ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.01:
ಪಟ್ಟಣದ ಕೇಂದ್ರ ಬಸ್ ನಿಲ್ದಾಾಣಕ್ಕೆೆ ಕಲ್ಯಾಾಣ ಕರ್ನಾಟಕ ವಿಭಾಗಿಯ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಪಾಟೀಲ್ ಸೋಮವಾರ ಭೇಟಿ ನೀಡಿ ಪರಿಶೀಲನೆ ನಡೆಸಿ ಬಸ್ ನಿಲ್ದಾಾಣದಲ್ಲಿಯ ಶೌಚಾಲಯ, ಕುಡಿವ ನೀರು, ಸ್ವಚ್ಛತೆ, ಮಹಿಳೆಯರ ವಿಶ್ರಾಾಂತಿ ಗೃಹ, ಉಪಹಾರಗೃಹ ವೀಕ್ಷಿಸಿ ಇನ್ನುಳಿದ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಅವಶ್ಯವಿರುವ ಮೂಲಸೌಕರ್ಯ ಮತ್ತು ಗ್ರಾಾಮೀಣ ಭಾಗದ ಬಸ್ ಸಂಚಾರ ಕುರಿತು ಸ್ಥಳದಲ್ಲಿದ್ದ ಸಾರಿಗೆ ಘಟಕದ ವ್ಯವಸ್ಥಾಾಪಕ ಪ್ರಕಾಶ್ ದೊಡ್ಡಮನಿ, ಮತ್ತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಮಾಹಿತಿ ನೀಡಿದ ಅವರು ಕಲ್ಯಾಾಣ ಕರ್ನಾಟಕ ಸಾರಿಗೆ ವಿಭಾಗಕ್ಕೆೆ ಸಾವಿರ ಬಸ್ಸುಗಳ ಅವಶ್ಯಕತೆ ಇದ್ದು ಶೀಘ್ರದಲ್ಲಿ 400 ಹೊಸ ಬಸ್ಸುಗಳು ಬರಲಿದ್ದು ಇದರ ಟೆಂಡರ್ ಪ್ರಕ್ರಿಿಯೆ ಕೂಡ ನಡೆದಿದೆ. ನಮ್ಮ ಸರ್ಕಾರದ ಐದು ಗ್ಯಾಾರಂಟಿ ಯೋಜನೆಗಳು ಇಡೀ ವಿಶ್ವವೇ ತಿರುಗಿ ನೋಡುವಂತಾಗಿದ್ದು ಶಕ್ತಿಿ ಯೋಜನೆಯಿಂದಾಗಿ ಪ್ರಯಾಣಿಕರ ಸಂಖ್ಯೆೆ ಹೆಚ್ಚಾಾಗಿದ್ದು ಬಸ್ ಕೊರತೆ ನೀಗಿಸಲು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಸಮಸ್ಯೆೆಗಳ ಪರಿಹಾರವಾಗಲಿವೆ. ಲಿಂಗಸಗೂರು ಸಾರಿಗೆ ಘಟಕ ಕಲ್ಯಾಾಣ ಕರ್ನಾಟಕ ಭಾಗಕ್ಕೆೆ ಹೋಲಿಸಿದರೆ ಆದಾಯದಲ್ಲಿ ಮೂರನೇ ಸ್ಥಾಾನದಲ್ಲಿದ್ದು ಮುಂದಿನ ದಿನಗಳಲ್ಲಿ ಲಿಂಗಸುಗೂರು ಬಸ್ನಿಲ್ದಾಾಣದ ಮುಖ್ಯ ರಸ್ತೆೆಗೆ ಹೊಂದಿ ಕೊಂಡು ನೂತನ ಮಳಿಗೆಗಳನ್ನು ನಿರ್ಮಾಣ ಮಾಡುವ ಯೋಜನೆ ಇದೆ.
ಲಿಂಗಸುಗೂರು ಸಾರಿಗೆ ಘಟಕದಿಂದ 133 ರೂಟ್ ಗಳಿದ್ದು ಗ್ರಾಾಮೀಣ ಪ್ರದೇಶದ ವಿದ್ಯಾಾರ್ಥಿಗಳಿಗೆ ಬಸ್ಸಿಿನ ಅನಾನುಕೂಲತೆ ಇದೆ ಎಂದು ವಿದ್ಯಾಾರ್ಥಿಗಳು ತಮ್ಮ ಗಮನಕ್ಕೆೆ ತಂದಿದ್ದು ಅಧಿಕಾರಿಗಳಿಗೆ ಸೂಚಿಸಿ ಸಮಸ್ಯೆೆ ಪರಿಹರಿಸುವೆ. ಲಿಂಗಸುಗೂರು ಸಾರಿಗೆ ಘಟಕಕ್ಕೆೆ ಹೊಸದಾಗಿ ಬಸ್ಗಳ ಕೊರತೆ ಹೆಚ್ಚಿಿದ್ದು ಅಲ್ಲದೆ ಈ ಸಾರಿಗೆ ಘಟಕಕ್ಕೆೆ ಅಂಬಾರಿ ಹಾಗೂ ಸ್ಲೀಪರ್ ಕೋಚ್ ಬಸ್ಗಳ ಅವಶ್ಯಕತೆಯಿದ್ದು ಕೂಡಲೇ ಒದಗಿಸುವಂತೆ ಇಲ್ಲಿಯ ಮಾಜಿ ಶಾಸಕರಾದ ಡಿ.ಎಸ್ ಹೂಲಗೆರಿಯವರು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿಿ ಅವರಿಗೆ ಮನವಿ ಸಲ್ಲಿಸಿದ್ದು ಆದಷ್ಟು ಬೇಗನೇ ಈ ಘಟಕಕ್ಕೆೆ ಅಂಬಾರಿ ಹಾಗೂ ಸ್ವೀಪರ್ ಕೋಚ್ ಬಸ್ ಗಳನ್ನು ಒದಗಿಸುವ ಪ್ರಾಾಮಾಣಿಕ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಲಿಂಗಸುಗೂರು ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಗೋವಿಂದ ನಾಯಕ್, ಗ್ಯಾಾರಂಟಿ ಯೋಜನೆಗಳ ತಾಲೂಕಾಧ್ಯಕ್ಷರಾದ ವೆಂಕಟೇಶ್ ಗುತ್ತೇದಾರ್, ಎಪಿಎಂಸಿ ಅಧ್ಯಕ್ಷ ಅಮರೇಶ್ ಹೆಸರೂರ, ಮಹಮ್ಮದ್ ರಫಿ, ಮುಖಂಡರಾದ ಬಾಬಾ ಖಾಜಿ, ಉಮೇಶ್ ಐಹೊಳೆ, ಅಮರೇಶ ಮಡ್ಡಿಿ, ಗ್ಯಾಾರಂಟಿ ಯೋಜನೆ ಸಮಿತಿ ಸದಸ್ಯ ಗದ್ದಿ, ಗದ್ದೆೆನ ಗೌಡ ಪಾಟೀಲ್, ಸಾರಿಗೆ ಘಟಕ ವ್ಯವಸ್ಥಾಾಪಕ ಪ್ರಕಾಶ್ ದೊಡ್ಡಮನಿ ಇದ್ದರು.
ಶೀಘ್ರ ವಿಭಾಗಕ್ಕೆ 400 ಹೊಸ ಬಸ್ ಆಗಮನ ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗೀಯ ಅಧ್ಯಕ್ಷರ ಭೇಟಿ : ಸಮಸ್ಯೆಗಳ ಮಾಹಿತಿ ಸಂಗ್ರಹ

