ಸುದ್ದಿಮೂಲ ವಾರ್ತೆ ಕವಿತಾಳ, ನ.30:
ಬೆಳಗಾವಿ ರಾಯಚೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿಿರುವ ಸಮೀಪದ ಅಮೀನಗಡ, ವಟಗಲ್ ಗ್ರಾಾಮಗಳ ವ್ಯಾಾಪ್ತಿಿಯ ಭೂ ನಿರಾಶ್ರಿತ ರೈತರಿಗೆ ಸೂಕ್ತ ಪರಿಹಾರ ಸಿಕ್ಕಿಿಲ್ಲ ಎಂದು ಆರೋಪಿಸಿದ ರೈತರು ಅಧಿಕಾರಿಗಳೊಂದಿಗೆ ವಾಗ್ವಾಾದ ನಡೆಸಿದರು.
ಕಾಮಗಾರಿ ಸ್ಥಳಕ್ಕೆೆ ಶನಿವಾರ ಭೇಟಿ ನೀಡಿದ ಹೆದ್ದಾರಿ ಭೂ ಸ್ವಾಾಧೀನ ಅಧಿಕಾರಿ ಗುರುಸಿದ್ದಯ್ಯ ಮತ್ತು ತಹಶೀಲ್ದಾಾರ ಮಂಜುನಾಥ ಭೋಗಾವತಿ ಅವರಿಗೆ ಮನವಿ ಮಾಡಿದ ರೈತರು ಸೂಕ್ತ ಪರಿಹಾರ ನೀಡಬೇಕು, ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ಒಂದು ಜಮೀನಿಗೆ ಒಂದು ಚದುರ ಮೀಟರ್ ಗೆ 50 ರಂತೆ ಪರಿಹಾರ ನಿಗದಿ ಮಾಡಿದ್ದರೆ ಅದರ ಪಕ್ಕದ ಜಮೀನಿಗೆ 37 ರಂತೆ ಚದರ ಅಡಿಗೆ ನಿಗದಿ ಮಾಡಲಾಗಿದೆ ಈ ತಾರತಮ್ಯ ಸರಿಯಲ್ಲ ಎಂದು ರೈತರು ಹುಚ್ಚರಡ್ಡಿಿ ಮತ್ತು ಹನುಮರಡ್ದೆೆಪ್ಪ ಮತ್ತಿಿತರರು ದೂರಿದರು.
ಹೊಲದಲ್ಲಿನ ಕೊಳವೆಬಾವಿ ರಸ್ತೆೆ ನಿರ್ಮಾಣ ಜಾಗದಲ್ಲಿ ಹೋಗಿದೆ ಹೀಗಾಗಿ ಪರಿಹಾರ ವಿತರತಣೆ ಮಾಡಬೇಕು ಎಂದು ರೈತ ಹಸೇನ್ ಸಾಬ್ ಆಗ್ರಹಿಸಿದರು.
ಭೂ ಸ್ವಾಾಧೀನ ಅಧಿಕಾರಿ ಗುರುಸಿದ್ದಯ್ಯ ಮತ್ತು ತಹಶೀಲ್ದಾಾರ ಮಂಜುನಾಥ ಭೋಗಾವತಿ ಮಾತನಾಡಿ ಹೆಚ್ಚಿಿನ ಪರಿಹಾರ ಪಡೆಯಲು ರೈತರಿಗೆ ಅವಕಾಶಗಳಿದ್ದು ನ್ಯಾಾಯಾಲಯದ ಮೂಲಕ ಪಡೆಯಬೇಕು ಮತ್ತು ಇದುವರೆಗೂ ಪರಿಹಾರ ಪಡೆಯದ ರೈತರು ನ್ಯಾಾಯಾಲಯದಲ್ಲಿ ಜಮಾ ಮಾಡಿದ ಪರಿಹಾರ ಮೊತ್ತವನ್ನು ಪಡೆಯಬೇಕು ಎಂದರು. ಈ ಸಂದರ್ಭದಲ್ಲಿ ಜಿ ಆರ್ ಎಲ್ ಕಂಪನಿಯ ಎ ಜಿ ಎಂ ಭೀಮರಾವ್,
ಸಿ ಪಿ ಐ ಶಶಿಕಾಂತ ಎಂ ಸಿರವಾರ, ಪಿ ಎಸ್ ಐ ವೆಂಕಟೇಶ ನಾಯಕ, ಗ್ರಾಾಮ ಆಡಳಿತಧಿಕಾರಿಗಳಾದ ರವಿಕುಮಾರ, ನಿಂಗಪ್ಪ ಇನ್ನಿಿತರರು ಇದ್ದರು.
ಭೂ ಪರಿಹಾರ ತಾರತಮ್ಯ ; ಅಧಿಕಾರಿಗಳೊಂದಿಗೆ ರೈತರ ವಾಗ್ವಾದ

