ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.02:
ರಾಜ್ಯ ಸರಕಾರ ಹಾಗೂ ಕೆಕೆಆರ್ಡಿಬಿ ಸಹಭಾಗಿತ್ವದಲ್ಲಿ ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ 6 ಕರ್ನಾಟಕ ಪಬ್ಲಿಕ್(ಕೆಪಿಎಸ್) ಶಾಲೆಗಳು ಮಂಜೂರಾಗಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಸೋಮವಾರ ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು. ಕಲ್ಯಾಾಣ ಕರ್ನಾಟಕ ಭಾಗದ ಶಿಕ್ಷಣಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಿದೆ. ಪ್ರಾಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ಒದಗಿಸಲುವ ಸರಕಾರದ ಪ್ರಥಮ ಆದ್ಯತೆಯಾಗಿದೆ. ಅಲಬನೂರು, ದಿದ್ದಿಗಿ, ಬಾದರ್ಲಿ, ಪಗಡದಿನ್ನಿಿ, ಜಾಲಿಹಾಳ ಹಾಗೂ ಮಾಡಶಿರವಾರ ಗ್ರಾಾಮಕ್ಕೆೆ ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ಒಂದನೇ ತರಗತಿಯಿಂದ 12ನೇ ತರಗತಿಯವರೆಗೆ ಒಂದೇ ಸೂರಿನಲ್ಲಿ ಬಡಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯಲಿ ಎನ್ನುವ ಉದ್ದೇಶದಿಂದ ಹೊಂದಲಾಗಿದೆ. ಪ್ರತಿ ಶಾಲೆಗೆ 4-6 ಕೋಟಿ ಅನುದಾನ ದೊರೆಯಲಿದೆ. ಶಾಲಾ ಕಟ್ಟಡ, ಕ್ರೀೆಡಾಂಗಣ, ಸ್ಮಾರ್ಟ್ಕ್ಲಾಾಸ್, ಪಿಠೋಪಕರಣಗಳು, ಸೈನ್ಸ್ಲ್ಯಾಾಬ್ ಸೇರಿದಂತೆ ಎಲ್ಲಾಾ ಮೂಲಭೂತ ಸೌಲಭ್ಯಗಳು ಶಾಲೆಯಲ್ಲಿ ಸಿಗಲಿದೆ. ಸುಮಾರು 1200 ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆೆ ಅವಕಾಶವಿದೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರಕಾರದಿಂದ 500 ಕೆಪಿಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಅದರಲ್ಲೂ ಸಿಂಧನೂರು ತಾಲೂಕಿಗೆ ಮೂರು ಶಾಲೆಗಳು ಮಂಜೂರಾಗಿದ್ದವು. ಮುಕ್ಕುಂದಾ, ಸಾಲಗುಂದಾ ಹಾಗೂ ಆಯನೂರು ಗ್ರಾಾಮಗಳಲ್ಲಿ ಕೆಪಿಎಸ್ ಶಾಲೆಗಳು ಆರಂಭಗೊಳ್ಳಲಿವೆ. ಈ ಹಿಂದೆ ಜವಳಗೇರಾ ಹಾಗೂ ಅಂಬಾಮಠದಲ್ಲಿ ಕೆಪಿಎಸ್ ಶಾಲೆಗಳಿವೆ. ಒಟ್ಟಾರೆಯಾಗಿ ಸಿಂಧನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ 11 ಕೆಪಿಎಸ್ ಶಾಲೆಗಳು ಮಂಜೂರಾಗಿವೆ. ಇತಿಹಾಸದಲ್ಲೇ ಇಷ್ಟೊೊಂದು ಶಾಲೆಗಳನ್ನು ಉನ್ನತಕ್ಕೇರಿಸಲಾಗುತ್ತಿಿದೆ. ಎಂದು ತಿಳಿಸಿದರು.
ಈ ಅವಧಿಯಲ್ಲಿ 9 ಪ್ರೌಢಶಾಲೆಗಳಿಗೆ ಜಾಗ ಒದಗಿಸಿ, ಕಟ್ಟಡ ಕಟ್ಟಲಾಗಿದೆ. ಸೋಮಲಾಪುರ, ಮಾಡಶಿರವಾರ, ಶಾಸಕರ ಮಾದರಿ ಶಾಲೆ, ರೌಡಕುಂದಾ ಶಾಲೆಗಳ ನೂತನ ಕಟ್ಟಡಗಳು ಮಂಗಳವಾರ ಉದ್ಘಾಟನೆಗೊಳ್ಳಲಿವೆ. ಕ್ಷೇತ್ರದ 11 ವಸತಿ ನಿಲಯಗಳಿಗೆ 9-10 ಕೋಟಿ ವೆಚ್ಚದಲ್ಲಿ ಬೆಡ್, ಮಂಚ ಸೇರಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ಕಾಮಗಾರಿಗಳನ್ನು ರಾಜ್ಯ ಸರಕಾರವೇ ತೆಂಗು ಅಭಿವೃದ್ದಿ ನಿಗಮಕ್ಕೆ ವಹಿಸಿದೆ. ಜೊತೆಗೆ ತಾ.ಪಂ. ಅನುದಾನದಲ್ಲಿ ಎಲ್ಲಾ ಪ್ರೌಢಶಾಲೆ, ಪ.ಪೂ.ಕಾಲೇಜುಗಳಿಗೆ ಸ್ಮಾರ್ಟ್ ಕ್ಲಾಾಸ್ ಒದಗಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಾಕ್ ಕಾಂಗ್ರೆೆಸ್ ಗ್ರಾಾಮೀಣ ಘಟಕದ ಅಧ್ಯಕ್ಷ ಎಂ.ಲಿಂಗಪ್ಪ ದಢೇಸೂಗುರು, ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಮುಖಂಡ ಪ್ರಭುರಾಜ್ ಕರ್ೂರಮಠ ಇದ್ದರು.
ಗುಣಮಟ್ಟದ ಶಿಕ್ಷಣಕ್ಕಾಗಿ ಅಗತ್ಯ ಸೌಲಭ್ಯ ಕಲ್ಪಿಸಲು ಸರಕಾರ ಬದ್ದ 6 ಕರ್ನಾಟಕ ಪಬ್ಲಿಕ್ ಶಾಲೆಗಳು ಮಂಜೂರು – ಬಾದರ್ಲಿ

