ಸುದ್ದಿಮೂಲ ವಾರ್ತೆ ಕೊಪ್ಪಳ, ನ.30:
ಒಂದು ಸಣ್ಣ ಮುಳ್ಳು ಚುಚ್ಚಿಿದ್ರು ಕೂಡಾ ಜೀವ ಹೋದಂತೆ ಆಗುತ್ತದೆ. ಆದ್ರೆೆ ಆ ಗ್ರಾಾಮದಲ್ಲಿ ಮುಳ್ಳಿಿನ ರಾಶಿ ಮೇಲೆ ನೂರಾರು ಜನ್ರು ಎತ್ತರದ ಕಟ್ಟಡಗಳಿಂದ ಜಿಗಿಯುತ್ತಾಾರೆ. ಮುಳ್ಳಿಿನಲ್ಲಿಯೇ ಬಿದ್ದು ಒದ್ದಾಾಡುತ್ತಾಾರೆ. ಮುಳ್ಳು ಅಂದ್ರೆೆ ಇವತ್ತು ಆ ಗ್ರಾಾಮದ ಜನರಿಗೆ ಹೂವಿನ ರಾಶಿಯಿದ್ದಂತೆ. ಇಂತಹ ದೊಂದು ಮುಳ್ಳಿಿನ ಜಾತ್ರೆೆ, ಮುಳ್ಳಿಿನ ಮೇಲೆ ಬಿದ್ದು ಒದ್ದಾಾಡೋ ಜಾತ್ರೆೆ ನಡೆಯುತ್ತದೆ.
ಕೊಪ್ಪಳ ತಾಲೂಕಿನಲ್ಲಿ ಕಾರ್ತಿಕ ಮಾಸದಲ್ಲಿ ಅಲ್ಲಲ್ಲಿ ಬರಿಗಾಲಲ್ಲಿ ನಡೆದು ಕೊಂಡು ಮುಳ್ಳಿಿನ ಕಂಟಿಗಳನ್ನು ಜನರು ಹೊತ್ತು ತರುತ್ತಾಾರೆ. ದೇವಸ್ಥಾಾನದ ಎದುರಿನ ಕಟ್ಟಡದ ಮೇಲಿಂದ ಮುಳ್ಳಿಿನ ಮೇಲೆ ಹಾರೊ ಯುವಕರು, ಮೈಯೆಲ್ಲ ಗಾಯಗಳಾದ್ರೂ ಖುಷಿಯಾಗಿ ಜಾತ್ರೆೆಯನ್ನು ಮಾಡುತ್ತಾಾರೆ. ಇದು ಮುಳ್ಳಹರಕೆ ಜಾತ್ರೆೆಯಲ್ಲಿ ಕಂಡು ಬರುತ್ತಿಿರುವ ದೃಶ್ಯಗಳು. ಕೊಪ್ಪಳ ತಾಲೂಕಿನ ಲೇಬಗೇರಿ ಗ್ರಾಾಮದಲ್ಲಿ ಈ ವಿಶೇಷ ಜಾತ್ರೆೆ ಪ್ರತಿ ವರ್ಷದಂತೆ ಈ ವರ್ಷವೂ ನಡೆಯಿತು.
ಲೇಬಗೇರಿ ಗ್ರಾಾಮದ ಅಜ್ಜಪ್ಪನ ದೇವಸ್ಥಾಾನದ ಎದುರು ರಾಶಿ ಹಾಕ್ತಾಾರೆ. ಮುಳ್ಳಿಿನ ರಾಶಿ ಹಾಕ್ತಿಿದ್ದಂತೆ ಕಟ್ಟಡದ ಮೇಲೆ ಕುಳಿತಿದ್ದ ನೂರಾರು ಯುವಕರು ಮುಳ್ಳಿಿನ ರಾಶಿ ಮೇಲೆ ಮಂಗಗಳು ಜಿಗಿದಂತೆ ಜಿಗಿಯುತ್ತಾಾರೆ. ಮುಳ್ಳಿಿನ ಮೇಲೆ ಬಿದ್ದು ಒದ್ದಾಾಡುತ್ತಾಾರೆ. ಮುಳ್ಳಿಿನ ರಾಶಿ ಮೇಲೆ ಬಿದ್ದಿರುವ ಜನರನ್ನು ಅನೇಕರು ಅದೇ ಮುಳ್ಳಿಿನ ರಾಶಿ ಮೇಲೆ ಬರಿಗಾಲಲ್ಲಿಯೇ ಹತ್ತಿಿ ಅವರನ್ನು ಹೊರ ತೆಗೆಯುತ್ತಾಾರೆ. ಯಾರೊಬ್ಬರು ಚಪ್ಪಲಿ ಹಾಕೋದಿಲ್ಲಾಾ. ಯಾರೊಬ್ಬರು ಮೈಗೆ ಯಾವುದೇ ವಸ್ತುಗಳನ್ನು ಹಚ್ಚಿಿಕೊಳ್ಳದೆ, ಮುಳ್ಳಿಿನ ರಾಶಿ ಮೇಲೆ ನಡೆದು, ಬಿದ್ದು ತಮ್ಮ ಭಕ್ತಿಿಯನ್ನು ತೋರಿಸುತ್ತಾಾರೆ. ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಲೇಬಗೇರಿ ಗ್ರಾಾಮದಲ್ಲಿ ಮಾರುತೇಶ್ವರ ಅಜ್ಜಪ್ಪ ಎಂದೆ ಕರೆಯುವ ಈ ದೇವರಿಗೆ ಕಾರ್ತಿಕ ಮಾಸದ ಅಂಗವಾಗಿ ಅದ್ಧೂರಿ ಜಾತ್ರೆೆ ನಡೆಯುತ್ತದೆ.
ಈ ಜಾತ್ರೆೆಗೆ ಲೇಬಗೇರಿ ಸೇರಿದಂತೆ ಸುತ್ತ ಮುತ್ತಲಿನ ಹತ್ತಾಾರು ಹಳ್ಳಿಿಯ ಜನ ಬರ್ತಾರೆ. ಮುಂಜಾನೆಯಿಂದ ಮಾರುತೇಶ್ವರ ದೇವಸ್ಥಾಾನಕ್ಕೆೆ ಹೋಗಿ ಪೂಜೆ ಸಲ್ಲಿಸಿ, ಭಕ್ತಿಿಯಿಂದ ನಮಸ್ಕಾಾರ ಮಾಡುತ್ತಾಾರೆ. ಆದ್ರೆೆ ಲೇಬಗೇರಿ ಜಾತ್ರೆೆಯ ವಿಶೇಷ ಆರಂಭವಾಗೋದೇ ಸಂಜೆಗೆ. ಸಂಜೆಯಾಗುತ್ತಿಿದ್ದಂತೆ ಗ್ರಾಾಮದಲ್ಲಿ ಮೂರು ಕಡೆ ಮುಳ್ಳಿಿನ ರಾಶಿಯನ್ನು ಹಾಕಿ, ಆ ಮುಳ್ಳಿಿನ ರಾಶಿ ಮೇಲೆ ನೂರಾರು ಜನರು ಬೀಳುತ್ತಾಾರೆ.
ಇನ್ನು ಮುಂಜಾನೆ ಗ್ರಾಾಮದ ಹೊರವಲಯಕ್ಕೆೆ ಬರಿಗಾಲಲ್ಲಿ ನಡೆದುಕೊಂಡು ಹೋಗುವ ಜನರು, ಯಾವುದೇ ಅಸಗಳನ್ನು ಬಳಸದೆ ಕೇವಲ ಕಲ್ಲಿನಿಂದ ಮುಳ್ಳಿಿನ ಗಿಡಗಳನ್ನು ಕತ್ತರಿಸಿ ಗ್ರಾಾಮಕ್ಕೆೆ ತೆಗೆದುಕೊಂಡು ಬರ್ತಾರೆ. ಹೀಗೆ ಬಂದವರು ಗ್ರಾಾಮದಲ್ಲಿ ರಾಶಿ ಹಾಕ್ತಾಾರೆ. ಇದೇ ರಾಶಿ ಮೇಲೆ ನೂರಾರು ಜನ ಬಿದ್ದು ತಮ್ಮ ಭಕ್ತಿಿಯನ್ನು ಪ್ರದರ್ಶಿಸುತ್ತಾಾರೆ. ಈ ಪದ್ದತಿ ಪೂರ್ವಿಕ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಸೇವೆ ಮಾಡೋದ್ರಿಿಂದ ಗ್ರಾಾಮದ ಜನರಿಗೆ ಯಾವುದೆ ತೊಂದರೆ ಆಗಲ್ಲ, ಜೊತೆಗೆ ಬೇಡಿಕೊಂಡ ವರಗಳನ್ನ ಅಜ್ಜ ಪ್ಪ ಕೊಡುತ್ತಾಾನೆ ಅನ್ನೋೋ ನಂಭಿಕೆ, ಜೊತೆಗೆ ಈ ಜಾತ್ರೆೆಯ ದಿನ ಅಲ್ಲಿ ಹಾಕುವ ಮುಳ್ಳುಗಳೆಲ್ಲ ಹೂವುಗಳಾಗಿರತ್ತನೆ ಅನ್ನೋೋದು ಈ ಗ್ರಾಾಮಸ್ಥರ ನಂಬಿಕೆ.
ಇನ್ನು ಇಂತಹದೊಂದು ಆಚರಣೆ ಯಾಕೆ ಯಾವಾಗ ಶುರುವಾಯ್ತು ಅನ್ನೋೋದರ ಬಗ್ಗೆೆ ಯಾರಿಗೂ ಸ್ಪಷ್ಟ ಮಾಹಿತಿ ಗೊತ್ತಿಿಲ್ಲಾಾ. ಪೂರ್ವಿಕರು ಆಚರಣೆ ಮಾಡ್ತಾಾ ಬಂದಿದ್ದಾಾರೆ. ನಾವು ಆಚರಣೆ ಮಾಡಿಕೊಂಡು ಹೋಗ್ತೇವೆ. ಇದನ್ನ ಮಾಡಿದ್ರೆೆ ನಮಗೆ ಒಳ್ಳೆೆಯದಾಗತ್ತೆೆ ಅನ್ನೋೋ ನಂಬಿಕೆಯಲ್ಲಿಯೇ ಆಚರಣೆ ಮುಂದುವರೆದಿ. ರಾಜ್ಯದ ಅನೇಕ ವಿಶಿಷ್ಟ ಜಾತ್ರೆೆಗಳಲ್ಲಿ ಈ ಲೇಬಗೇರಿ ಜಾತ್ರೆೆ ಮಾತ್ರ ಇನ್ನೂ ವಿಶಿಷ್ಟವಾಗಿದೆ.
ಇಷ್ಟಾರ್ಥ ಸಿದ್ದಿಗಾಗಿ ಮುಳ್ಳು ಹರಕೆ, ಲೇಬಗೇರಿಯಲ್ಲಿ ನಡೆದ ಮುಳ್ಳು ಜಾತ್ರೆ

