ಸುದ್ದಿಮೂಲ ವಾರ್ತೆ ಹರಪನಹಳ್ಳಿ, ಡಿ.1:
ರಾಜ್ಯದ ಜನರ ಮತ್ತು ರೈತರ ಆಶೋತ್ತರಗಳನ್ನು ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಲವಾಗಿದ್ದು ಕಾಂಗ್ರೆೆಸ್ ನಾಯಕರು ಕುರ್ಚಿ ಕಿತ್ತಾಾಟದಲ್ಲಿ ತೊಡಗಿದ್ದಾರೆ ಎಂದು ಮಾಜಿ ಸಚಿವ ಕರುಣಾಕರ್ ರೆಡ್ಡಿಿ ಹೇಳಿದರು.
ಬಿಜೆಪಿ ರಾಜ್ಯ ಘಟಕದ ಆದೇಶದ ಮೇರೆಗೆ ತಾಲೂಕು ಬಿಜೆಪಿ ಮಂಡಲ ಹಾಗೂ ರೈತ ಮೋರ್ಚಾದ ವತಿಯಿಂದ ಜಿಲ್ಲಾ ಆಡಳಿತ ಮತ್ತು ತಾಲೂಕ ಆಡಳಿತ ವತಿಯಿಂದ ರೈತ ಬೆಳೆದ ಮೆಕ್ಕೆೆಜೋಳಕ್ಕೆೆ ಬೆಂಬಲ ಬೆಲೆ ಹಾಗೂ ತಕ್ಷಣವೇ ತಾಲೂಕಿನಲ್ಲಿ ಖರೀದಿ ಕೇಂದ್ರ ತೆರೆಯಲು ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಿಕೊಳ್ಳಲಾಗಿತ್ತು,
ಪಟ್ಟಣದ ರಾಜಸೊಮಶೇಖರ ನಾಯಕ( ಹರಿಹರ ಸರ್ಕಲ್) ವೃತ್ತದಿಂದ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾಾ ಹಾಗೂ ಭಿತ್ತಿಿ ಪತ್ರಗಳ ಮೂಲಕ ಎತ್ತಿಿನ ಬಂಡಿಯಲ್ಲಿ ಏರಿ ಮಾಜಿ ಶಾಸಕ ಕರುಣಾಕರ ರೆಡ್ಡಿಿ ನೇತೃತ್ವದಲ್ಲಿ ಪ್ರಾಾರಂಭವಾದ ಮೆರವಣಿಗೆ ಐಬಿ ಸರ್ಕಲ್ ವರೆಗೆ ಪಾದಯಾತ್ರೆೆಯಲ್ಲಿ ಕೊನೆಗೊಂಡು ತಹಸಿಲ್ದಾಾರ್ ಗಿರೀಶ್ ಬಾಬು ರವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರುಣಾಕರ ರೆಡ್ಡಿಿ ಈ ಹಿಂದೆ ಬಿಜೆಪಿ ಸರ್ಕಾರ ಬಿದ್ದಾಗ ರೈತರಿಗೆ ಕಿಸಾನ್ ಸಮ್ಮಾಾನ್ ರೂಪದಲ್ಲಿ 4 ಸಾವಿರ ರೂಪಾಯಿಗಳನ್ನು ಕೊಡುತ್ತಿಿತ್ತು. ಆದರೆ ಈ ಸರ್ಕಾರ ಬಂದ ತಕ್ಷಣ ಅದನ್ನು ರದ್ದು ಮಾಡಿದೆ. ಮತ್ತು ಹಾಲಿಗೆ ಪ್ರೋೋತ್ಸಾಾಹ ಧನವನ್ನು ಕೂಡ ನಿಲ್ಲಿಸಲಾಗಿದ್ದು ರೈತ ವಿರೋಧಿ ಧೋರಣೆಯನ್ನು ಅನುಸರಿಸುತ್ತಿಿದೆ. ಈ ಭಾಗದ ನಾಲ್ಕು ಜಿಲ್ಲೆಗಳಲ್ಲಿ ಅತಿ ಹೆಚ್ಚು ರೈತರು ಮೆಕ್ಕೆೆಜೋಳವನ್ನು ಬೆಳೆಯುತ್ತಿಿದ್ದು 2 ಲಕ್ಷದ 16 ಸಾವಿರ ಹೆಕ್ಟರ್ ನಲ್ಲಿ ಮೆಕ್ಕೆೆಜೋಳ ಬೆಳೆಯಲಾಗಿದೆ. ಆದರೆ ಬೆಲೆ ಕುಸಿತವಾಗಿ ರೈತರಿಗೆ ಸಂಕಷ್ಟ ತಂದು ಒಡ್ಡಿಿದೆ. ಕೇಂದ್ರ ಈಗಾಗಲೇ 2400 ರೂಪಾಯಿ ಬೆಂಬಲ ಬೆಲೆ ಘೋಷಿಸಿದ್ದು ಸಾಲದಾಗಿದೆ ರಾಜ್ಯ ಸರ್ಕಾರದ ವತಿಯಿಂದ 600 ರು ಹೆಚ್ಚುವರಿಯಾಗಿ ನೀಡಿ ಕ್ವಿಿಂಟಲ್ಗೆ 3 ಸಾವಿರ ರೂ. ನಿಗದಿಪಡಿಸಬೇಕು. ಹಾಲಿಗೆ ಪ್ರೋೋತ್ಸಾಾಹ ಧನವನ್ನು ಹೆಚ್ಚು ಮಾಡಿ ಕಿಸಾನ್ ಸಮ್ಮಾಾನ್ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂದು ಆಗ್ರಹ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ರೆಡ್ಡಿಿ ಮಾತನಾಡಿ, ರಾಜ್ಯ ಸರ್ಕಾರ ಬಂದಾಗಿನಿಂದ ರೈತರಿಗೆ ಒಂದಿಲ್ಲೊಂದು ಪೆಟ್ಟು ಬಿದ್ದಿದೆ, ಜನಸಾಮಾನ್ಯರಿಗೆ ಸರ್ಕಾರದ ಧೋರಣೆಯಿಂದ ಬೇಸರಗೊಂಡಿದ್ದಾರೆ. ಅಭಿವೃದ್ಧಿಿ ಶೂನ್ಯವಾಗಿದೆ ರೈತರ ಹಿತ ಕಾಯುವಲ್ಲಿ ಸರ್ಕಾರ ಸಂಪೂರ್ಣ ವಿಲವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ವೈ ಶೇಖರಪ್ಪ, ಮುಖಂಡರುಗಳಾದ ಅರುಂಡಿ ನಾಗರಾಜ್ ಆರ್ ಲೋಕೇಶ್, ಕೆಂಗಳ್ಳಿಿ ಪ್ರಕಾಶ್, ಶಿರುಗನಹಳ್ಳಿಿ ವಿಶ್ವನಾಥ್, ಪುರಸಭಾ ಸದಸ್ಯರಾದ ರೊಕ್ಕಪ್ಪ, ಕಿರಣ್ ಶಾನ್ಬೋೋಗ್, ಗೌಳಿ ವಿನಯ್, ಜಾವೀದ್ ಮಾಜಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಬಾಗಳಿ ಕೊಟ್ರಪ್ಪ, ಮಂಡಲ ಉಪಾಧ್ಯಕ್ಷ ಬಸವನಗೌಡ, ಕಣಿವೆಹಳ್ಳಿಿ , ಮಾರುತಿ, ಗಂಗಾ ನಾಯ್ಕ್, ಯು.ತಿಮ್ಮಣ್ಣ, ಭಾಗಳಿ ಸಿದ್ದೇಶ್, ಬಸವರಾಜ್, ವಕೀಲರಾದ ಮಾಬುಸಾಬ್, ಪ್ರಸನ್ನ, ಕೆ.ಮಲ್ಲೇಶ್, ಡಿ ಸುಭಾಷ್, ಆಲೂರು ಶ್ರೀನಿವಾಸ್, ನಿಟ್ಟೂರ ಹನುಮಂತ, ತೋಟ ನಿಂಗರಾಜ್, ಮಹೇಶ್ ಪೂಜಾರ್, ಸೇರಿದಂತೆ ಪದಾಧಿಕಾರಿಗಳು ಗ್ರಾಾಮ ಪಂಚಾಯತ್ ಸದಸ್ಯರು ಹಾಗು ಕಾರ್ಯಕರ್ತರು ಭಾಗವಹಿಸಿದ್ದರು.
ಕುರ್ಚಿ ಕಾದಾಟದಲ್ಲಿ ರೈತರ ಕಡೆಗಣಿಸಿದ ಸರ್ಕಾರ – ಕರುಣಾಕರ ರೆಡ್ಡಿ ಆರೋಪ

