ಸುದ್ದಿಮೂಲ ವಾರ್ತೆ ಗುರುಮಠಕಲ, ನ.30:
ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ನೂತನ ಅಧ್ಯಕ್ಷರಾಗಿ ಆಯ್ಕೆೆಯಾದ ಶಿವಾನಂದ ಬೂದಿ ಅವರು ಪದಾಧಿಕಾರಿಗಳು ಹಾಗೂ ಸಮಾಜದ ಗಣ್ಯರೊಂದಿಗೆ ಶನಿವಾರ ಶಾಸಕ ಶರಣಗೌಡ ಕಂದಕೂರು ಅವರ ನಿವಾಸಕ್ಕೆೆ ಭೇಟಿ ನೀಡಿ ಗೌರವಪೂರ್ಣವಾಗಿ ಸನ್ಮಾಾನಿಸಿದರು.
ಈ ವೇಳೆ ಮಾತನಾಡಿದ ಅವರು ಕಂದಕೂರು ಕುಟುಂಬವು ಹಲವು ದಶಕಗಳಿಂದ ಗುರುಮಠಕಲ್ ವೀರಶೈವ ಸಮಾಜದ ಪರವಾಗಿ ಪ್ರತ್ಯಕ್ಷ-ಪರೋಕ್ಷವಾಗಿ ಅನನ್ಯ ಬೆಂಬಲ ನೀಡುತ್ತಿಿದೆ. ವೀರಭದ್ರೇೇಶ್ವರ ದೇವಸ್ಥಾಾನದಲ್ಲಿ ನವಮೂರ್ತಿಗಳ ಪ್ರತಿಷ್ಠಾಾಪನೆಗೆ ನೀಡಿದ ಸಂಪೂರ್ಣ ಕೊಡುಗೆ, ಕೊಡ್ಲಿಿಮಠದ ತಡೆಗೋಡೆ ನಿರ್ಮಾಣಕ್ಕೆೆ ಒದಗಿಸಿದ ಅನುದಾನ-ಇವು ಸಮಾಜದ ಅಭಿವೃದ್ಧಿಿಯತ್ತ ನೀಡಿದ ಅಮೂಲ್ಯ ಸಹಾಯಗಳು, ಎಂದು ಸ್ಮರಿಸಿದರು. ಸಮಾಜದ ಪ್ರಗತಿ, ಏಳ್ಗೆೆ ಮತ್ತು ಸಂಘಟನೆಯ ಬಲವರ್ಧನೆಗಾಗಿ ಶಾಸಕರ ನಿರಂತರ ಸಹಕಾರ ಅಗತ್ಯವಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಸಮಾಜದ ಪ್ರತಿನಿಧಿಗಳು ಮಾತನಾಡಿ, ನಿರ್ಮಾಣ ಹಂತದಲ್ಲಿರುವ ಸಮಾಜದ ಸಮುದಾಯ ಭವನದ ಪ್ರಗತಿಯನ್ನು ಶಾಸಕರಿಗೆ ವಿವರಿಸಿದರು. ಭವನದ ಮುಂದಿನ ಹಂತಗಳಿಗೆ ಅನುದಾನ ಮತ್ತು ಸಹಕಾರ ನೀಡುವಂತೆ ಮನವಿ ಪತ್ರವನ್ನು ಶಾಸಕರಿಗೆ ಸಲ್ಲಿಸಿದರು.
ಈ ಕುರಿತು ಪ್ರತಿಕ್ರಿಿಯಿಸಿದ ಶಾಸಕ ಶರಣಗೌಡ ಕಂದಕೂರು ಅವರು, ವೀರಶೈವ ಸಮಾಜದ ಅಭಿವೃದ್ಧಿಿ ಮತ್ತು ಕಲ್ಯಾಾಣಕ್ಕಾಾಗಿ ಸಾಧ್ಯವಾದ ಎಲ್ಲ ರೀತಿಯ ಸಹಕಾರ ನೀಡುವುದಕ್ಕೆೆ ನಾನು ಸದಾ ಬದ್ಧ. ಸಮಾಜದ ಬೇಡಿಕೆಗಳನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುತ್ತದೆ. ಸಮುದಾಯ ಭವನ ನಿರ್ಮಾಣದ ಅಗತ್ಯ ಯೋಜನೆಗಳಿಗೆ ಸರ್ಕಾರದಿಂದ ಸಹಾಯವನ್ನು ಒದಗಿಸಲು ಪ್ರಯತ್ನಿಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಈ ವೇಳೆ ವೀರಶೈವ ಸಮಾಜದ ಪದಾಧಿಕಾರಿಗಳು, ವಿವಿಧ ಘಟಕಗಳ ಮುಖಂಡರು, ಯುವಕರು ಹಾಗೂ ಅಕ್ಕನ ಬಳಗದ ಮಹಿಳೆಯರು ಹೆಚ್ಚಿಿನ ಸಂಖ್ಯೆೆಯಲ್ಲಿ ಭಾಗವಹಿಸಿದ್ದರು.
ವೀರಶೈವ ಸಮಾಜದ ನೂತನ ಅಧ್ಯಕ್ಷರಿಂದ ಶಾಸಕ ಶರಣಗೌಡ ಕಂದಕೂರಿಗೆ ಸನ್ಮಾನ

