ಸುದ್ದಿಮೂಲ ವಾರ್ತೆ ಮಾನ್ವಿ, ನ.30:
ಮಾನ್ವಿಿ ತಾಲೂಕಿನ ಆಲ್ದಾಾಳ್ ಗ್ರಾಾಮದಲ್ಲಿ ರವಿವಾರ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇೇಶ್ವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಬೆಳಿಗ್ಗೆೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರಸ್ವಾಾಮಿಗೆ ಮಹಾರುದ್ರಭಿಷೇಕ ಪೂಜೆ, ಹಾಗೂ ಸಹಸ್ರ ಬಿಲ್ವಾಾರ್ಚನೆ, ಮಹಾಮಂಗಳರತಿ ನೇರವೇರಿಸಲಾಯಿತು.
ಗೋಪುರಕ್ಕೆೆ ಮತ್ತು ರಥಕ್ಕೆೆ ಕಳಸರೋಹಣ ಹಾಗೂ ಹೂವಿನ ಅಲಂಕಾರ ನಡೆಸಿ ಸಂಜೆ ಶ್ರೀ ಭದ್ರಕಾಳಿ ಶ್ರೀ ವೀರಭದ್ರೇಶ್ವರ ಸ್ವಾಾಮಿಯ ಉತ್ಸವ ಮೂರ್ತಿಯನ್ನು, ನಂದಿಧ್ವಜ, ಕಳಸ, ಪುರವಂತಿಕೆಯೊಂದಿಗೆ ಮೆರವಣಿಗೆ ನಡೆಸಿ ಗ್ರಾಾಮದ ಪ್ರಮುಖ ಬೀದಿಯಲ್ಲಿ ರಥೋತ್ಸವ ನಡೆಯಿತು.
ಹರಕೆ ಹೊತ್ತ ಸಾವಿರಾರು ಭಕ್ತರು ಅಗ್ನಿಿಕುಂಡ ಪ್ರವೇಶಿಸಿ ಹರಕೆ ತಿರಿಸಿದರು. ಯಮನೂರು ಗ್ರಾಾಮದ ಬಸವೇಶ್ವರ ಸಂಘದ ರುದ್ರಮುನಿಸ್ವಾಾಮಿ ಹಾಗೂ ಗುರು ಶಾಂತಯ್ಯ ಸ್ವಾಾಮಿ ಇವರಿಂದ ಪುರವಂತಿಕೆ ಸೇವೆ ಮತ್ತು ಅಮರಪ್ಪ ಹೂಗಾರ ಸಂಗಡಿಗರಿಂದ ಶಹನಾಯಿ ಕಾರ್ಯಕ್ರಮ ನಡೆಯಿತು.
ಆಲ್ದಾಳ್ ಗ್ರಾಾಮದಲ್ಲಿ ಶ್ರೀ ವೀರಭದ್ರೇಶ್ವರಸ್ವಾಾಮಿ ವೈಭವದ ರಥೋತ್ಸವ

