ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.01:
ಸಂವಿಧಾನ ವಿರೋಧಿಗಳ ಬೇರು ಸಮೇತ ಕಿತ್ತಿಿಹಾಕಲು ಇಂತಹ ಹೋರಾಟಗಳು ಮಾಡಬೇಕಾಗಿದೆ, ಬಹು ಸಂಖ್ಯಾಾತ ದಲಿತ, ದಮನಿತ, ಶೋಷಿತ ವರ್ಗಗಳ ಯುವಕರನ್ನು ಬಳಕೆ ಮಾಡಿಕೊಳ್ಳುತ್ತಿಿರುವ ಆರ್.ಎಸ್.ಎಸ್.ನ್ನು ಬುಡಸಮೇತ ಕಿತ್ತು ಹಾಕಬೇಕೆಂದು ಪ್ರಗತಿಪರ ಚಿಂತಕರು, ಹಿರಿಯ ಸಾಹಿತಿಗಳಾದ ಕೆ. ನೀಲಾ ಹೇಳಿದರು.
ಅವರು ಸೋಮವಾರದಂದು ವಿವಿಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಸಂವಿಧಾನ ಸಂರಕ್ಷಣಾ ಪಡೆ ದೇವದುರ್ಗದಿಂದ ಆಯೋಜಿಸಿದ ಲಾಠಿ ಬಿಡಿ, ಶಿಕ್ಷಣ ಪಡಿ, ಸಂವಿಧಾನ ಜಾಗೃತಿ ಬೃಹತ್ ಕಾಲ್ನಡಿಗೆ ಜಾಥಾದ ವೇದಿಕೆ ಕಾರ್ಯಕ್ರಮ ಹಲಗೆ ಬಾರಿಸುವ ಮೂಲಕ ಉದ್ಘಾಾಟಿಸಿ ಮಾತನಾಡಿ, ಈ ನಾಡಿನ ಜನರಿಗೆ ಅನ್ನ, ನೀರು, ಭೂಮಿ, ಮಕ್ಕಳ ಶಿಕ್ಷಣ, ವಸತಿ, ಯುವಕ, ಯುವತಿಯರಿಗೆ ಉದ್ಯೋೋಗ, ರೈತರ ಬೆಳೆಗಳಿಗೆ ಸೂಕ್ತ ಬೆಲೆ, ಜನರ ಸಮಸ್ಯೆೆಗಳ ಬಗ್ಗೆೆ ಮಾತನಾಡಬೇಕಾದ ನಾವುಗಳು ಅನಿವಾರ್ಯವಾಗಿ ಈ ಆರ್.ಎಸ್. ಎಸ್. ಮತ್ತು ಇದರ ವಿಭಾಗವಾದ ಬಿ.ಜೆ.ಪಿ.ಯ ಬಗ್ಗೆೆ ಮಾತನಾಡ ಬೇಕಾಗಿದೆ. ನಮ್ಮ ದೇಶದ ಧ್ವಜವನ್ನು, ನಮ್ಮ ಸಂವಿಧಾನವನ್ನು ಒಪ್ಪದ ಗದ್ದಾಾರಿಗಳು, ನವೆಂಬರ 26ರಂದು ದೇಶದ ಬಾವುಟವನ್ನು ಹಾರಿಸುವ ಬದಲಾಗಿ ಅಯೋಧ್ಯೆೆಯಲ್ಲಿ ಭಗವತ್ ಧ್ವಜ ಹಾರಿಸಿರುವದನ್ನು ತೀವ್ರವಾಗಿ ಖಂಡಿಸಿದರು.
ಸ್ವಾಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಇತಿಹಾಸವೇ ಇಲ್ಲದ ಈ ಆರ್.ಎಸ್.ಎಸ್. ನವರು ದೇಶ ಪ್ರೇೇಮಿಗಳು ಆಗಲು ಸಾಧ್ಯವೇ, ನೋಂದಣೀ ಇಲ್ಲದೆ ಈ ಸಂಘ ಜರ್ಮನಿನ ಹಿಟ್ಲರ್ ಮಾರ್ಗದರ್ಶನದಲ್ಲಿ ಸ್ಥಾಾಪಿತವಾದ ಶೇಕಡ 2 ರಷ್ಟು ಇರುವ ಜನರು, ಜಾತಿ, ಧರ್ಮಗಳ ಮಧ್ಯೆೆ ಕಿಚ್ಚುಹಚ್ಚಿಿ ಮನುಸ್ಮೃತಿಯನ್ನು ಜಾರಿಗೆ ತರಲು ಮುಂದಾಗಿದ್ದಾಾರೆ. ಆರ್.ಎಸ್.ಎಸ್.ನ ಮೂಲ ಅಜೆಂಡಾ ಬೇರೆಯಾಗಿದ್ದು, ತೋರಿಕೆಗಾಗಿ ಮುಸ್ಲಿಿಂ ವಿರೋಧಿ ಎನ್ನುವಂತೆ ಮಾಡಿ ಮನುಸ್ಮೃತಿಯನ್ನು ನಮ್ಮ ಹಿಂದುಳಿದ ದಲಿತ, ದಮನಿತರ, ಶೋಷಿತ ವರ್ಗಗಳ ಮೇಲೆ ಹೇರಲು ಹೊರಟಿದೆ.
ದೇಶದ ಸ್ವಾಾತಂತ್ರಕ್ಕಾಾಗಿ ಹಿಂದೂ,ಮುಸ್ಲಿಿಂ,ಕ್ರಿಿಶ್ಚನ್, ಸಿಖ್ ಎನ್ನದೇ ಬ್ರಿಿಟಿಷರ ವಿರುದ್ದ ಹೋರಾಟ ಮಾಡಿದ್ದಾಾರೆಂದು ಮೌಲಾನ ಮುಫ್ತಿಿ ಮಹಿಬೂಬ ಖುರೇಶಿ ಮುಂದುವರೆದು ಮಾತನಾಡಿದರು, ಬಂಥೋಜಿ, ಪಾಧರ್ ಜಾನಪಾಲ್, ಾದರ ಇಮ್ಯಾಾನುವಲ್ ದೇವಮಣಿ, ಸಾನಿಧ್ಯ ವಹಿಸಿದರೆ, ಸಭೆಯ ಅಧ್ಯಕ್ಷತೆಯನ್ನು ವೆಂಕನಗೌಡ ಪಾಟೀಲ ವಕೀಲರು ವಹಿಸಿ ಮಾತನಾಡಿದರು. ಎಂ,ಆರ್.ಭೇರಿ, ಮಾನಪ್ಪ ಮೇಸಿ,ಹನುಮಂತಪ್ಪ ಮನ್ನಾಾಪೂರಿ, ದಾನಪ್ಪ ಮಸ್ಕಿಿ, ವಿಶ್ವನಾಥ ಬಲ್ಲಿದವ್, ಮಹ್ಮದ ರಫಿ ಜಾನಿ, ಮೋಹನ್ಬಲ್ಲಿದವ್,ತಮ್ಮಣ್ಣ ವಕೀಲರು, ಅಮೀನ ಬಾಷಾ ಗೌರಂಪೇಟ್, ರಂಗಪ್ಪ ಗೋಸಲ, ಮಹಾಂತೇಶ ಭವಾನಿ,ಮಲ್ಲೇಶಪ್ಪ ಹುನಗುಂದಬಾಡ, ಶರಣಪ್ಪ ಗೋನಾಳ,ಹನುಮಂತ್ರಾಾಯ ದೊರೆ ಮಜ್ಗಿಿ, ವೀರೇಶ ನಾಯಕ ಶಾಖೆ,ಲಕ್ಷ್ಮಣಜ್ಯೋೋತಿ,ಅಬ್ದುಲ್ಅಜೀಜ್,ಶಿವರಾಜ ಗೆಜ್ಜೆೆಭಾವಿ,ಹನುಮಂತ್ರಾಾಯ ನಾಯಕ, ಬಸನಗೌಡ ವೆಂಕಟಾಪೂರ, ರಂಗಮ್ಮ ಇರಬಗೇರಾ, ವಿಜಯರಾಣಿ,ಶಿವರಾಜರುದ್ರಾಾಕ್ಷಿ ಸೇರಿದಂತೆ ವಿವಿಧ ಪ್ರಗತಿಪರ ಮುಖಂಡರು ಉಪಸ್ಥಿಿತರಿದ್ದರು.
ಆರ್ಎಸ್ಎಸ್ ಬುಡಸಮೇತ ಕಿತ್ತು ಹಾಕಿ – ಕೆ. ನೀಲಾ ಕರೆ

