ಸುದ್ದಿಮೂಲ ವಾರ್ತೆ ರಾಯಚೂರು, ಡಿ.01:
ಕಲ್ಯಾಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಿ ಮಂಡಳಿಯ ಅಧಿಕೃತ ವೈಬ್ಸೈಟ್ನಲ್ಲಿ ಗಂಭೀರ ದೋಷ ಕಂಡು ಬಂದಿದ್ದು ಸರಿಪಡಿಸಲು ವೆಲ್ಫೆೆರ್ ಆ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ತಾಹೇರ್ ಹುಸೇನ್ ವಕೀಲ ಒತ್ತಾಾಯಿಸಿದ್ದಾಾರೆ.
ರಾಯಚೂರು ಜಿಲ್ಲೆಯ ನಕ್ಷೆಯಲ್ಲಿ ಬಳ್ಳಾಾರಿ ಜಿಲ್ಲೆಯನ್ನು ತೋರಿಸಿರುವುದು ಮಾತ್ರವಲ್ಲ, ಅದನ್ನು ಕ್ಲಿಿಕ್ ಮಾಡಿದಾಗ ಸಹ ಸಂಪೂರ್ಣ ಬಳ್ಳಾಾರಿ ಜಿಲ್ಲೆಯ ಮಾಹಿತಿಯೇ ಪ್ರದರ್ಶವಾಗುತ್ತಿಿದೆ.
ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಿಗಾಗಿ ರೂಪಿಸಲಾದ ಈ ನಿಗಮವೇ ಇಂತಹ ಅಜಾಗರೂಕ ತಪ್ಪುುಗಳನ್ನು ಮಾಡುವುದರಿಂದ, ಅಭಿವೃದ್ಧಿಿ ಕಾರ್ಯಗಳು ಕುಂಠಿತವಾಗುತ್ತಿಿವೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಬೇಷರತ್ತು ಕೆಲಸದ ಪರಿಣಾಮವಾಗಿ ಈ ಪ್ರದೇಶ ನಿರಂತರವಾಗಿ ಕಡೆಗಣನೆಯಲ್ಲೇ ಉಳಿದಿದೆ ಎಂದು ದೂರಿದ್ದಾಾರೆ.
ಈ ರೀತಿಯ ತಪ್ಪಿಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣ ಸೂಕ್ತ ಕ್ರಮ ಕೈಗೊಂಡು ಜಿಲ್ಲೆಗೆ ಸಂಭವಿಸಿರುವ ಈ ಅವಮಾನ ಕುರಿತು ಮೌನವಾಗಿರುವ ರಾಯಚೂರು ಜಿಲ್ಲೆಯ ರಾಜಕಾರಣಿಗಳು ನಿಜವಾಗಿಯೂ ನಾಚಿಕೆ ಪಡಬೇಕು. ತಕ್ಷಣ ಸರಿಪಡಿಸಲು ಒತ್ತಾಾಯಿಸಿದ್ದಾಾರೆ.
ಕೆಕೆಆರ್ಡಿಬಿ ವೈಬ್ಸೈಟ್ ದೋಷ ಸರಿಪಡಿಸಲು ಆಗ್ರಹ

