ಸುದ್ದಿಮೂಲ ವಾರ್ತೆ ಹರಪನಹಳ್ಳಿ, ನ.30:
ಬಿಜೆಪಿ ರಾಜ್ಯಾಾಧ್ಯಕ್ಷ ವೈ ವಿಜಯೇಂದ್ರ ಕರೆಯ ಮೇರೆಗೆ ರಾಜ್ಯಾಾದ್ಯಂತ ಡಿಸೆಂಬರ್ 01 ರ ಸೋಮವಾರದಂದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ವೈ. ಶೇಖರಪ್ಪ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಿಕಾಗೋಷ್ಠಿಿ ನಡೆಸಿದ ಮುಖಂಡರು ರೈತ ವಿರೋಧಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಪಕ್ಷಾತೀತವಾಗಿ ಸಹಕರಿಸುವಂತೆ ತಾಲೂಕಿನ ಎಲ್ಲಾ ಸಂಘಟನೆಗಳ ಮುಖಂಡರ ಬೆಂಬಲಕ್ಕೆೆ ಮನವಿ ಮಾಡಿದರು.
ರೈತರ ಪರ ಮೆಕ್ಕೆೆಜೋಳ ಖರೀದಿ ಕೇಂದ್ರ ತಕ್ಷಣದಿಂದಲೇ ಆರಂಭವಾಗಬೇಕು ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ಖರೀದಿ ಮಾಡಬೇಕು ಕೇಂದ್ರ ತೆರೆದು ಸೂಕ್ತ ಬೆಲೆ ನೀಡಬೇಕು ಕೇಂದ್ರ ಸರ್ಕಾರ ನಿಗದಿ ಮಾಡಿರುವ 2400 ರೂ ಗಳಿಗೆ ರಾಜ್ಯ ಸರ್ಕಾರ 600 ಸೇರಿಸಿ ಒಟ್ಟು 3000 ಬೆಂಬಲ ಬೆಲೆ ನಿಗದಿ ಮಾಡಲೇಬೇಕು ಎಂದು ಆಗ್ರಹಿಸಿ ನಗರದ ಹರಿಹರ ಸರ್ಕಲ್ ನಿಂದ ಮಿನಿ ವಿಧಾನಸೌಧದ ವರೆಗೆ ಪ್ರತಿಭಟನೆ ರಾಲಿ ಮುಖಾಂತರ ಮಾಜಿ ಶಾಸಕ ಕರುಣಾಕರ ರೆಡ್ಡಿಿ ಅವರ ನೇತೃತ್ವದಲ್ಲಿ ತಹಸೀಲ್ದಾಾರರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಅಖಿಲ ಭಾರತ ಕಿಸಾನ್ ಸಭಾದ ಹೊಸಹಳ್ಳಿಿ ಮಲ್ಲೇಶ್ ಮಾತನಾಡಿ. ಕಾಲಿಗೆ ಹಾಕುವ ಪಾದರಕ್ಷೆಗಳ ಬೆಲೆಗಿಂತಲೂ ಹೀನವಾಗಿದೆ ರೈತರ ಮತ್ತು ಅವರ ಬೆಳೆದ ಬೆಳೆಯ ಪರಿಸ್ಥಿಿತಿ ಅತಿ ತುರ್ತಾಗಿ ಖರೀದಿ ಕೇಂದ್ರ ತೆರೆದು ಸೂಕ್ತ ಬೆಲೆ ನಿಗದಿ ಮಾಡದಿದ್ದಲ್ಲಿ ಹೋರಾಟ ತೀವ್ರ ಸ್ವರೂಪ ಪಡೆಯುತ್ತದೆ. ನ್ಯಾಾಯ ಸಿಗುವವರೆಗೂ ಹೋರಾಟ ಮುಂದುವರಿಸುತ್ತೇವೆ ಎಂದರು.
ಮುಖಂಡ ಆರ್ ಲೋಕೇಶ್ ಮಾತನಾಡಿ. ರೈತರು ಬೀದಿಗೆ ಬರಲು ರಾಜ್ಯ ಸರ್ಕಾರದ ನಿಲುವೇ ಕಾರಣ ರೈತರ ಹೀನಾಯ ಬದುಕಿಗೆ ನೇರ ಹೊಣೆ ರಾಜ್ಯ ಸರ್ಕಾರವೇ ಆಗಲಿದೆ. ರಾಜ್ಯಾಾದ್ಯಂತ 224 ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಯಲಿದೆ. ತಾಲೂಕಿನಾದ್ಯಾಾಂತ ರೈತರು, ಸಂಘಟನೆಗಳ ಮುಖಂಡರು, ಹೋರಾಟಗಾರರು ಭಾಗವಹಿಸಿ ಯಶಸ್ವಿಿ ಗೊಳಿಸಲು ಮನವಿ ಮಾಡಿದರು. ಎರಡು ಸಾವಿರ ಜನ ಹೋರಾಟಗಾರರು ಸೇರುವ ಅಂದಾಜು ಇದೆ ಎಂದರು.
ಹೋರಾಟಗಾರ ಗುಡಿಹಳ್ಳಿಿ ಹಾಲೇಶ್ ಮಾತನಾಡಿ ರಾಜ್ಯ ಸರ್ಕಾರದಲ್ಲಿ ಕುರ್ಚಿ ಕಿತ್ತಾಾಟ ಜೋರಾಗಿದ್ದು ಸಿ ಎಂ, ಡಿ ಸಿ ಎಂ ಕುರ್ಚಿಗಾಗಿ ಕಿತ್ತಾಾಡುತ್ತಿಿದ್ದಾರೆ ರೈತರ ಗೋಳು ಕೇಳುವರು ಯಾರು ಇಲ್ಲ, ರೈತ ಬೆಳೆದ ಬೆಲೆಗೆ ನ್ಯಾಾಯ ರೀತಿ ಬೆಲೆ ಇಲ್ಲದಂತಾಗಿದೆ, ಅಕಾಲಿಕ ಮಳೆಯಿಂದ ರೈತರು ಈಗಾಗಲೇ ನಷ್ಟದಲ್ಲಿದ್ದು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದಿರುವುದು ಸಂಕಷ್ಟ ತಂದು ಕೊಟ್ಟಿಿದೆ. ಕೂಡಲೇ ರೈತರಿಗೆ ಬೆಂಬಲ ಬೆಲೆ ಮೆಕ್ಕೆೆಜೋಳ ಖರೀದಿ ಕೇಂದ್ರ. ಮತ್ತು ಬೆಳೆ ಪರಿಹಾರ ನೀಡಬೇಕು ಎಂದರು.
ಪತ್ರಿಿಕಾಗೋಷ್ಠಿಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಬಸವನಗೌಡ, ಗಂಗಾನಾಯ್ಕ್, ತಿಮ್ಮಣ್ಣ, ಪ್ರಧಾನ ಕಾರ್ಯದರ್ಶಿ ಭಾಗಳಿ ಸಿದ್ದೇಶ್, ಮಾಧ್ಯಮ ಸಲಹೆಗಾರ ಬಸವರಾಜ್ ಕೆ, ಮಾಜಿ ಪುರಸಭೆ ಅಧ್ಯಕ್ಷ ಮಾಬು ಸಾಬ್, ಪುರಸಭಾ ಸದಸ್ಯರಾದ ಕಿರಣ್ ಶಾನಬೋಗ್, ಜಾವೇದ್. ಕೌಟಿ ವಾಗಿಶ್ ಮುಖಂಡರಾದ ಪ್ರಸನ್ನ ಮಲ್ಲೇಶ್, ಮಹೇಶ್ ಪೂರ್ಜಾ ಭೀಮವಾದ ಸುಭಾಷ್. ಹನುಮಂತಪ್ಪ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.
ಇಂದು ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗೆ ಬಿಜೆಪಿಯಿಂದ ಪ್ರತಿಭಟನೆ

