ಸುದ್ದಿಮೂಲ ವಾರ್ತೆ ಗಂಗಾವತಿ, ಡಿ.01:
ಕವಿಗಳ ಸಾಹಿತ್ಯದಿಂದ ತುಂಗಭದ್ರಾಾ ನದಿಯ ಶುಚಿತ್ವದ ಬಗ್ಗೆೆ ಜಾಗೃತಿ ಮೂಡಲಿ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿಿ ಹೇಳಿದರು.
ನಗರದ ಪಬ್ಲಿಿಕ್ ಕ್ಲಬ್ ಆವರಣದ ಕಲಾನಿಕೇತನ ಸಾಂಸ್ಕೃತಿಕ ವೇದಿಕೆಯಲ್ಲಿ ನಿರ್ಮಲ ತುಂಗಭದ್ರಾಾ ಅಭಿಯಾನದ ಅಂಗವಾಗಿ ನಡೆದ ವಿಶೇಷ ಹಾಗೂ ಕಾವ್ಯಲೋಕದ 110ನೇ ಕವಿಗೋಷ್ಠಿಿಗೆ ಚಾಲನೆ ನೀಡಿ ಮಾತನಾಡಿದರು.
ನೀರು ನಮ್ಮೆೆಲ್ಲರ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ಹಾಗಾಗಿ ತುಂಗಭದ್ರೆೆ ಮಡಿಲು ತ್ಯಾಾಜ್ಯ ಸೇರಿ ಮಲಿನಗೊಳ್ಳುತ್ತಿಿದ್ದು, ಎಲ್ಲರೂ ಜಾಗೃತಿವಹಿಸಿ ಜಲಮೂಲ ಕಾಪಾಡಬೇಕು. ಇದಕ್ಕೆೆ ಬೇಕಾದ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಿರ್ಮಲ ತುಂಗಭದ್ರಾಾ ಅಭಿಯಾನದ ಕೊಪ್ಪಳ ಜಿಲ್ಲಾಾ ಸಂಚಾಲಕ ಮತ್ತು ಕಾವ್ಯಲೋಕದ ಗೌರವಾಧ್ಯಕ್ಷ ಡಾ.ಶಿವಕುಮಾರ ಮಾಲಿಪಾಟೀಲ್ ಮಾತನಾಡಿ, ನಮ್ಮ ಜಲಮೂಲ ರಕ್ಷಣೆಗೆ ಎಲ್ಲರೂ ಜಾಗೃತರಾಗಬೇಕು, ನಮ್ಮ ಮುಂದಿನ ಪೀಳಿಗೆಗೆ ಶುದ್ಧವಾದ ಗಾಳಿ, ನೀರು, ದೊರಕುವಂತಾಗಬೇಕಾದರೆ ತುಂಗಭದ್ರೆೆಯ ಒಡಲು ಸ್ವಚ್ಛಂದವಾಗಿ ಕಾಪಾಡಬೇಕು ಎಂದರು.
ನಿರ್ಮಲ ತುಂಗಭದ್ರಾಾ ಅಭಿಯಾನದ ವಿಶೇಷ ಕವಿಗೋಷ್ಠಿಿ, ಕಾವ್ಯಲೋಕ ಸಂಘಟನೆಯ ಸಹಯೋಗದೊಂದಿಗೆ 110ನೇ ಕವಿಗೋಷ್ಠಿಿ ಜರುಗಿತು. ಕವಿಗೋಷ್ಠಿಿ ಅಧ್ಯಕ್ಷತೆ ಪವನಕುಮಾರ್ ಗುಂಡೂರ ವಹಿಸಿದ್ದರು. 30ಕ್ಕೂ ಹೆಚ್ಚು ಕವಿಗಳು ಪರಿಸರ, ಜಲಮೂಲ ಸಂರಕ್ಷಣೆ, ಕನ್ನಡ ನಾಡು ನುಡಿ, ತುಂಗಭದ್ರೆೆ ಕುರಿತಾಗಿ ಕಾವ್ಯವಾಚಿಸಿ ಜನಮನ ಸೆಳೆದರು.
ಕುಂಭಮೇಳ ಸಂಸ್ಥೆೆಯಿಂದ ಕನ್ನಡ ನಾಡು ನುಡಿಗೆ ಸೇವೆಗೈದ ಹಲವಾರು ಮಹನೀಯರಿಗೆ ಕರ್ನಾಟಕ ರಾಜ್ಯೋೋತ್ಸವ ಪ್ರಶಸ್ತಿಿ ಪ್ರದಾನ ಮಾಡಿ ಗೌರವಿಸಲಾಯಿತು.
ನಿರ್ಮಲ ತುಂಗಭದ್ರಾಾ ಅಭಿಯಾನದ ರೂವಾರಿಗಳಾದ ಮಾಧವನ್, ಬಾಲಕೃಷ್ಣ ನಾಯ್ಡು, ರಾಯಭಾರಿಗಳಾದ ಲಲಿತಾರಾಣಿ ಶ್ರೀರಂಗದೇವರಾಯಲು, ಸಂಚಾಲಕರಾದ ವಿಷ್ಣುತೀರ್ಥ ಜೋಷಿ, ಜಗನ್ನಾಾಥ ಅಲ್ಲಂಪಲ್ಲಿ ಭಾಗವಹಿಸಿದ್ದರು.
ಕವಿಗಳ ಸಾಹಿತ್ಯದಿಂದ ತುಂಗಭದ್ರಾ ನದಿಯ ಶುಚಿತ್ವದ ಬಗ್ಗೆ ಜಾಗೃತಿ ಮೂಡಲಿ – ಪರಣ್ಣ ಮುನವಳ್ಳಿ

