ಸುದ್ದಿಮೂಲ ವಾರ್ತೆ ಮಸ್ಕಿ, ನ.30:
ಶಿಕ್ಷಣ ಬಲಪಡಿಸುವಿಕೆ ಭಾಗವಾಗಿ ಗುಣಮಟ್ಟದ ಶಿಕ್ಷಣ ಹಾಗೂ ಹೆಣ್ಣುಮಕ್ಕಳು ಮಧ್ಯದಲ್ಲೈ ಶಾಲೆ ಬಿಡುವುದನ್ನು ತಪ್ಪಿಿಸುವ ನಿಟ್ಟಿಿನಲ್ಲಿರಾಜ್ಯ ಸರಕಾರ ಮಸ್ಕಿಿ ಕ್ಷೇತ್ರಕ್ಕೆೆ5ಸರ್ಕಾರಿ ಶಾಲೆಯನ್ನು ಕರ್ನಾಟಕ ಪಬ್ಲಿಿಕ್ ಸ್ಕೂಲ್ ಆಗಿಪರಿವರ್ತನೆ ಮಾಡಿದೆ.
ರಾಜ್ಯ ಸರಕಾರ 2018-19ರಲ್ಲಿಕರ್ನಾಟಕ ಪಬ್ಲಿಿಕ್ ಶಾಲೆ (ಕೆಪಿಎಸ್ ) ತೆರೆಯಲು ಆರಂಭಿಸಿತು. ಆರಂಭದಲ್ಲಿ ಮಸ್ಕಿಿ ಕ್ಷೇತ್ರದಲ್ಲಿ01ಕೆಪಿಎಸ್ ಶಾಲೆಗಳಿಗೆ ಮಂಜೂರು ನೀಡಿತ್ತು. ಈಗ ಹೊಸದಾಗಿ 05ಮಸ್ಕಿಿ ಕ್ಷೇತ್ರದಲ್ಲಿ ಕೆಪಿಎಸ್ ಗಳನ್ನು ಮಂಜೂರು ಮಾಡಿದೆ. ಡಿಸೆಂಬರ್ ನಿಂದಲೇ ಈ ಶಾಲೆಗಳ ದಾಖಲಾತಿ ಆರಂಭಗೊಳ್ಳಲಿದೆ. 2026ರ ಶೈಕ್ಷಣಿಕ ವರ್ಷದಿಂದ ಈ ಆರಂಭವಾಗಲಿವೆ.
ಪೂರ್ವ ಪ್ರಾಾಥಮಿಕ ಹಂತದಿಂದ ಪದವಿ ಪೂರ್ವ ಹಂತದವರೆಗೆ ವಿದ್ಯಾಾರ್ಥಿಗಳಿಗೆ ಒಂದೇ ಕ್ಯಾಾಂಪಸ್ ನಲ್ಲಿಅಧ್ಯಯನಕ್ಕೆೆಈ ಶಾಲೆಗಳು ಅವಕಾಶ ಕಲ್ಪಿಿಸುತ್ತವೆ. ದಾಖಲಾತಿ ಪ್ರಮಾಣ ಹೆಚ್ಚಿಿಸುವುದು ಜತೆಗೆ ಪಾಲಕರು ಖಾಸಗಿ ಶಿಕ್ಷಣ ವ್ಯಾಾಮೋಹದಿಂದ ಸರಕಾರಿ ಶಾಲೆಗಳನ್ನು ತಾತ್ಸಾಾರ ಮನೋಭಾವದಿಂದ ಕಾಣದಂತೆ ಗುಣಮಟ್ಟದ ಶಿಕ್ಷಣ ಒದಗಿಸುವ ಉದ್ದೈಶ ಹೊಂದಲಾಗಿದೆ.
ಕನಿಷ್ಠ 1,200 ವಿದ್ಯಾಾರ್ಥಿಗಳನ್ನು ಈ ಶಾಲೆಗಳು ಹೊಂದಿರಬೇಕಾಗುತ್ತದೆ. ರಾಜ್ಯ ಸರಕಾರದ ಅನುದಾನ ಹಾಗೂ ಏಷಿಯನ್ ಡೆವೆಲಪ್ ಮೆಂಟ್ ಬ್ಯಾಾಂಕ್ ಸಾಲ ಯೋಜನೆಯಡಿ ಪ್ರತಿ ಶಾಲೆಗೆ ಅವಶ್ಯವಿರುವ ಮೂಲ ಸೌಕರ್ಯಕ್ಕಾಾಗಿ 2 ರಿಂದ 4 ಕೋಟಿ ರೂ. ಖರ್ಚು ಮಾಡಲಾಗುತ್ತದೆ.
ದ್ವಿಿಭಾಷಾ ಮಾಧ್ಯಮ ಬೋಧನೆ
ಎಲ್ಕೆಜಿಯಿಂದ 5ನೇ ತರಗತಿವರೆಗೆ ಏಕರೀತಿಯ ಪಠ್ಯಪುಸ್ತಕ ಆಧರಿತ ದ್ವಿಿಭಾಷಾ ಮಾಧ್ಯಮದ ಬೋಧನೆ,6ರಿಂದ 10ನೇ ತರಗತಿವರೆಗೆ ಮಾಧ್ಯಮವಾರು ಏಕ ರೀತಿಯ ಪಠ್ಯಪುಸ್ತಕ ಆಧರಿತ ತರಗತಿ ಹಾಗೂ ಕ್ರಿಿಯಾಶೀಲ ಬೋಧನಾ ಪದ್ಧತಿ ಇರಲಿದೆ. 1ನೇ ತರಗತಿಯಿಂದಲೇ ಕಂಪ್ಯೂೂಟರ್ ಶಿಕ್ಷಣದ ಪರಿಚಯ, 6ನೇ ತರಗತಿಯಿಂದ ವೃತ್ತಿಿಪರ ಕೌಶಲ ಆಧರಿತ ಪಠ್ಯಕ್ರಮದ ಪರಿಚಯ, 8ನೇ ತರಗತಿಯಿಂದ ಮಂಡಳಿ ಪರೀಕ್ಷೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಂತಹ ಶಿಕ್ಷಣ ವ್ಯವಸ್ಥೆೆ ಇರಲಿದೆ.
ಎಲ್ಲೆಲ್ಲಿಮಂಜೂರು : ಸ ಹಿ ಪ್ರಾಾ ಕೇಂದ್ರ ಶಾಲೆ ಮಸ್ಕಿಿ,ಸ ಹಿ ಪ್ರಾಾ ಶಾ ವೀರಾಪುರ, ಚಿಕ್ಕ ಬೇರಿಗಿ , ತುರುವಿಹಾಳ, ಸಂತೆ ಕೆಲ್ಲೂರು.
ಮಸ್ಕಿ ಕ್ಷೇತ್ರಕ್ಕೆ 5ಸರ್ಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಸ್ಕೂಲ್ ಆಗಿ ಪರಿವರ್ತನೆ ಒಂದೇ ಸೂರಿನಡಿ ಪೂರ್ವ ಪ್ರಾಾಥಮಿಕದಿಂದ ಕಾಲೇಜ್ ವರೆಗೆ ಶಿಕ್ಷಣ

