ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.01:
ಈ ಶಾಲೆಯ ಕಟ್ಟಡ ವ್ಯವಸ್ಥೆೆ ನೋಡಿದರೆ ನಿಜಕ್ಕೂ ಜೀವ ಭಯ ಬರುತ್ತದೆ. ಎಲ್ಲೆೆಂದರಲ್ಲಿ ಕಿತ್ತು ಬಿದ್ದಿರುವ ಮೇಲ್ಛಾಾವಣಿ, ಬಿರುಕು ಬಿಟ್ಟಿಿರುವ ಕೊಠಡಿಗಳು, ಅವ್ಯವಸ್ಥೆೆಯ ಆಗರವಾಗಿರುವ ಸರಕಾರಿ ಶಾಲೆ. ಈ ಶಾಲೆಯಲ್ಲಿಯೇ ಜೀವ ಕೈಯಲ್ಲಿ ಹಿಡಿದು 260ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ವಿದ್ಯಾಾಭ್ಯಾಾಸ ಮಾಡುತ್ತಿಿದ್ದಾಾರೆ.
ಶಾಲೆಗೆ ಹೋಗೋ ಮಕ್ಕಳ ಮುಖದಲ್ಲಿ ಸಂತೋಷ ತುಂಬಿರುತ್ತೆೆ. ಅಷ್ಟೇ ಅಲ್ದೆೆ ಪಾಠ ಕೇಳೋ ಉತ್ಸಾಾಹ, ಲವಲವಿಕೆ ಎದ್ದು ಕಾಣುತ್ತೆೆ. ಆದ್ರೆೆ ಕೊಪ್ಪಳ ಜಿಲ್ಲೆೆಯ ಕುಷ್ಟಗಿ ತಾಲೂಕಿನ ಜುಮಲಾಪೂರ ಗ್ರಾಾಮದಲ್ಲಿ ಶಾಲೆಯ ಮಕ್ಕಳು ಮಾತ್ರ ಶಾಲೆ ಅಂದ್ರೆೆ ಭಯ ಪಡ್ತಾಾರೆ. ಅಲ್ಲಿಯ ವಾತಾವರಣ ಮಕ್ಕಳಿಗೆ ಕಿರಿಕಿರಿ ಉಂಟುಮಾಡಿದೆ.
ಜುಮಲಾಪೂರ ಸರಕಾರಿ ಪ್ರಾಾಥಮಿಕ ಶಾಲೆಯ ದುಸ್ಥಿಿತಿ ಕೇಳುವವರೇ ಇಲ್ಲವಾಗಿದ್ದಾಾರೆ. ಕ್ಷಣಕ್ಷಣಕ್ಕೂ ಉದುರಿ ಬೀಳುತ್ತಿಿರುವ ಕಾಂಕ್ರೀೆಟ್, ಅಸ್ಥಿಿಪಂಜರದಂತೆ ಆಗಿರುವ ಮೇಲ್ಚಾಾವಣಿ, ಕಂಬಗಳು. ಹೀಗಾಗಿ ಕೊಠಡಿ ಹೊರಗೆ ಕುಳಿತು ಮಕ್ಕಳು ಪಾಠ ಕೇಳುತ್ತಿಿದ್ದಾಾರೆ. ಒಂದನೇ ತರಗತಿಯಿಂದ ಏಳನೇ ತರಗತಿವರಗೆ ಸರಿಸುಮಾರು 260ಕ್ಕೂ ಹೆಚ್ಚು ವಿದ್ಯಾಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಾಭ್ಯಾಾಸ ಮಾಡುತ್ತಾಾರೆ. ಆದರೆ, ಸರಿಯಾದ ಕೊಠಡಿಗಳ ವ್ಯವಸ್ಥೆೆ ಇಲ್ಲ. ಇರುವ 14 ಕೊಠಡಿಗಳಲ್ಲಿ ಕೇವಲ 7 ಕೊಠಡಿಗಳು ಮಾತ್ರ ಬಳಕೆಗೆ ಬರುತ್ತವೆ. ಉಳಿದ ಕೊಠಡಿಗಳು ಈಗಲೋ ಆಗಲೋ ನೆಲಕ್ಕೆೆ ಬೀಳುವಂತಿವೆ. ಹೀಗಾಗಿ ಜೀವ ಭಯದಲ್ಲಿ ಮಕ್ಕಳು ನಿತ್ಯ ಪಾಠ ಕೇಳುತ್ತಿಿದ್ದಾಾರೆ. ಕೆಲ ತರಗತಿ ಮಕ್ಕಳು ಕೊಠಡಿಗಳ ವ್ಯವಸ್ಥೆೆ ಇಲ್ಲದ ಕಾರಣ ಬಯಲಲ್ಲಿ ಶಿಕ್ಷಣ ಕಲಿಯುವಂತಾಗಿದೆ.
ಒಂದುಕಡೆ ಆನಾಹುತಕ್ಕೆೆ ಕಾಯ್ದು ಕುಳಿತಿದೆ ಕೊಠಡಿಗಳ ಮೇಲ್ಛಾಾವಣಿ. ಯಾವಾಗ ಯಾರ ಮೇಲೆ ಮೇಲ್ಛಾಾವಣಿಯ ಕಾಂಕ್ರೀೆಟ್ ಬೀಳುತ್ತೋೋ ಎನ್ನುವ ಭಯದಲ್ಲಿ. ಪ್ರತಿದಿನ ಶಾಲಾ ಶಿಕ್ಷಕರು ಶಾಲಾ ಆವರಣದಲ್ಲಿ ಮಕ್ಕಳಿಗೆ ಪಾಠ ಮಾಡುವ ಪರಿಸ್ಥಿಿತಿ ನಿರ್ಮಾಣವಾಗಿದೆ.ಶಾಲೆಯಲ್ಲಿ ಒಟ್ಟು 14ಕೊಠಡಿಗಳಿವೆ. ಅದ್ರಲ್ಲಿ 7 ಕೊಠಡಿಗಳು ಸಂಪೂರ್ಣವಾಗಿ ಶಿಥಿಲಗೊಂಡಿವೆ. ಉಳಿದ 7 ಕೊಠಡಿಗಳಲ್ಲಿ ಇದರಲ್ಲಿ ಶಾಲಾ ಕಾರ್ಯಲಯ, ಟಾಟಾ ಟ್ರಸ್ಟ್(ಸಿಆರ್ಪಿ) ಹಾಗೂ ಸ್ಮಾಾಟ್ ಕ್ಲಾಾಸ್ಗೆೆ ಮೂರು ಕೊಠಡಿಗಳನ್ನು ಬಳಸಲಾಗುತ್ತಿಿದೆ. ಉಳಿದ ನಾಲ್ಕು ಕೊಠಡಿಗಳಲ್ಲಿ 3ಕೊಠಡಿಗಳಲ್ಲಿ ನಲಿಕಲಿ ಮಕ್ಕಳಿಗೆ ಪಾಠ ಮಾಡಲಾಗುತ್ತದೆ. ಒಂದು ಕೊಠಡಿಯಲ್ಲಿ 4ನೇ ತರಗತಿ ಮಕ್ಕಳಿಗೆ ಪಾಠ ಮಾಡಿದರೇ. 5,6 ಮತ್ತು 7ನೇ ತರಗತಿಗಳ ಮಕ್ಕಳು ಸೇರಿ ಒಟ್ಟು ಮೂರು ತಗರತಿಗಳ ಮಕ್ಕಳಿಗೆ ಕೊಠಡಿಗಳ ಸಮಸ್ಯೆೆ ಇದೆ. ಹೀಗಾಗಿ ಶಿಕ್ಷಕರು ಒಂದು ತರಗತಿಯನ್ನು ಸ್ಮಾಾಟ್ ಕ್ಲಾಾಸ್ ಕೊಠಡಿಯಲ್ಲಿ ಉಳಿದ ಎರಡು ತರಗತಿಗಳನ್ನು ಶಾಲಾ ಅಂಗಳದಲ್ಲೇ ಕೂತು ಪಾಠ ಕೇಳುವ ಅನಿವಾರ್ಯತೆ ಎದುರಾಗಿದೆ. ಶಾಲಾ ಕೊಠಡಿಗಳನ್ನು ನಿರ್ಮಿಸದಿದ್ದರೆ ಹೋರಾಟ ಮಾಡುವುದಾಗಿ ಗ್ರಾಾಮಸ್ಥರು ಎಚ್ಚರಿಸಿದ್ದಾಾರೆ.
ಶಾಲೆಯಲ್ಲಿ ಶಿಕ್ಷಣ ಗುಣಮಟ್ಟ ಚೆನ್ನಾಾಗಿರುವುದರಿಂದ ದಾಖಲಾತಿ ಚೆನ್ನಾಾಗಿದೆ. ಆದ್ರೆೆ ಮೂಲ ಬಿಲ್ಡಿಿಂಗ್ ಶಿಥಿಲವಾಗಿರೋ ಕಾರಣ ಮಕ್ಕಳನ್ನ ಶಾಲೆಗೆ ಕಳಿಸ್ಬೇಕೋ ಬೇಡ್ವೊೊ ಅನ್ನೋೋ ಪ್ರಶ್ನೆೆ ಪಾಲಕರಲ್ಲಿ ಮೂಡಿದೆ. ಶಾಲಾ ಆವರಣದಲ್ಲಿ ಗುಂಪು ಗುಂಪಾಗಿ ಕುಳಿತು ಪಾಠ ಕೇಳೋದ್ರಿಿಂದ ಮಕ್ಕಳಿಗೆ ಪಾಠ ಸಹ ಸರಿಯಾಗಿ ಕೇಳಲ್ವಂತೆ. ಮಧ್ಯಾಾಹ್ನವಾದ್ರೆೆ ಸಾಕು ಬಿಸಿಲಿನಲ್ಲಿ ಕುಳಿತು ಪಾಠ ಕೇಳಬೇಕು. ಅದು ಮಕ್ಕಳಿಗೆ ಕಿರಿಕಿರಿ ಉಂಟು ಆಗುತ್ತಿಿದೆ. ಹೀಗಾಗಿ ಮಕ್ಕಳ ವಿದ್ಯಾಾಭ್ಯಾಾಸಕ್ಕೆೆ ತೊಂದರೆಯಾಗದಂತೆ ಶಿಕ್ಷಣ ಇಲಾಖೆ ನೆರಳಿನ ವ್ಯವಸ್ಥೆೆ ಕಲ್ಪಿಿಸೋ ಕೆಲಸ ಮಾಡಬೇಕಿದೆ.
ಶಾಲಾ ಹಳೇ ಬಿಲ್ಡಿಿಂಗ್ ಅಂಗಳದಲ್ಲಿ ಓಡಾಡುವಾಗ ಮಕ್ಕಳ ಮೈ ಮೇಲೆ ಕಾಂಕ್ರೀೆಟ್ ತುಂಡು ಬಿದ್ರೆೆ ಅನಾಹುತ ಸಂಭವಿಸಬಹುದು. ಹೀಗಾಗಿ ಕೂಡಲೆ ಅಧಿಕಾರಿಗಳು ಎಚ್ಚೆೆತ್ತು ಮಕ್ಕಳಿಗೆ ಪರ್ಯಾಯ ವ್ಯವಸ್ಥೆೆ ಕಲ್ಪಿಿಸಬೇಕಿದೆ. ಮಕ್ಕಳಿಗೆ ಮೂಲ ಸೌಕರ್ಯವಿರೋ ಯಾವುದಾದ್ರೂ ರೂಮ್ ವ್ಯವಸ್ಥೆೆ ಮಾಡಿ ಕಲಿಕಾ ವಾತಾವರಣ ಸೃಷ್ಟಿಿಸಬೇಕು ಎಂಬುವದು ಪ್ರಜ್ಞಾಾವಂತ ನಾಗರಿಕರ ಕಳಕಳಿಯಾಗಿದೆ.
ಈ ಬಗ್ಗೆೆ ಪ್ರತಿಕ್ರಿಿಯಿಸಿದ ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ ಜುಮಲಾಪುರ ಶಾಲೆಯ ದುಃಸ್ಥಿಿತಿಯ ಬಗ್ಗೆೆ ಗಮನಕ್ಕಿಿದೆ. ಕುಷ್ಟಗಿ ಬಿಇಒ ಸ್ಥಳಕ್ಕೆೆ ಭೇಟಿ ನೀಡಿ ಸ್ಮಾಾರ್ಟ್ ಕ್ಲಾಾಸ್ ತರಗತಿ ಹಾಗೂ ಕೂಸಿನ ಮನೆ ಬಿಡಿಸಿ ಅಲ್ಲಿ ಮಕ್ಕಳಿಗೆ ಪಾಠ ಮಾಡಲಾಗುವುದು. ಶಾಲಾ ಕಟ್ಟಡಕ್ಕೆೆ ಅಕ್ಷರ ಅವಿಷ್ಕಾಾರ ಯೋಜನೆಯಲ್ಲಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾಾರೆ.
ಬಯಲಿನಲ್ಲಿ ಪಾಠ ಕೇಳುವ ಅನಿವಾರ್ಯತೆ

