ಸುದ್ದಿಮೂಲ ವಾರ್ತೆ ಯಾದಗಿರಿ, ನ.30:
ಡಿ.25 ರಂದು ಅತ್ಯಂತ ಸಡಗರದಿಂದ ಆಚರಿಸುವ ಕ್ರಿಿಸ್ ಮಸ್ ಹಬ್ಬದಂಗವಾಗಿ ಅದರ ಆಗಮನದ ಮೆರವಣಿಗೆಯನ್ನು ನಗರದಲ್ಲಿ ಭಾನುವಾರ ಅಪಾರ ಜನರ ಜಯಘೋಷದ ಸಂಭ್ರಮದಿಂದ ನಡೆಯಿತು.
ನಗರದ ಸುಭಾಶ್ಚಂದ್ರ ಬೋಸ್ ವೃತ್ತದಲ್ಲಿ ಕ್ರಿಿಸ್ಮಸ್ ಆಗಮನದ ಮರೆವಣಿಗೆಗೆ ಕೈಸ್ತ ಸಮುದಾಯದವರು ತಾತಾ ಸಿಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ ಸಹಯೋಗದೊಂದಿಗೆ ಅದ್ದೂರಿ ಪಾದಯಾತ್ರೆೆಯ ಮೂಲಕ ಮೆರವಣಿಗೆ ಆರಂಭಿಸಿದರು.
ಮೆಥೋಡಿಸ್ಟ್ ಜಿಲ್ಲಾ ಮೇಲ್ವಿಿಚಾರಕ ರೆ. ಎಸ್. ನಂದಕುಮಾರ, ಸಹಾಯಕ ಸಭಾ ಪಾಲಕರೆ. ಜಾನವೆಸ್ಲಿಿ ಹಾಗೂ ತಾತಾ ಸಿಮಂಡ್ಸ್ ಮೆಮೋರಿಯಲ್ ಮೆಥೋಡಿಸ್ಟ್ ಚರ್ಚ್ ನ ಪಾಸ್ಟರ್ ರೆ. ಅರುಣಕುಮಾರ ಅವರ ನೇತೃತ್ವದಲ್ಲಿ ಶಾಸಿ ವೃತ್ತ, ಹೊಸ ಬಸ್ ನಿಲ್ದಾಾಣ, ಹೊಸಳ್ಳಿಿ ಕ್ರಾಾಸ್ ಮೂಲಕ ತಾತಾ ಸಿಮೆಂಡ್ಸ್ ಚರ್ಚ್ಗೆ ಆಗಮಿಸಿತು.
ಈ ಸಂದರ್ಭದಲ್ಲಿ ವಿಜಯ ರತ್ನ, ಉದಯಕುಮಾರ ದೊಡ್ಮಮನಿ, ಶ್ಯಾಾಮಸನ್ ಮಾಳಿಕೇರಿ, ಸುರಪುರ್ ಚರ್ಚನ ಜಿಲ್ಲಾ ಮೇಲ್ವಿಿಚಾರಕರೆ. ಆನಂದ, ದೇವ ಪುತ್ರ ಮಾಳಿಕೇರಿ, ಸುಭಾಶ ಕನ್ನಡ, ಆನಂದ ಡಿಕೆ. ಸುನಾಥ ರೆಡ್ಡಿಿ, ಸೇರಿದಂತೆ ಇತರರಿದ್ದರು.
ಕ್ರಿಸ್ ಮಸ್ ಹಬ್ಬದ ಆಗಮನಕ್ಕೆ ಸಂಭ್ರಮದ ಸ್ವಾಗತ : ಭವ್ಯ ಮೆರವಣಿಗೆ

