ಸುದ್ದಿಮೂಲ ವಾರ್ತೆ ಕವಿತಾಳ, ನ.30:
ದಾಸ ಶ್ರೇೇಷ್ಠ ಕನಕದಾಸರ ಮೂರ್ತಿ ಪ್ರತಿಷ್ಠಾಾಪನೆ ಮಾಡುವುದು ಮುಂದಿನ ಪೀಳಿಗೆಗೆ ಅವರ ತತ್ವಗಳನ್ನು ತಿಳಿಸುವುದಕ್ಕೆೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಬೋಸರಾಜು ಹೇಳಿದರು.
ಪಟ್ಟಣದಲ್ಲಿ ಭಾನುವಾರ ಹಮ್ಮಿಿಕೊಂಡಿದ್ದ ಕನಕ ದಾಸರ 538 ನೇ ಜಯಂತಿ ಅಂಗವಾಗಿ ಮೂರ್ತಿ ಪ್ರತಿಷ್ಠಾಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಚಿವರು ಮಾತನಾಡಿದರು.
ನಾವೆಲ್ಲರೂ ಒಂದೆ ಎನ್ನುವ ಕನಕ ದಾಸರ ತತ್ವದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಕೊಳ್ಳಬೇಕು. ಶಿವಯೋಗಿ ಶಿವಪ್ಪ ತಾತನ ಮಠದ ಅಭಿವೃದ್ಧಿಿಗೆ 50 ಲಕ್ಷ ಅನುದಾನ ನೀಡಲಾಗಿದೆ ಆದಷ್ಟು ಬೇಗನೆ ಕಾಮಗಾರಿ ಪ್ರಾಾರಂಭ ಮಾಡಲಾಗುವುದು ಎಂದರು.
ಭಕ್ತ ಕನಕ ದಾಸರ ಮೂರ್ತಿ ಉದ್ಘಾಾಟನೆ ಮಾಡಿದ ಮಾಜಿ ಸಂಸದ ಕೆ ವಿರೂಪಾಕ್ಷಪ್ಪ ಅವರು ಮಾತನಾಡಿ ಕುಟುಂಬವನ್ನು ಸರ್ವಸ್ವವನ್ನೂ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆೆಗೊಂಡು ಎಲ್ಲವನ್ನೂ ತ್ಯಜಿಸಿ ವ್ಯಾಾಸರಾಯರ ಶಿಷ್ಯನಾಗಿ ದಾಸತ್ವ ಸ್ವೀಕರಿಸಿದರು, ಮಹಾನ್ ಸಾಹಿತ್ಯರಚಿಸಿ ಹಾಡಿದರು. ಕನಕ ದಾಸರು ಭಾವಚಿತ್ರವನ್ನು ಪ್ರತಿಯೊಬ್ಬರೂ ಮನೆಯಲ್ಲಿ ಹಾಕಿ ಪೂಜಿಸ ಬೇಕು ಕೇವಲ ಮೆರವಣಿಗೆಗೆ ಜಯಂತಿಗೆ ಸೀಮಿತ ವಾಗಬಾರದು, ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಿದಾಗ ಮಾತ್ರ ಸಮಾಜ ಅಭಿವೃದ್ಧಿಿ ಹೊಂದಲು ಸಾಧ್ಯವಾಗುತ್ತದೆ ಎಂದರು.
ಮಾಜಿ ಸಚಿವ ಶಿವನಗೌಡ ನಾಯಕ ಅವರು ಮಾತನಾಡಿ, ಹಾಲುಮತ ಮತ್ತು ವಾಲ್ಮೀಕಿ ಸಮಾಜಕ್ಕೆೆ ತನ್ನದೇ ಆದ ಇತಿಹಾಸ ಇದೆ ಹೀಗೆ ಅಣ್ಣ ತಮ್ಮಂದಿರಂತೆ ಇರೋಣ ಎಂದರು.
ಶಾಸಕ ಜಿ. ಹಂಪಯ್ಯ ನಾಯಕ, ಕರ್ನಾಟಕ ಪ್ರದೇಶ ಕುರಬರ ಸಂಘದ ರಾಜ್ಯ ಅಧ್ಯಕ್ಷ ಎಂ ಈರಣ್ಣ, ನಿರೂಪಾದೆಪ್ಪ ವಕೀಲ ಸಿಂಧನೂರು ಮಾತನಾಡಿದರು. ದಿವ್ಯ ಸಾನಿಧ್ಯ ವಹಿಸಿದ್ದ ಕನಕ ಗುರುಪೀಠ ತಿಂತಿಣಿ ಬ್ರಿಿಡ್ಜ್ ಮಠದ ಬೀರಲಿಂಗೇಶ್ವರ ಸ್ವಾಾಮಿಗಳು ಮಾತನಾಡಿದರು. ನಾಗಯ್ಯ ತಾತ ಗುರುವಿನ ಜಾಲಹಳ್ಳಿಿ, ಸದಾಶಿವ ತಾತ ಮುಂಡರಗಿ, ಲಿಂಗಣ್ಣ ಪೂಜಾರಿ ಬಳಗಾನೂರು, ಶಿವಶಂಕರಪ್ಪ ಪೂಜಾರಿ ಪಾತಾಪುರ, ಕರಿಯಣ್ಣ ಜಡೆ ಪೂಜಾರಿ ಮತ್ತು ಶಿವಣ್ಣ ಪೂಜಾರಿ ಹಣಗಿ ಅವರು ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿದರು.
ಶಿವಯೋಗಿ ಶಿವಪ್ಪ ತಾತನ ಮಠದಿಂದ ಕಲ್ಮಠ, ಸಂತೆ ಬಜಾರ ಅಂಬೇಡ್ಕರ್ ವೃತ್ತ ಸೇರಿದಂತೆ ಪ್ರಮುಖ ರಸ್ತೆೆಗಳ ಮೂಲಕ ಕುಂಭ, ಕಳಸ, ಡೊಳ್ಳು ವಾದ್ಯಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಗಂಗಾಧರ ನಾಯಕ, ಕರ್ನಾಟಕ ಪ್ರದೇಶ ಕುರುಬರ ಸಂಘದ ಜಿಲ್ಲಾ ಅಧ್ಯಕ್ಷ ಬಸವಂತಪ್ಪ, ಮಲ್ಲಿಕಾರ್ಜುನ ಜಕ್ಕಲದಿನ್ನಿಿ, ಶಿವಣ್ಣ ವಕೀಲ, ಯಮನಪ್ಪ ದಿನ್ನಿಿ, ಮಾಳಪ್ಪ ತೋಳ, ಕಿರಿಲಿಂಗಪ್ಪ, ಬಸವರಾಜ ಪಾಟೀಲ್ ಡೋಣಮರಡಿ, ಸತ್ಯನಾರಾಯಣ ವಕೀಲ, ಹನುಮಂತಪ್ಪ ದಿನ್ನಿಿ, ಕರಿಯಪ್ಪ ಹಾಲಾಪುರು, ಗಂಗಪ್ಪ ದಿನ್ನಿಿ, ಬಿ ಎ ಕರೀಂ ಸಾಬ್, ಸಿದ್ದಪ್ಪ ದಡ್ಡೆೆಳ್, ಕರಿಯಪ್ಪ, ಯಂಕಪ್ಪ ತಪ್ಪಲದೊಡ್ಡಿಿ, ಕರಿಯಪ್ಪ ದಿನ್ನಿಿ, ನಿಂಗಪ್ಪ ತೋಳ, ಶಿವನಪ್ಪ ದಿನ್ನಿಿ, ಅಯ್ಯಪ್ಪ ತೋಳ, ಯಲ್ಲಲಿಂಗ ತೋಳ, ಮೌನೇಶ ಪೂಜಾರಿ, ಮೌನೇಶ ಹಿರೇಕುರಬರು ಮತ್ತು ಸಮಾಜದ ಹಿರಿಯ ಮುಖಂಡರು ಹಾಗೂ ಯುವಕರು ಇನ್ನಿಿತರರು ಉಪಸ್ಥಿಿತರಿದ್ದರು. ಶಿವರಾಜ ಪಾಟೀಲ್ ಡೋಣಮರಡಿ ನಿರೂಪಣೆ ಮಾಡಿದರು.
ಮುಂದಿನ ಪೀಳಿಗೆ ಕನಕ ದಾಸರ ತತ್ವಾದರ್ಶ ಅನುಸರಿಸಲು ಮೂರ್ತಿ ಪ್ರತಿಷ್ಠಾಪನೆ – ಬೋಸರಾಜು

