ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.01:
2 ಹಾಗೂ 3 ರಂದು ನಡೆಯುವ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮದಲ್ಲಿ ಸಂಸದರ ನೇತೃತ್ವದ ಜಿಲ್ಲಾಾ ಅಥ್ಲೆೆಟಿಕ್ ಅಸೋಶಿಯೇಷನ್ನ ಮಾಲಾಧಾರಿಗಳಿಗೆ ನೀಡುವ ಸೌಲಭ್ಯಕ್ಕೆೆ ಕಾರ್ಖಾನೆಗಳ ಸಹಯೋಗ ತೆಗೆದುಕೊಳ್ಳಲಾಗುತ್ತಿಿದೆ. ಇದಕ್ಕೆೆ ಭಾರಿ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಗುತ್ತಿಿದೆ.
ಕೊಪ್ಪಳದಲ್ಲಿ ಒಂದು ಕಡೆ ಕಾರ್ಖಾನೆ ವಿರೋಧಿಸಿ ಹೋರಾಟ ನಡೆಯುತ್ತಿಿದ್ದರೆ. ಇದೀಗ ಹನುಮ ಮಾಲೆ ವಿಸರ್ಜನೆಗೆ ಕಾರ್ಖಾನೆ ಸಂಸದರು ಸಹಯೋಗ ತೆಗೆದುಕೊಂಡಿದ್ದಾಾರೆ. ಬರೋ ಭಕ್ತರಿಗೆ ಊಟ, ವಸತಿಗಾಗಿ ಕಾರ್ಖಾನೆಗಳ ಸಹಯೋಗ ಪಡೆದ ಅಥ್ಲೆೆಟಿಕ್ ಅಸೋಸಿಯೇಷನ್. ಕಾರ್ಖಾನೆಗಳ ಸಹಯೋಗ ಪಡೆದುಕೊಂಡಿದ್ದನ್ನ ಸಂಸದ ರಾಜಶೇಖರ್ ಹಿಟ್ನಾಾಳ ಬಹಿರಂಗ ಪಡಿಸಿದ್ದಾಾರೆ.
ಕಳೆದ 32 ದಿನಗಳಿಂದ ಕಾರ್ಖಾನೆ ವಿರೋಧಿಸಿ ಕೊಪ್ಪಳ ನಗರಸಭೆ ಮುಂಭಾಗ ಜಿಲ್ಲಾಾ ಬಚಾವೋ ಆಂದೋಲನ ಸಮಿತಿ ಹೋರಾಟ ನಡೆಸುತ್ತಿಿದೆ. ಬಲ್ಡೋೋಟಾ, ಮುಕುಂದ ಸುವಿ ವಿಸ್ತರಣೆ ಮಾಡದಂತೆ ಹೋರಾಟ ಮಾಡಲಾಗುತ್ತಿಿದೆ. ಇದೀಗ ಕಾರ್ಖಾನೆಗಳ ಸಹಯೋಗದಿಂದ ಹಣದಿಂದ ಹನುಮ ಮಾಲೆ ವಿಸರ್ಜನೆ ಕಾರ್ಯಕ್ರಮಕ್ಕೆೆ ಕಾರ್ಖಾನೆಯವರನ್ನು ಬಳಸಿಕೊಳ್ಳುವುದಕ್ಕೆೆ ಸಂಸದರ ನಡೆಗೆ ಪರಿಸರವಾದಿಗಳ ಕೆಂಗಣ್ಣಿಿಗೆ ಗುರಿಯಾಗಿದ್ದಾಾರೆ.
ಈ ಬಗ್ಗೆೆ ಸ್ಪಷ್ಠನೆ ನೀಡಿದ ರಾಜಶೇಖರ ಹಿಟ್ನಾಾಳ ಹೋರಾಟಗಾರರು ಇರೋ ಕಾರ್ಖಾನೆಗಳನ್ನ ಮುಚ್ಚಿಿ ಅಂತಾ ಹೇಳಿಲ್ಲ ಸಿಎಸ್ಆರ್ ಅನುದಾನವನ್ನ ಸಾಮಾಜಿಕ ಕಾರ್ಯಕ್ರಮಕ್ಕೆೆ ಹಂಚಬೇಕೆಂದು ಇದೆ. ಬಲ್ಡೋೋಟಾ ಹೊರತು ಪಡಿಸಿ ಕಿರ್ಲೋಸ್ಕರ್, ಮುಕುಂದ ಸುಮಿ, ಅಲ್ಟ್ರಾಾಟೆಕ್, ಹೊಸಪೇಟೆ ಸ್ಟೀಲ್, ಎಕ್ಸ್ ಇಂಡಿಯಾ ಸಹಯೋಗ ಪಡೆಯಲಾಗಿದೆ. ಬಲ್ಡೋೋಟಾ ಕಾರ್ಖಾನೆಯ ಸಹಯೋಗ ಪಡೆದಿಲ್ಲ ಪಡೆಯೋದಿಲ್ಲ ಎಂದರು.
ಹನುಮಮಾಲೆ ವಿಸರ್ಜನೆಯ ವೇಳೆಯಲ್ಲಿ ಅಂಜನಾದ್ರಿಿಯಲ್ಲಿ ಈ ಬಾರಿ ಪ್ಲಾಾಸ್ಟಿಿಕ್ ನಿಷೇಧಕ್ಕೆೆ ಸೂಚನೆ ನೀಡಲಾಗಿದೆ. ಹನುಮ ಮಾಲಾ ವಿಸರ್ಜನೆ ಮಾಡುವುದಕ್ಕೆೆ ನಿಗಧಿ ಮಾಡಿದ ಸ್ಥಳದಲ್ಲಿ ಹನುಮಮಾಲ ವಿಸರ್ಜನೆ ಮಾಡುವಂತೆ ಜಿಲ್ಲಾಾಡಳಿತ ಮನವಿ ಮಾಡಿದೇ ಎಂದರು.
ಜಿಲ್ಲಾಾಡಳಿತದಿಂದ ಪಾಕಿರ್ಂಗ್, ಭದ್ರತೆ, ಆರೋಗ್ಯ, ಕುಡಿಯುವ ನೀರು ಪ್ರಸಾದದ ವ್ಯವಸ್ಥೆೆ. ಇನ್ನೊೊಂದೆಡೆ ಅಥ್ಲೆೆಟಿಕ್ ಅಸೋಸಿಯೇಷನ್ ವತಿಯಿಂದ ಕೂಡ ವ್ಯವಸ್ಥೆೆ ಮಾಡಲಾಗಿದೆ. ಒಟ್ಟು ಎಂಟು ಸ್ಥಳಗಳಲ್ಲಿ 30 ಸಾವಿರ ಭಕ್ತರಿಗೆ ವಿಶ್ರಾಾಂತಿ, ಊಟ, ಉಪಹಾರ ಸೇರಿದಂತೆ ಭಜನೆಗೆ ವ್ಯವಸ್ಥೆೆ ಮಾಡಲಾಗಿದೆ. ಕುಡಿಯುವ ನೀರು, ಶೌಚಾಲಯ, ತಂಪು ಪಾನಿಯ ವ್ಯವಸ್ಥೆೆ ಹಿಟ್ನಾಾಳ್, ಅಗಳಕೇರಾ, ಆನೆಗೊಂದಿ, ಸಾಣಾಪುರ, ಕಡ್ಡಿಿರಾಮಪುರ ಸೇರಿದಂತೆ ಎಂಟು ಸ್ಥಳಗಳಲ್ಲಿ ವ್ಯವಸ್ಥೆೆ ಮಾಡಲಾಗಿದೆ. ಮಾಲಾಧಾರಿಗಳು ಶಾಂಪು ಹಾಗೂ ಸೋಪು ಬಳಸದೆ ಕಡ್ಲೆೆಇಟ್ಟು ಬಳಕೆ ಮಾಡಲು ಮನವಿ ಮಾಡಿದರು.
ಹನುಮ ಮಾಲೆ ಕಾರ್ಯಕ್ರಮಕ್ಕೆ ಕಾರ್ಖಾನೆಗಳ ಅನುದಾನ

