ಸುದ್ದಿಮೂಲ ವಾರ್ತೆ ರಾಯಚೂರು , ಡಿ.02:
ತುಂಗಭದ್ರಾ ನೀರಾವರಿ ಕಾರ್ಮಿಕರಿಗೆ ಉದ್ಯೋಗದ ಭದ್ರತೆ, ವರ್ಷಪೂರ್ತಿ ಕೆಲಸ, ಸೌಲಭ್ಯ ನೀಡದ ಗುತ್ತಿಿಗೆದಾರರ ಕಪ್ಪುು ಪಟ್ಟಿಗೆ ಸೇರಿಸಲು ತುಂಗಭದ್ರಾ ನೀರಾವರಿ ಕಾರ್ಮಿಕರ ಸಂಘ ಒತ್ತಾಾಯಿಸಿದೆ.
ಇಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗೆ ಮನವಿ ಸಲ್ಲಿಸಿದ ಪಕ್ಷದ ಮುಖಂಡರು ಕಾರ್ಮಿಕರ ವೇತನ, ಪಿಎ್, ಇಎಸ್ಐ ಪಾವತಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು, ಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರ ಪಾವತಿಗೆ ಶಿಾರಸು ಮಾಡಬೇಕು
ತುಂಗಭದ್ರಾ ನೀರಾವರಿಯ ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ನೀರು ನಿಂತ ನಂತರ ನಿಗಮದ ಅನುದಾನ ಬಿಡುಗಡೆ ಮಾರ್ಗಸೂಚಿಗಳನ್ವಯ, ಸರ್ಕಾರದ ನಿರ್ದೇಶನ, ತಾವುಗಳು ನೀಡಿರುವ ವರದಿಯನ್ವಯ ಮುಖ್ಯ ಅಭಿಯಂತರವರ ಶಿಾರಸ್ಸಿಿಗೆ ಕರ್ನಾಟಕ ನೀರಾವರಿ ನಿಗಮದ ನಿರ್ದೇಶಕರ ಅಂತಿಮ ಅನುಮೋದನೆಯಂತೆ ಕೆಲಸದಲ್ಲಿ ಮುಂದುವರೆಸಲು ಕೋರಿದರು.
ಯರಮರಸ್ ವೃತ್ತದ ಸಿಂಧನೂರು, ಸಿರಿವಾರ್ ಮತ್ತು ಯರಮರಸ್ ವಿಭಾಗದ ಎಲ್ಲಾ ಉಪ ವಿಭಾಗದಲ್ಲಿ ಕೆಲಸ ಮಾಡುತ್ತಿಿರುವ ಕಾರ್ಮಿಕರಿಗೆ ಜೂನ್ನಿಂದ ಇಂದಿನವರೆಗೂ ತಕ್ಷಣವೇ ಬಾಕಿ ವೇತನ, ಪಿಎ್, ಇಎಸ್ಐ ಪಾವತಿಗೆ ಕ್ರಮ ವಹಿಸಬೇಕು, ಏಪ್ರಿಿಲ್ ತಿಂಗಳಿನಿಂದ ಕಾರ್ಮಿಕರ ತುಟ್ಟಿಿ ಭತ್ಯೆೆ ಖಾತೆಗೆ ಜಮಾ ಮಾಡಬೇಕು, ಕಾಲುವೆ ಮೇಲೆ ಕೆಲಸ ಮಾಡುವ ಕಾರ್ಮಿಕರಿಗೆ ಸಮವಸ, ಐಡಿ ಕಾರ್ಡ್ ಸೇರಿದಂತೆ ಮೂಲ ಸೌಕರ್ಯ ನೀಡಬೇಕು, 26 ದಿನಗಳ ವೇತನ ಪಾವತಿ ಮಾಡುವುದನ್ನು ತಕ್ಷಣ ನಿಲ್ಲಿಸಿ ಮೊದಲಿನಂತೆ ವೇತನ ಪಾವತಿ ಮಾಡಬೇಕು ಎಂಬ ಬೇಡಿಕೆಗಳ ಶೀಘ್ರದಲ್ಲಿ ಈಡೇರಿಸಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ. ನಾಗಲಿಂಗಸ್ವಾಾಮಿ, ಪ್ರಧಾನ ಕಾರ್ಯದರ್ಶಿ ಎಂ. ಬಸವರಾಜ, ಜಿಲ್ಲಾಧ್ಯಕ್ಷ ಅಜೀಜ್ ಜಾಗೀರದಾರ, ಯರಮರಸ್ ವಿಭಾಗದ ಅಧ್ಯಕ್ಷ ಸಿದ್ದಪ್ಪಗೌಡ, ಪ್ರಹ್ಲಾಾದ್ ರಾವ್, ಜಿಲಾನಿಪಾಷ, ಜಗದೀಶ್ ಯರಗೇರ, ನಿಸಾರ ಅಹಮದ್, ಲಕ್ಷ್ಮಣ, ಪರಶುರಾಮ, ನರಸಿಂಹ, ರಾಮಣ್ಣ ಸೇರಿದಂತೆ ಅನೇರಿದ್ದರು.

