ಸುದ್ದಿಮೂಲ ವಾರ್ತೆ ಕೊಪ್ಪಳ ,ಡಿ.1:
ಮೆಕ್ಕೆೆಜೋಳ ಖರೀದಿಗೆ ಖರೀದಿ ಕೇಂದ್ರ ಆರಂಭವಾಗದ ಹಿನ್ನೆೆಲೆ ಇಂದು ಕೊಪ್ಪಳದಲ್ಲಿ ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಿನೂತನ ಪ್ರತಿಭಟನೆ ಮಾಡಿದ್ದಾಾರೆ.
ಕೊಪ್ಪಳದ ಅಶೋಕ ವೃತ್ತದಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿ ಮುಖಂಡರು ಎತ್ತಿಿನಬಂಡಿಗಳ ತಂದು ಅದರ ಮೇಲೆ ಕುಳಿತು ಸರಕಾರಕ್ಕೆೆ ಬಾರುಕೋಲು ಬೀಸಿದರು. ಇದೇ ವೇಳೆ ಮೆಕ್ಕೆೆಜೋಳ ಬೆಳೆ ರಸ್ತೆೆಗೆ ಸುರಿದು ಪ್ರತಿಭಟನೆ ಮಾಡಿದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆೆಯ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ಇದೇ ವೇಳೆ ತುಂಗಭದ್ರಾಾ ಜಲಾಶಯದಿಂದ ಎರಡನೆಯ ಅವಧಿಗೆ ನೀರು ನೀಡಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋೋಶ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ವಿರುದ್ದ ಪೋಸ್ಟರ್ ಹಿಡಿದು ಆಕ್ರೋೋಶ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾಾಧ್ಯಕ್ಷ ಬಸವರಾಜ ದಢೆಸುಗೂರ, ಬಿಜೆಪಿ ರಾಜ್ಯ ರೈತ ಮೋರ್ಚಾದ ಅಧ್ಯಕ್ಷ ಎ.ಎಸ್ ಪಾಟೀಲ್, ನಡಹಳ್ಳಿಿ ವಿಧಾನಸಭೆಯ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲರು, ಶಾಸಕ ಜನಾರ್ದನ್ ರೆಡ್ಡಿಿ, ವಿಧಾನಪರಿಷತ್ ಸದಸ್ಯೆೆ ಶ್ರೀಮತಿ ಹೇಮಲತಾ ನಾಯಕ, ಮಾಜಿ ಶಾಸಕ ಪರಣ್ಣ ಮುನವಳ್ಳಿಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ॥ ಕೆ ಬಸವರಾಜ, ಮಾಜಿ ಸಚಿವ ನಾಗಪ್ಪ ಸಾಲೋಣಿ, ಮಾಜಿಸಂಸದ ಶಿವರಾಮಗೌಡರು, ಮಾಜಿ ಶಾಸಕ ಜಿ ವೀರಪ್ಪ, ಮತ್ತು ಕೆ ಶರಣಪ್ಪ, ಚಂದ್ರಶೇಖರ್ ಗೌಡ ಪಾಟೀಲ್, ನವೀನ್ ಗುಳಗಣ್ಣನವರ, ಹಿರಿಯ ಮುಖಂಡರು, ಜಿಲ್ಲಾಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಉಪಸ್ಥಿಿತರಿದ್ದರು.
ಮೆಕ್ಕೆಜೋಳ ಸುರಿದು ಪ್ರತಿಭಟನೆ

