ಸುದ್ದಿಮೂಲ ವಾರ್ತೆ ಕಲಬುರಗಿ, ನ.30:
ಸಮಾಜದ ಕಟ್ಟಕಡೆಯ ವ್ಯಕ್ತಿಿಗೂ ಉನ್ನತ ಸ್ಥಾಾನಕ್ಕೆೆ ಏರಲು ಅವಕಾಶ ದೊರೆಯುತ್ತಿಿರುವುದು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಎಂದು ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಹೇಳಿದರು.
ತಾಲೂಕಿನ ನಂದಿಕೂರ ಗ್ರಾಾಮದಲ್ಲಿ ಸಂವಿಧಾನ ಶಿಲ್ಪಿಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಪಂಚಲೋಹದ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿ, ಸಂವಿಧಾನದಿಂದ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿಿಯಾಗಿ ಉಳಿದಿದೆ ಎಂದರು.
ದೇಶದಲ್ಲಿ ಜಾತೀಯತೆ, ಅಸ್ಪಶ್ಯತೆ ತಾಂಡವಾಡುತ್ತಿಿತ್ತು. ಡಾ.ಅಂಬೇಡ್ಕರ್ ಅವರು ದೇಶಕ್ಕೆೆ ಸಂವಿಧಾನ ನೀಡಿದ ಪರಿಣಾಮ ದೇಶದಲ್ಲಿ ಸಮಾನತೆ ಬರಲು ಸಾಧ್ಯವಾಗಿದೆ. ಎಲ್ಲರಿಗೂ ಉನ್ನತ ಶಿಕ್ಷಣ, ಉದ್ಯೋೋಗ ಸಿಗುತ್ತಿಿದೆ. ಈ ಹಿಂದುಳಿದ ಕಲ್ಯಾಾಣ ಕರ್ನಾಟಕ ಭಾಗಕ್ಕೆೆ 371(ಜೆ) ಕಲಂ ವಿಶೇಷ ಸ್ಥಾಾನಮಾನ ಸಿಗಲು ಸಂವಿಧಾನ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೋರಾಟವೇ ಕಾರಣ ಎಂದು ಹೇಳಿದರು.
ಡಾ.ಅಂಬೇರ್ಡ್ಕ ಅವರ ಪ್ರತಿಮೆ ಸ್ಥಾಾಪನೆ ಮಾಡಿ, ಉದ್ಘಾಾಟನೆ ಮಾಡಬೇಕು ಎಂದು ಗ್ರಾಾಮಸ್ಥರು ಬೇಡಿಕೆಯಾಗಿತ್ತು. ಅದರಂತೆ 5 ಲಕ್ಷ ರೂ ಅನುದಾನ ಮೀಸಲಿಟ್ಟು ಪ್ರತಿಮೆ ಸ್ಥಾಾಪನೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಕಲಬುರಗಿ ದಕ್ಷಿಣ ಮತಕ್ಷೇತ್ರ ವ್ಯಾಾಪ್ತಿಿಯ ಇನ್ನುಳಿದ ಗ್ರಾಾಮಗಳಲ್ಲಿನ ಸಮುದಾಯದ ಭವನಗಳಿಗೂ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ವಿಧಾನ ಪರಿಷತ ಸದಸ್ಯ ತಿಪ್ಪಣ್ಣಪ್ಪ ಕಮಕನೂರ ಅವರು ಮಾತನಾಡಿ, ಡಾ.ಅಂಬೇಡ್ಕರ್ ಅವರ ತತ್ವ ಸಿದ್ಧಾಾಂತಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.
ಡಾ.ಅಂಬೇರ್ಡ್ಕರ್ ಅವರ ತತ್ವ ಸಿದ್ಧಾಾಂತಗಳನ್ನು ಡಾ.ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಿಯಾಂಕ್ ಖರ್ಗೆ ಅವರು ಮುನ್ನಡೆಸಿಕೊಂಡು ಹೋಗುತ್ತಿಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರಿಗೆ ಭಾರತ ರತ್ನ ದೊರೆಯಬೇಕು ಎಂದು ಪ್ರತಿಪಾದನೆ ಮಾಡಿದ್ದೇನೆ. ಅದಕ್ಕೆೆ ಹಲವರು ಬೆಂಬಲ ನೀಡಿದ್ದಾರೆ. ಇನ್ನೂ ಸಚಿವ ಪ್ರಿಿಯಾಂಕ್ ಖರ್ಗೆ ಹಿಂದುಳಿದ ವರ್ಗದ ಆಸ್ತಿಿಯಾಗಿದ್ದಾರೆ. ನನ್ನನ್ನು ವಿಧಾನ ಪರಿಷತ್ ಸದಸ್ಯನ್ನಾಾಗಿ ಮಾಡಿದ್ದಾರೆ. ಹಿಂದುಳಿದ ವರ್ಗ ಅವರಿಗೆ ಯಾವಾಗಲು ಬೆಂಬಲವಾಗಿರುತ್ತದೆ ಎಂದು ಹೇಳಿದರು.
ಇನ್ನೂ, ನೂತನವಾಗಿ ಸ್ಥಾಾಪನೆಯಾಗಿರುವ ಡಾ.ಅಂಬೇಡ್ಕರ್ ಪ್ರತಿಮೆ ಪಕ್ಕದಲ್ಲಿ ಗ್ರಂಥಾಲಯ ನಿರ್ಮಾಣ ಮಾಡುವುದಾದರೆ 5 ಲಕ್ಷ ರೂಪಾಯಿ ಅನುದಾನ ನೀಡುವುದಾಗಿ ತಿಪ್ಪಣ್ಣಪ್ಪ ಕಮಕನೂರ ಅವರು ಘೋಷಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ದಲಿತ ಮುಖಂಡ ಡಾ.ವಿಠಲ ದೊಡ್ಡಮನಿ ಅವರಿಗೆ ವಿಶೇಷವಾಗಿ ಸನ್ಮಾಾನಿಸಿ ಗೌರವಿಸಲಾಯಿತು. ಮುಖಂಡ ನೀಲಕಂಠರಾವ್ ಮೂಲಗೆ, ದಿನೇಶ್ ದೊಡ್ಡಮನಿ ಮಾತನಾಡಿದರು. ಪ್ರೊೊ.ಸಂಜಯ್ ಮಾಕಲ್ ವಿಶೇಷ ಉಪನ್ಯಾಾಸ ನೀಡಿದರು.
ಅಣದೂರ ಬುದ್ಧವಿಹಾರ ಪೂಜ್ಯ ಭಂತೆ ವರಜ್ಯೋೋತಿ, ಕಾಂಗ್ರೆೆಸ್ ಮುಖಂಡ ರಾಜಕುಮಾರ ಕಪನೂರ, ಎಚ್ ಕೆ ಇ ಸದಸ್ಯ ಡಾ. ಕಿರಣ್ ದೇಶಮುಖ್, ನಾಗಿಂದ್ರಪ್ಪ ಶೇರಿಕಾರ, ರಾಜೇಂದ್ರ ಕರೆಕಲ್, ಮಲ್ಲಣ್ಣಗೌಡ ಪೊಲೀಸಪಾಟೀಲ್, ಪವನಕುರ್ಮಾ ವಳಕೇರಿ, ಎಸ್ ಎಸ್ ತಾವಡೆ, ಶಾಮರಾಯಗೌಡ ಜಿ.ಪೊಲೀಸಪಾಟೀಲ್, ಶಾಮರಾಯ ಡಿ. ಪೊಲೀಸಪಾಟೀಲ್, ಸಂಗಮೇಶ ನಾಗನಹಳ್ಳಿಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಲಕ್ಷ್ಮಣ ಶೃಂಗೇರಿ, ಲಿಂಗರಾಜ್ ಕಣ್ಣಿಿ, ಅಶೋಕ್ ವೀರನಾಯಕ್, ಸುರೇಶ ಹಾದಿಮನಿ, ನಂದಿಕೂರ ಗ್ರಾಾಪಂ ಅಧ್ಯಕ್ಷ ಚಂದ್ರಕಾಂತ್ ಸೀತನೂರ್, ಉಪಾಧ್ಯಕ್ಷೆ ಲಕ್ಷ್ಮಿಿ ಕುಪೇಂದ್ರ ವರ್ಮಾ, ಸಹಾಯಕ ನಿರ್ದೇಶಕ ಶಿವಶಂಕ್ರಯ್ಯ ಸ್ವಾಾಮಿ, ಲಕ್ಷ್ಮಣ ಪೂಜಾರಿ, ಸಿದ್ದು ಶಿರಸಗಿ, ದತ್ತು ಗುತ್ತೇದಾರ, ಸೂರ್ಯಕಾಂತ್ ಕಣ್ಣಿಿ, ಗುಂಡಪ್ಪ ರೋಷನ್, ಪಿಡಿಓ ಸಂದೀಪ್ ಗುತ್ತೇದಾರ ಇದ್ದರು.
ನಂದಿಕೂರ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಅನಾವರಣ ಸಂವಿಧಾನದಿಂದ ದೇಶದಲ್ಲಿ ಪ್ರಜಾಪ್ರಭುತ್ವ ಗಟ್ಟಿ : ಶಾಸಕ ಅಲ್ಲಮಪ್ರಭು ಪಾಟೀಲ್

