ಸುದ್ದಿಮೂಲ ವಾರ್ತೆ ಬಳಗಾನೂರು, ನ.29:
ಪಟ್ಟಣದ ಶ್ರೀ ವೀರಭದ್ರ ದೇವರ ಕಾರ್ತಿಕ ಮಹೋತ್ಸವ ಹಾಗೂ ಮಹಾರಥೋತ್ಸವ ಡಿ. 1 ರಂದು ಸೋಮವಾರ ಸಾಯಂಕಾಲ ಜರಗುವುದು.
ಡಿ. 1 ಸೋಮವಾರ ಬ್ರಾಾಹ್ಮೀಮೂಹೂರ್ತದಲ್ಲಿ ರುದ್ರಾಾಭಿಷೇಕ ಸಹಸ್ರ ಬಿಲ್ವಾಾರ್ಚನೆ ಪ್ರಸಾದಿಮಠದ ಶ್ರೀಬಸವಲಿಂಗಸ್ವಾಾಮಿಗಳ ಪೌರೋಹಿತ್ಯದಲ್ಲಿ ಜರುಗುವವು. ನಂತರ ಕಳಸದವರು, ವೀರಗಾಸೆ ನಂದಿಕೋಲು ಪಲ್ಲಕ್ಕಿಿಸಹಿತ ಗಂಗಾಸ್ಥಳಕ್ಕೆೆ ಹೊರಡುವ ಪಲ್ಲಕ್ಕಿಿಮಹೋತ್ಸವ, ನಂತರ ಬೆಳಿಗ್ಗೆೆ 8.30ಕ್ಕೆೆ ಅಗ್ನಿಿಕುಂಡ ನೆರವೇರಿಸಲಾಗುವುದು. ಸದ್ಭಕ್ತರಿಗೆ ಮಹಾಪ್ರಸಾದ ವಿತರಣೆ ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವ ಜರಗುವುದು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಾಮಗಳ ಸದ್ಭಕ್ತರು ಹರಗುರುಚರ ಮೂರ್ತಿಗಳು, ಜನಪ್ರತಿನಿಧಿಗಳು ಮತ್ತಿಿತರರು ಪಾಲ್ಗೊೊಳ್ಳಲಿದ್ದಾಾರೆ.
ಬಳಗಾನೂರು: ಶ್ರೀವೀರಭದ್ರ ದೇವರ ಕಾರ್ತಿಕ ರಥೋತ್ಸವ ಇಂದು

