ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.01:
ಕನ್ನಡ ಮನಸ್ಸುಗಳನ್ನು ಒಗ್ಗೂಡಿಸಿ, ಕನ್ನಡ ಸಾಹಿತ್ಯವನ್ನು ಬೆಳೆಸುತ್ತಿಿರುವ ಕಸಾಪದ ಕಾರ್ಯ ಶ್ಲಾಾಘನೀಯ. ಕನ್ನಡ ಭಾಷೆ, ನೆಲ, ಜಲಕ್ಕಾಾಗಿ ಪ್ರತಿಯೊಬ್ಬರು ಒಗ್ಗಟ್ಟಿಿನಿಂದ ನಡೆಯಬೇಕಿದೆ ಎಂದು ದತ್ತಿಿದಾನಿ, ಬಿಜೆಪಿ ಮುಖಂಡ ಕೆ.ಕರಿಯಪ್ಪ ಹೇಳಿದರು.
ಸೋಮವಾರ ನಗರದ ಎಲ್ಬಿಕೆ ಪದವಿ ಪೂರ್ವ ಹಾಗೂ ನೊಬೆಲ್ ಪದವಿ ಮಹಾವಿದ್ಯಾಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಹಮ್ಮಿಿಕೊಂಡಿದ್ದ 2025-26ನೇ ಸಾಲಿನ ದತ್ತಿಿ ಉಪನ್ಯಾಾಸ ಮಾಲಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕನ್ನಡ ನಾಡಿನ ಅಸ್ಮಿಿತೆಗಾಗಿ ಕಾರ್ಯನಿರ್ವಹಿಸುತ್ತಿಿರುವ ಕನ್ನಡ ಸಾಹಿತ್ಯ ಪರಿಷತ್ತಿಿಗೆ ದಾನಿಗಳು ನೀಡುವ ದತ್ತಿಿಗಳೇ ಜೀವಾಳವಾಗಿವೆ. ಕನ್ನಡ ಸಾಹಿತ್ಯ ಪರಿಷತ್ತಿಿನ ಕಾರ್ಯಚಟುವಟಿಕೆಗಳು ಸುವ್ಯವಸ್ಥಿಿತವಾಗಿ ನಡೆಯಲು ದತ್ತಿಿಗಳೇ ಸಹಾಯಕವಾಗಿವೆ ಎಂದರು.
ಕುರುಬ ಸಮುದಾಯ, ಕುರಿಸಾಕಾಣಿಕೆ ಮತ್ತು ಕನಕದಾಸ ಸಾಹಿತ್ಯ ಚಿಂತನಾ ವಿಷಯದ ಕುರಿತು ಡಾ.ಗಂಗಾಧರ ವೀರಘಂಟೆ ಮಾತನಾಡಿ, ಪುರಾತನದಿಂದಲೂ ಕುರಿ ಸಾಕಾಣಿಕೆ ಇದೆ. ಇದನ್ನು ಕುರುಬ ಸಮುದಾಯದವರು ಕುಲಕಸುಬಾಗಿ ಮುಂದುವರಿಸಿಕೊಂಡು ಬಂದಿದ್ದಾಾರೆ. ಆದರೆ ಆಧುನಿಕ ಕಾಲದ ಸಂದರ್ಭದಲ್ಲಿ ಕುಲ ಕಸುಬಾಗಿ ಉಳಿಯದೇ ಎಲ್ಲಾಾ ಜಾತಿ ಧರ್ಮೀಯರಲ್ಲಿಯೂ ಉಪಜೀವನದ ಒಂದು ಉದ್ದಿಮೆಯಾಗಿರುವುದು ಆಶಾದಾಯಕ ಬೆಳವಣಿಗೆ ಎಂದರು.
ಕಸಾಪ ಅಧ್ಯಕ್ಷ ಹೆಚ್.ಎ್.ಮಸ್ಕಿಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಸ್ವಾಾಭಿಮಾನದಿಂದ ಕನ್ನಡವನ್ನು ಕಟ್ಟುವ ಕೆಲಸವಾಗಬೇಕು. ಈ ನಿಟ್ಟಿಿನಲ್ಲಿ ಕಸಾಪ ಕಾರ್ಯನಿರತವಾಗಿದ್ದು, ಪ್ರತಿಯೊಬ್ಬರು ಸಹಕಾರ ನೀಡಬೇಕು ಎಂದರು.
ನೊಬೆಲ್ ಪದವಿ ಮಹಾ ವಿದ್ಯಾಾಲಯದ ಕಾರ್ಯದರ್ಶಿ ಡಾ.ಅರುಣ್ ಕುಮಾರ್ ಬೇರಗಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಬೀರಪ್ಪ ಶಂಭೋಜಿ, ಕನ್ನಡ ಸಾಹಿತ್ಯ ಪರಿಷತ್ನ ಮಾಜಿ ಜಿಲ್ಲಾಾಧ್ಯಕ್ಷ ಎಸ್.ಶರಣೇಗೌಡ, ದತ್ತಿಿದಾನಿ ಶರಣಪ್ಪ ಬಸ್ಸಪ್ಪ ಬರಸಿ, ಪುರಸಭೆ ಮಾಜಿ ಅಧ್ಯಕ್ಷೆ ದೇವೀರಮ್ಮ, ಹಿರಿಯ ಮುಖಂಡ ಅಮರೇಶಪ್ಪ ಮೈಲಾರ್, ಪತ್ರಕರ್ತ ಆರ್.ಅಮರೇಶ ಅಲಬನೂರು ಸೇರಿದಂತೆ ಹಲವರು ಇದ್ದರು.
ಕಸಾಪ ಪದಾಧಿಕಾರಿ ದುರುಗಪ್ಪ ಗುಡದೂರು ಪ್ರಾಾಸ್ತಾಾವಿಕವಾಗಿ ಮಾತನಾಡಿದರು. ಉಪನ್ಯಾಾಸಕಿ ಅಶ್ವಿಿನಿ ಪ್ರಾಾರ್ಥಿಸಿದರು. ಸುರೇಶ್ ಮುಳ್ಳೂರ್ ಸ್ವಾಾಗತಿಸಿದರು ನಂದಿನಿ ಗೂಗಿ ನಿರೂಪಿಸಿದರೆ, ಕೃಷ್ಣ ರಾಠೋಡ್ ವಂದಿಸಿದರು. ಜಿಲ್ಲಾಾ ಕನ್ನಡ ಸಾಹಿತ್ಯ ಪರಿಷತ್ತಿಿನಿಂದ ಕೊಡಮಾಡುವ ಜಿಲ್ಲಾಾ ಕನ್ನಡ ರಾಜ್ಯೋೋತ್ಸವ ಪ್ರಶಸ್ತಿಿಗೆ ಭಾಜನರಾದ ಹುಸೇನ್ ಬಾಷಾ ಅವರನ್ನು ಪರಿಷತ್ತಿಿನಿಂದ ಸನ್ಮಾಾನಿಸಲಾಯಿತು. ಸಿದ್ದರಾಮಯ್ಯ ಕೆಳಗಿಳಿಸಿದರೆ ಕಾಂಗ್ರೆೆಸ್ ನಿರಾಕರಿಸುತ್ತೇವೆ- ರಮೇಶ
? ಸುದ್ದಿಮೂಲ ವಾರ್ತೆ ರಾಯಚೂರು , ಡಿ.01:
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿಿ ಸ್ಥಾಾನದಿಂದ ಕಾಂಗ್ರೆೆಸ್ ಹೈಕಮಾಂಡ್ ಇಳಿಸಿದರೆ ರಾಜ್ಯದಲ್ಲಿನ ಕುರುಬ ಸಮಾಜ ಪಕ್ಷಕ್ಕೆೆ ಮುಂಬರುವ ಚುನಾವಣೆಗಳಲ್ಲಿ ಪಾಠ ಕಲಿಸಬೇಕಾಗುತ್ತದೆ ಎಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಾಧ್ಯಕ್ಷ ಕೆ.ರಮೇಶ ಮೂಡಲದಿನ್ನಿಿ ಎಚ್ಚರಿಸಿದರು.
ನಗರದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿಯಲ್ಲಿ ಮಾತನಾಡಿ, 2023ರ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಕುರುಬರು ಹಾಗೂ ಅಹಿಂದ ಸಮುದಾಯ ಶೇ.80ರಷ್ಟು ಸಿದ್ದರಾಮಯ್ಯ ಮುಖ್ಯಮಂತ್ರಿಿ ಮಾಡುತ್ತಾಾರೆಂಬ ಉದ್ದೇಶದಿಂದಲೆ ಕಾಂಗ್ರೆೆಸ್ ಬೆಂಬಲಿಸಿ ಮತ ಚಲಾಯಿಸಿದ್ದೇವೆ ಎಂದರು.
ಗೆದ್ದು ಅಧಿಕಾರ ಹಿಡಿದ ಮೇಲೆ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿಿ ಎಂದು ಭಾವಿಸಿದ್ದೇವೆ. ಹೈಕಮಾಂಡ್ ಎರಡುವರೇ ವರ್ಷ ಎಂದು ಹೇಳಿಲ್ಲ ಎಂಬುದು ನಮ್ಮ ಗಮನಕ್ಕೆೆ ಇದೆ. ಆದರೆ, ಯಾರದೊ ಒತ್ತಡಕ್ಕೆೆ ಮಣಿದು ಮುಖ್ಯಮಂತ್ರಿಿ ಸ್ಥಾಾನ ಬಿಟ್ಟು ಕೊಡಲು ಒತ್ತಡ ಹಾಕುವುದು ಸಲ್ಲದು. ಉತ್ತಮ ಆಡಳಿತ ನೀಡುತ್ತಿಿದ್ದಾಾರೆ. ಎಲ್ಲ ವರ್ಗದವರಿಗೆ ಪಂಚ ಗ್ಯಾಾರಂಟಿ ಮೂಲಕ ಅನುಕೂಲ ಮಾಡಿಕೊಟ್ಟ ನಾಯಕರಾಗಿದ್ದಾಾರೆ. ಕೆಲ ಶಾಸಕ, ಸಚಿವರ ಒತ್ತಾಾಸೆಗೆ ಪಕ್ಷದ ಹೈಕಮಾಂಡ್ ಅನ್ಯಾಾಯ ಮಾಡಬಾರದು ಸಿದ್ದರಾಮಯ್ಯ ಅವರನ್ನೆೆ ಮುಂದುವರಿಸಬೇಕು. ಒಂದೊಮ್ಮೆೆ ದುಡುಕಿನ ನಿರ್ಧಾರ ಮಾಡಿದರೆ ಮುಂಬರುವ ದಿನಗಳಲ್ಲಿ ಕುರುಬ ಹಾಗೂ ಅಹಿಂದ ವರ್ಗ ಕಾಂಗ್ರೆೆಸ್ ಪಕ್ಷಕ್ಕೆೆ ಮತ ಚಲಾಯಿಸುವುದಿಲ್ಲ ಬೆಂಬಲಿಸುವುದೂ ಇಲ್ಲ ಎಂದು ಎಚ್ಚರಿಸಿದರು. ನಮ್ಮ ಈ ಎಚ್ಚರಿಕೆ ಬ್ಲಾಾಕ್ ಮೇಲ್ ಅಲ್ಲ ಸ್ಪಷ್ಟವಾದ ನಿಲುವು ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಿಯಲ್ಲಿ ಕಾರ್ಯಾಧ್ಯಕ್ಷ ತಿಮ್ಮಪ್ಪ ಮರ್ಚೆಟ್ಹಾಾಳ, ವಿರೂಪಾಕ್ಷಿಿಗೌಡ ಪಾಟೀಲ,ಕೆ.ನರಸಣ್ಣ ಶಾಸಿಘಿ, ಶಾಮಮೂರ್ತಿ, ಗೂಳಪ್ಪ ವಿಷ್ಣುಘಿ, ಮಹೇಶ ಇದ್ದರು.
ನೋಬೆಲ್ ಕಾಲೇಜಿನಲ್ಲಿ ಕಸಾಪದಿಂದ ದತ್ತಿಿ ಉಪನ್ಯಾಸ ಕಾರ್ಯಕ್ರಮ ನಾಡು- ನುಡಿಗಾಗಿ ಒಗ್ಗಟ್ಟಿನಿಂದ ನಡೆಯೋಣ – ಕೆ.ಕರಿಯಪ್ಪ

