ಸುದ್ದಿಮೂಲ ವಾರ್ತೆ ಬಳ್ಳಾರಿ, ಡಿ.1:
ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾಾ ಕೈಗಾರಿಕಾ ಕೇಂದ್ರ ವತಿಯಿಂದ ಆರ್ಎಎಂಪಿ ಯೋಜನೆಯಡಿ ಉದ್ಯಮಶೀಲತಾ ಚಟುವಟಿಕೆಗಳನ್ನು ಬೆಂಬಲಿಸಲು, ಪೋಷಿಸಲು ಹಾಗೂ ಸ್ಥಳೀಯ ಮಟ್ಟದ ಎಂಎಸ್ಎಂಇ ಕಾರ್ಯಕ್ಷಮತೆಯನ್ನು ಹೆಚ್ಚಿಿಸಲು ರ್ತು ಉತ್ತೇಜನ ಕುರಿತು ಡಿಸೆಂಬರ್ 03 ರಂದು ಬೆಳಿಗ್ಗೆೆ 10.30 ಗಂಟೆಗೆ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಾಲಯದ ಸಭಾಂಗಣದಲ್ಲಿ ಒಂದು ದಿನದ ಜಾಗೃತಿ ಕಾರ್ಯಾಗಾರ ಹಮ್ಮಿಿಕೊಳ್ಳಲಾಗಿದೆ.
ಕಾರ್ಯಾಗಾರದಲ್ಲಿ ವಿದ್ಯಾಾರ್ಥಿಗಳಿಗೆ, ಉದ್ಯಮಿದಾರರಿಗೆ ವ್ಯಾಾಪಾರ ಅವಕಾಶಗಳ ಕುರಿತು ಮಾರ್ಗದರ್ಶನ ವ್ಯವಹಾರ ಹಾಗೂ ರ್ತು ಪ್ರಚಾರ, ತಂತ್ರಜ್ಞಾಾನದ ಉನ್ನತೀಕರಣ, ಗುಣಮಟ್ಟದ ಪ್ರಮಾಣೀಕರಣಕ್ಕೆೆ ಬೆಂಬಲ, ಬ್ರಾಾಂಡಿಂಗ್ ಕುರಿತು ಜಾಗೃತಿ ಮೂಡಿಸಲಾಗುತ್ತದೆ.
ಆಸಕ್ತರು ಕಾರ್ಯಾಗಾರದಲ್ಲಿ ಭಾಗವಹಿಸಬಹುದಾಗಿದೆ ಎಂದು ಜಿಲ್ಲಾಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು ತಿಳಿಸಿದ್ದಾಾರೆ.

