ಸುದ್ದಿಮೂಲ ವಾರ್ತೆ ಕವಿತಾಳ, ಡಿ.1:
ಸಮೀಪದ ಮಸ್ಕಿಿ ತಾಲೂಕಿನ ಅಮೀನಗಡ ಗ್ರಾಾಮದಲ್ಲಿ ಹೇಮರಡ್ಡಿಿ ಮಲ್ಲಮ್ಮನ ಜಯಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಜಯಂತಿ ಅಂಗವಾಗಿ ಸೋಮವಾರ ಹಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹೇಮರಡ್ಡಿಿ ಮಲ್ಲಮ್ಮನ ಭಾವಚಿತ್ರದ ಮೆರವಣಿಗೆ ಕುಂಭ, ಕಳಸ, ಪುರವಂತಿಕೆ, ಡೊಳ್ಳು ಬಾಜಾ, ಭಜಂತ್ರಿಿಯೊಂದಿಗೆ ಗ್ರಾಾಮದ ಆಂಜನೇಯ ದೇವಸ್ಥಾಾನದಿಂದ ಹುಚ್ಚಬುಡ್ಡೇಶ್ವರ ದೇವಸ್ಥಾಾನ ಸೇರಿದಂತೆ ಪ್ರಮುಖ ರಸ್ತೆೆಗಳ ಮೂಲಕ ಈಶ್ವರ ದೇವಸ್ಥಾಾನದವರೆಗೆ ಅದ್ದೂರಿಯಾಗಿ ನಡೆಯಿತು.
ದೇವಯ್ಯ ತಾತ, ಬಸವಲಿಂಗಮ್ಮ ಅಮ್ಮನವರು, ಮಸ್ಕಿಿ ತಾಲೂಕು ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಯದ್ದಲದಿನ್ನಿಿ, ವಿಶ್ವನಾಥರಡ್ಡಿಿ, ಚೇತನ ಪಾಟೀಲ್ ಮತ್ತು ಮಹಿಳೆಯರು ಹಾಗೂ ಮಕ್ಕಳು ಗ್ರಾಾಮದ ರಡ್ಡಿಿ ಸಮಾಜದ ಹಿರಿಯ ಮುಖಂಡರು, ಯುವಕರು ಭಾಗವಹಿಸಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆೆ ಮಾಡಲಾಗಿತ್ತು.
ಅಮೀನಗಡ : ಹೇಮರಡ್ಡಿ ಮಲ್ಲಮ್ಮ ಜಯಂತಿ

