ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.1:
ಸೇಡಂ ತಾಲೂಕಿನ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವರ ಜಾತ್ರೆೆಗೆ ಯಾದಗಿರಿ ವಿಭಾಗದಿಂದ 34 ವಿಶೇಷ ಬಸ್ಗಳ ವ್ಯವಸ್ಥೆೆ ಕಲ್ಪಿಿಸಿದೆ ಎಂದು ಯಾದಗಿರಿ ವಿಭಾಗ ಕಲ್ಯಾಾಣ ಕರ್ನಾಟಕ ರಸ್ತೆೆ ಸಾರಿಗೆ ನಿಗಮ ವಿಭಾಗೀಯ ನಿಯಂತ್ರಣಾಧಿಕಾರಿ ಜಿ.ಬಿ.ಮಂಜುನಾಥ ಅವರು ತಿಳಿಸಿದ್ದಾರೆ.
ಸಾರ್ವಜನಿಕರ ಗಮನಕ್ಕೆೆ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಸೇಡಂ ಮೋತಕಪಲ್ಲಿ ಶ್ರೀ ಬಲಭೀಮಸೇನ ದೇವರ ಜಾತ್ರೆೆಗೆ ಬರುವ ಬಕ್ತಾಾದಿ ಪ್ರಯಾಣಿಕರ ಸಾರಿಗೆ ಅನುಕೂಲಕ್ಕಾಾಗಿ 2025ರ ಡಿಸೆಂಬರ್ 3 ರಿಂದ 2025ರ ಡಿಸೆಂಬರ್ 6ರ ವರೆಗೆ ಯಾದಗಿರ ವಿಭಾಗದಿಂದ 34 ವಿಶೇಷ ಬಸ್ಗಳ ವ್ಯವಸ್ಥೆೆ ಕಲ್ಪಿಿಸಿದೆ. ಈ ಮೋತಕಪಲ್ಲಿ ಬಲಭೀಮಸೇನ ದೇವರ ಜಾತ್ರೆೆಗೆ ಯಾದಗಿರ, ಗುರುಮಠಕಲ್, ನಾರಾಯಣಪೇಟ, ಕೊಡಂಗಲ್ ಮುಂತಾದ ಸ್ಥಳಗಳಿಂದ ನೇರವಾಗಿ ಮೋತಕಪಲ್ಲಿ ಜಾತ್ರೆೆಗೆ ಕಾರ್ಯಚರಣೆ ಮಾಡಲಿದೆ. ಭಕ್ತಾಾಧಿ ಪ್ರಯಾಣಿಕರು ಈ ವಿಶೇಷ ಬಸ್ಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

