ಸುದ್ದಿಮೂಲ ವಾರ್ತೆ ಸಿಂಧನೂರು, ನ.30:
ಸಿಂಧನೂರು ನಗರದ ವಾರ್ಡ್-14 ವಿದ್ಯಾಾನಗರದ ನಿವಾಸಿ, ವೀರಶೈವ ಸಮಾಜದ ಮುಖಂಡ ಶರಣಯ್ಯ ಸ್ವಾಾಮಿ ಶಾಸಿಮಠ ಕಂದಗಲ್ (48) ಅವರು ಪುತ್ರನ ಮದುವೆಗೆ ಕೆಲ ಗಂಟೆಗಳ ಮುಂಚೆ ಹೃದಯಾಘಾತದಿಂದ ಸಾವನ್ನಪ್ಪಿಿದ್ದು, ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿತು.
ಭಾನುವಾರ ಬೆಳಗಿನ ಜಾವ 4 ಗಂಟೆಗೆ ಪುತ್ರನ ವಿವಾಹ ನಿಗದಿಯಾಗಿತ್ತು. ಬೆಳಗಿನ ಜಾವ 3 ಗಂಟೆಗೆ ಏಕಾಏಕಿ ರಕ್ತದೊತ್ತಡ ಕಡಿಮೆಯಾಗಿ ತೀವ್ರ ಹೃದಯಾಘಾತಕ್ಕೆೆ ಒಳಗಾಗಿ ಮೃತಪಟ್ಟಿಿದ್ದಾಾರೆ. ಜೈನ್ ಕಲ್ಯಾಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ವಿವಾಹ ಕಾರ್ಯದಲ್ಲಿ ಭಾಗವಹಿಸಲು ಬಂದಿದ್ದ ಸಂಬಂಧಿಕರು, ಬಂಧುಗಳು, ಸ್ನೇಹಿತರು, ಹಿತೈಷಿಗಳು ಶರಣಯ್ಯ ಸ್ವಾಾಮಿ ಅವರ ಅಂತಿಮ ಸಂಸ್ಕಾಾರದಲ್ಲಿ ಭಾಗವ ಹಿಸುವಂತಾಯಿತು. ಇದು ಎಂತಹ ದುರ್ವಿಧಿಎಂದು ಅಂತಿಮ ಸಂಸ್ಕಾಾರ ದಲ್ಲಿ ಭಾಗವಹಿಸಲು ಬಂದಿದ್ದ ಹಲವರ ನೋವಿನ ನುಡಿಗಳಾಗಿದ್ದವು.
ಪುತ್ರನ ಮದುವೆ ಸಂಭ್ರಮದಲ್ಲಿದ್ದಾಗಲೇ ಹೃದಯಾಘಾತದಿಂದ ಸಾವು

