಇಲಾಖೆಗಳ 35 ಅರ್ಜಿ ಬಾಕಿ ಇವೆ ಎಂದು ತಿಳಿಸಿದ್ದಾರೆ.
ಕಲಬುರ್ಗಿ ಪೀಠದ ಆಯುಕ್ತ ಬಿ.ವೆಂಕಟಸಿಂಗ್ ಮಾತನಾಡಿ, ಪಿಡಿಒ ಗಳು ಸಮಯಕ್ಕೆೆ ಸರಿಯಾಗಿ ಮಾಹಿತಿ ನೀಡಿರದ ಕಾರಣ ಅರ್ಜಿ ಹಾಗೇ ಬಾಕಿ ಉಳಿಯುತ್ತಿಿವೆ. ಕೆಳ ಹಂತದಲ್ಲಿಯೇ ಅರ್ಜಿ ವಿಲೇವಾರಿ ಮಾಡುವುದು ಉತ್ತಮ ವಿಧಾನವಾಗಿದೆ ಎಂದರು.
ಬೆಂಗಳೂರು ಪೀಠದ ಮಾಹಿತಿ ಆಯುಕ್ತ ರಾಜಶೇಖರ ಎಸ್. ಮಾತನಾಡಿ, ಉತ್ತಮ ಆಡಳಿತ, ಪಾರದರ್ಶಕತೆ ಮತ್ತು ಭ್ರಷ್ಟಾಾಚಾರವನ್ನು ನಿಯಂತ್ರಿಿಸಲು ಮಾಹಿತಿ ಹಕ್ಕನ್ನು ಪರಿಚಯಿಸಲಾಗಿದೆ. ಅಧಿಕಾರಿಗಳು ತಮ್ಮ ಕಾಲ ಮಿತಿಯೊಳಗೆ ಕಾರ್ಯ ನಿರ್ವಹಿಸುವುದು ಹಾಗೂ ಸಾರ್ವಜನಿಕರ ಹಿತಾಸಕ್ತಿಿ ಕಾಪಾಡುವುದಾಗಿದೆ. ಮಾಹಿತಿ ಹಕ್ಕು ಕಾಯ್ದೆೆ ಜಗತ್ತಿಿನಲ್ಲೇ ಅತಿ ಹೆಚ್ಚು ಬಳಿಕೆಯಲ್ಲಿರುವ ಕಾಯ್ದೆೆಯಾಗಿದೆ. ಮಾಹಿತಿ ಹಕ್ಕು ಕಾಯ್ದೆೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್ ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿಿತರಿದ್ದರು.
ಮಾಹಿತಿ ಹಕ್ಕು ಕಾರ್ಯಾಗಾರ : ಅರ್ಜಿದಾರರಿಗೆ ಮಾಹಿತಿ ನೀಡಲು ವಿಳಂಬ ಸಲ್ಲದು : ಆಯುಕ್ತರಿಂದ ಸೂಚನೆ

