ಸುದ್ದಿಮೂಲ ವಾರ್ತೆ ಮಸ್ಕಿ, ಡಿ.02:
ರೈತರಿಗೆ ಶಾಸಕ ಆರ್ ಬಸನಗೌಡ ತುರುವಿಹಾಳ ಅನ್ಯಾಾಯ ಮಾಡಿದ್ದಾರೆ ಎಂದು ಬಿಜೆಪಿ ಪಕ್ಷದ ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್ ಹಾಗೂ ಬಿಜೆಪಿ ಮುಖಂಡ ಶಿವುಕುಮಾರ ವಟಗಲ್ ಅವರು ಆರೋಪ ಮಾಡಿದ್ದು ಸಲ್ಲದು ಎಂದು ಅಮರೇಶ ಪಾಮನಕಲ್ಲೂರು ಆರೋಪಿಸಿದ್ದಾರೆ.
ಪಟ್ಟಣದ ಪತ್ರಿಿಕಾ ಭವನದಲ್ಲಿ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದ ಅವರು, 5ಎ ನೀರಾವರಿ ಕಾಲುವೆ ಮತ್ತು ನಂದವಾಡಗಿ ಏತ ನೀರಾವರಿ ಯೋಜನೆ, ಕೆರೆ ತುಂಬುವ ಕಾಮಗಾರಿಗಳ ಬಗ್ಗೆೆ ಬಿಜೆಪಿ ಮುಖಂಡರು ಬಹಿರಂಗ ಚರ್ಚೆಗೆ ಬರಲಿ ಎಂದು ಕಾಂಗ್ರೆೆಸ್ ಮುಖಂಡ ಅಮರೇಶ ಪಾಮನ ಕಲ್ಲೂರು ಬಿಜೆಪಿ ಮುಖಂಡರಿಗೆ ಆಹ್ವಾಾನ ನೀಡಿದರು.
ಪಟ್ಟಣದಲ್ಲಿ ಬಿಜೆಪಿ ಮುಖಂಡರು ಇತ್ತೀಚಿಗೆ ಹಮ್ಮಿಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಪ್ರತಾಪ ಗೌಡ ಪಾಟೀಲ್, ಬಿಜೆಪಿ ಮುಖಂಡ ಶಿವುಕುಮಾರ ವಟಗಲ್ ಅವರು ಮಾತನಾಡಿ, ನಂದವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ ಎಂದು ಗೊತ್ತಿಿದ್ದರೂ ಶಾಸಕ ಆರ್ ಬಸನಗೌಡ ತುರ್ವಿಹಾಳ ಕಾಲುವೆಗಳಿಗೆ ನೀರು ಹರಿಸಲು ವಿಲರಾಗಿದ್ದಾರೆ ಎಂದು ಆರೋಪಿಸಿರುವುದು ಹಾಸ್ಯಾಾಸ್ಪದ ಎಂದರು. 5ಎ ನೀರಾವರಿ ಯೋಜನೆ ಅನುಷ್ಠಾಾನಕ್ಕೆೆ ಶಾಸಕರು ಪ್ರಾಾಮಾಣಿಕ ಪ್ರಯತ್ನ ನಡೆಸಿದ್ದಾರೆ. ಕಳೆದೆರೆಡು ವರ್ಷಗಳ ಹಿಂದಿನ ಬಜೆಟ್ ನಲ್ಲಿ 5ಎ ಕಾಲುವೆ ಕಾರ್ಯಗತ ಗೊಳಿಸಲು ಸರಕಾರ 990 ಕೋಟಿ ಹಣ ಮೀಸಲಿಟ್ಟಿಿದೆ ಈ ಬಗ್ಗೆೆ ದಾಖಲೆಗಳ ಸಹಿತ ಚರ್ಚೆಗೆ ಸಿದ್ದ ಎಂದು ಬಿಜೆಪಿ ಮುಖಂಡರಿಗೆ ಅಮರೇಶ ಕಲ್ಲೂರು ಆಹ್ವಾಾನ ನೀಡಿದರು. ಶಿವುಕುಮಾರ ವಟಗಲ್ ಅವರು ಶಾಸಕ ಬಸನಗೌಡ ತುರ್ವಿಹಾಳ ಅವರಿಗೆ ಘೇರಾವ ಹಾಕುವ ಬೆದರಿಕೆ ಹಾಕಿರುವುದು ಖಂಡನೀಯ, ಕ್ಷೇತ್ರದ ಜನರು ನಿಮಗೆ ಮನೆಯಲ್ಲಿ ಕೂರಿಸಿದ್ದಾರೆ ಎಂದು ಕಟುಕಿದರು.
ಈ ಸಂದರ್ಭದಲ್ಲಿ ಪ್ರಾಾಥಮಿಕ ಕೃಷಿ ಸಹಕಾರಿ ಅಧ್ಯಕ್ಷ ನಾಗಭೂಷಣ, ಮಲ್ಲಯ್ಯ ಮುರಾರಿ ಇದ್ದರು.
ಅಭಿವೃದ್ಧಿ ಕಾಮಗಾರಿ ; ಶಾಸಕ ಬಸನಗೌಡ ವಿರುದ್ಧ ಆರೋಪ ಸಲ್ಲ ಬಹಿರಂಗ ಚರ್ಚೆಗೆ ಅಮರೇಶ ಕಲ್ಲೂರ ಸವಾಲು

