ಸುದ್ದಿಮೂಲ ವಾರ್ತೆ ಬಳಗಾನೂರು, ಡಿ.1:
ಪಟ್ಟಣದ ಬೃಹನ್ಮಠದಲ್ಲಿ ಮಾನವ ಧರ್ಮ ಉದ್ಧಾಾರಕ್ಕಾಾಗಿ ಸಮಸ್ತ ಭಕ್ತರ ಕಲ್ಯಾಾಣಕ್ಕಾಾಗಿ ಲಿಂ. ಪಂಪಾಪತಿಶಿವಾಚಾಯರ 29 ನೇ ಪುಣ್ಯಾಾರಾಧನೆ ಅಂಗವಾಗಿ ಜರುಗಿದ ಉಜ್ಜಯನಿ ಸಿದ್ಧಲಿಂಗ ಭಗವತ್ಪಾಾದರ ಮಹಾಪುರಾಣ ಪ್ರವಚನ ಮಹಾಮಂಗಲ ಹಾಗೂ ಸುಮಂಗಲೆಯರಿಂದ ಕುಂಭೊತ್ಸವ ಕಾರ್ಯಕ್ರಮ ಶ್ರೀಮಠದ ಶ್ರೀವೀರಭದ್ರ ಶಿವಾಚಾರ್ಯರ ನೇತೃತ್ವದಲ್ಲಿ ಮಂಗಳವಾರ ಜರುಗಲಿದೆ.
ನಿಮಿತ್ತ ಮಂಗಳವಾರ ಶ್ರೀಗಳ ಸಾಮೂಹಿಕಇಷ್ಟಲಿಂಗ ಮಹಾಪೂಜೆ, ಜಂಗಮವಟುಗಳಿಗೆ ಅಯ್ಯಾಾಚಾರ ದೀಕ್ಷೆ ನಂತರ ಸುಮಂಗಲೆಯರಿಂದ ಕುಂಭೋತ್ಸವ ಸಂಸ್ಥಾಾನಮಠದ ಗಜಲಕ್ಷ್ಮಿಿ (ಆನೆೆ) ಯೊಂದಿಗೆ ನಂದಿಕೋಲು, ವೀರಗಾಸೆ, ಭಜನಾ ಸೇವಾದೊಂದಿಗೆ ಭೂರಿ ಮೆರವಣಿಗೆಮಧ್ಯಾಾಹ್ನ ಪ್ರಸಾದ ವಿತರಣೆ, ಮಧ್ಯಾಾಹ್ನ2 ಗಂಟೆಯಿಂದ ಪುರಾಣ ಮಹಾಮಂಗಲದ ಕಾರ್ಯಕ್ರಮಗಳು ಧರ್ಮ ಸಭೆ ಹರಗುರು ಚರಮೂರ್ತಿಗಳು, ಜನಪ್ರತಿನಿಧಿಗಳು ಆಗಮಿಸಲಿದ್ದಾಾರೆ ಕಾರ್ಯಕ್ರಮದಲ್ಲಿ ಶ್ರೀಮಠದ ಸದ್ಭಕ್ತರು ಪಾಲ್ಗೊೊಳ್ಳುವಂತೆ ಶ್ರೀಗಳು ತಿಳಿಸಿದ್ದಾಾರೆ. ಪ್ರವಚನಕಾರರಾದ ಬಾಚಿಗುಡ್ಡ ಸಂಗಮೇಶ ಶಾಸ, ಪುರಾಣ ವಾಚನಕಾರರು ಹುಲ್ಲೂರು ಪತ್ರೆೆಯ್ಯಸ್ವಾಾಮಿ ಹಿರೇಮಠ, ತಬಲಾ ವಾದಕರಾಗಿ ಜಂತಲಿ ಮಹಾಂತೇಶ ಸೇರಿ ಪುರಾಣ ಪ್ರವಚನ ಮಹಾಮಂಗಲ ಕಾರ್ಯ ನೆರವೇರಿಸಲಿದ್ದಾಾರೆ.
ಲಿಂ. ಶ್ರೀಪಂಪಾಪತಿ ಶಿವಾಚಾರ್ಯರ ಪುಣ್ಯಾಾರಾಧನೆ, ಸುಮಂಗಲೆಯರಿಂದ ಕುಂಭೋತ್ಸವ ಇಂದು

