ಸುದ್ದಿಮೂಲ ವಾರ್ತೆ ಕೊಪ್ಪಳ,ಡಿ.1:
ಮೆಕ್ಕೆೆಜೋಳ ಮಾರುಕಟ್ಟೆೆಗೆ ಬರಲು ಆರಂಭವಾಗಿ ಸರಿಸುಮಾರು ಒಂದೂವರೆ ತಿಂಗಳಾಗಿದೆ. ಈಗಾಗಲೇ ಬಹಳಷ್ಟು ರೈತರು ಜೋಳ ಮಾರಾಟ ಮಾಡಿದ್ದಾಾರೆ. ಈಗ ರಾಜ್ಯ ಸರಕಾರ ಮೆಕ್ಕೆೆಜೋಳ ಬೆಂಬಲ ಬೆಲೆಯಲ್ಲಿ ಖರೀದಿಸಲು ಅಧಿಸೂಚನೆ ಹೊರಡಿಸಿದೆ. ಸರಕಾರದ ನಡೆಗೆ ರೈತರು ಆಕ್ರೋೋಶ ವ್ಯಕ್ತಪಡಿಸುತ್ತಿಿದ್ದಾಾರೆ.
ಕೊಪ್ಪಳ ಜಿಲ್ಲೆೆಯಲ್ಲಿ ಈ ಬಾರಿ ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಮೆಕ್ಕೆೆಜೋಳ ಬಿತ್ತನೆ ಮಾಡಿದ್ದಾಾರೆ. ಕಳೆದ ವರ್ಷ ಜಿಲ್ಲೆೆಯಲ್ಲಿ 96 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಮೆಕ್ಕೆೆಜೋಳ ಬಿತ್ತನೆ ಮಾಡಿದ್ದರು. ಕಳೆದ ವರ್ಷ ಕೊಪ್ಪಳ ಮಾರುಕಟ್ಟೆೆಗೆ ಒಟ್ಟು 15.57 ಲಕ್ಷ ಕ್ವಿಿಂಟಾಲ್ ಮೆಕ್ಕೆೆಜೋಳ ಬಂದಿತ್ತು. ಆದರೆ ಈ ಬಾರಿ 1.65 ಲಕ್ಷ ಹೆಕ್ಟೆೆರ್ ಪ್ರದೇಶದಲ್ಲಿ ಮೆಕ್ಕೆೆಜೋಳ ಬಿತ್ತನೆ ಮಾಡಿದ್ದರಿಂದ ಸರಿ ಸಮಾರು 20 ಲಕ್ಷ ಕ್ವಿಿಂಟಾಲ್ಗಿಂತ ಅಧಿಕ ಮೆಕ್ಕೆೆಜೋಳ ಮಾರುಕಟ್ಟೆೆಗೆ ಬರುವ ನಿರೀಕ್ಷೆ ಇದೆ.
ಕಳೆದ ವರ್ಷ ಕೊಪ್ಪಳ ಮಾರುಕಟ್ಟೆೆಯಲ್ಲಿ ಸರಾಸರಿ 2290 ರೂಪಾಯಿ ಕ್ವಿಿಂಟಾಲ್ ನಂತೆ ಜೋಳ ಮಾರಾಟವಾಗಿತ್ತು. ಆದರೆ ಈ ವರ್ಷ ಈಗ ಮಾರುಕಟ್ಟೆೆಯಲ್ಲಿ ಮೆಕ್ಕೆೆಜೋಳದ ದರವು ಪ್ರತಿ ಕ್ವಿಿಂಟಾಲ್ ಗೆ 1700 ರಿಂದ 1800 ರೂಪಾಯಿಗೆ ಇಳಿಕೆಯಾಗಿದೆ.
ಮೆಕ್ಕೆೆಜೋಳಕ್ಕೆೆ 2400 ರೂಪಾಯಿ ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರಕಾರ ನಿಗದಿ ಮಾಡಿದೆ. ಬೆಂಬಲ ಬೆಲೆಯಷ್ಟು ದರಕ್ಕೆೆ ಮಾರಾಟವಾದರೆ ರೈತರಿಗೆ ನಷ್ಟವಾಗುವುದಿಲ್ಲ ಆದರೆ ಈಗ ಮಾರುಕಟ್ಟೆೆಯಲ್ಲಿ ಮಾರಾಟವಾಗುವ ದರಕ್ಕೆೆ ಮಾರಾಟ ಮಾಡಿದರೆ ರೈತನಿಗೆ ಲಾಭಕ್ಕಿಿಂತ ನಷ್ಟವೇ ಹೆಚ್ಚಾಾಗಲಿದೆ. ಅದಕ್ಕಾಾಗಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಬೇಕೆಂದು ರೈತರು ಆಗ್ರಹಿಸುತ್ತಿಿದ್ದಾಾರೆ.
ಈಗಿನ ಲೆಕ್ಕದ ಪ್ರಕಾರ ಶೇ 40 ರಷ್ಟು ರೈತರು ಮೆಕ್ಕೆೆಜೋಳ ಮಾರಾಟ ಮಾಡಿದ್ದಾಾರೆ. ಈಗ ರಾಜ್ಯ ಸರಕಾರ ಬೆಂಬಲ ಬೆಲೆಯಲ್ಲಿ ಜೋಳ ಖರೀದಿಸಲು ಮುಂದಾಗಿದೆ. ಈಗಷ್ಟೆೆ ನೋಂದಣಿ ಆರಂಭಿಸಿದೆ. ಖರೀದಿ ಪ್ರಕ್ರಿಿಯೆ ಆರಂಭಿಸುತ್ತಲೆ ಬಹುತೇಕ ಮೆಕ್ಕೆೆಜೋಳ ರೈತರು ಮಾರಾಟ ಮಾಡುವ ಸಾಧ್ಯತೆಯೂ ಇದೆ.
6 ಲಕ್ಷ ಕ್ವಿಿಂಟಾಲ್ ಮೆಕ್ಕೆಜೋಳ ಮಾರಾಟ

