ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ದೇವದುರ್ಗ ತಾಲ್ಲೂಕಿನ ಗಬ್ಬೂರು ಗ್ರಾಾಮದ ಹೆಸರನ್ನು ಬದಲಾಯಿಸಿ ಮಣಿಪುರ ಎಂದು ಮರು ನಾಮಕರಣ ಮಾಡುವಂತೆ ಗ್ರಾಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲು ಗ್ರಾಾಮಸ್ಥರು ಒತ್ತಾಾಯಿಸಿದ್ದಾಾರೆ.
ಗಬ್ಬೂರು ಗ್ರಾಾಮದ ಪಂಚಾಯತಿ ಅಭಿವೃದ್ಧಿಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಗಬ್ಬೂರು ತನ್ನದೆ ಇತಿಹಾಸ ಹೊಂದಿದ್ದು ಅನೇಕ ದಾಖಲೆಗಳಲ್ಲೂ ಮಣಿಪುರ ಎಂಬ ಉಲ್ಲೇಖವಿದೆ. ಹೀಗಾಗಿ, ಪಂಚಾಯಿತಿಯ ಆಡಳಿತ ಮಂಡಳಿ ತನ್ನ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆೆ ಚರ್ಚಿಸಿ ಸೂಕ್ತ ಕಾರಣದೊಂದಿಗೆ ಠರಾವು ಪಾಸ್ ಮಾಡಿ ಸರ್ಕಾರಕ್ಕೆೆ ಒತ್ತಾಾಯ ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಮಲ್ಲಪ್ಪಗೌಡ ಮಾಲಿ ಪಾಟೀಲ, ಪ್ರಭು ಯಾದವ, ಮಾರ್ತಾಂಡ ಗಬ್ಬೂರು, ಮುತ್ತುರಾಜ ಮ್ಯಾಾತ್ರಿಿ, ಮೋಹನಕುಮಾರ ಸಿಂಗ್ರಿಿ, ಶಾಂತಕುಮಾರ ಹೊನ್ನಟಗಿ, ಮಲ್ಲಪ್ಪ ಗಬ್ಬೂರು, ರೇಣುಕಾ ನಾಯಕ, ನರಸಪ್ಪ ಗಣೇಕಲ್, ಮಲ್ಲಯ್ಯ ಖಾನಾಪೂರ, ಬಸವಲಿಂಗ ಗಣೇಕಲ್ ಸೇರಿದಂತೆ ಅನೇಕರಿದ್ದರು.
ಗಬ್ಬೂರು ಗ್ರಾಮಕ್ಕೆ ಮಣಿಪುರ ಮರು ನಾಮಕರಣಕ್ಕೆ ಒತ್ತಾಯ

