ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.02:
ರಾಜ್ಯ ಸರಕಾರ ಹಾಗೂ ಕಲ್ಯಾಾಣ ಕರ್ನಾಟಕ ಅಭಿವೃದ್ದಿ ಮಂಡಳಿಯು ಶಿಕ್ಷಣ ಹಾಗೂ ಆರೋಗ್ಯಕ್ಕೆೆ ಮೊದಲ ಆದ್ಯತೆ ನೀಡಿವೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ತಾಲೂಕಿನ ಸೋಮಲಾಪುರ ಗ್ರಾಾಮದಲ್ಲಿ 2023-24ನೇ ಸಾಲಿನ ಕೆಕೆಆರ್ಡಿಬಿಯ ಮೈಕ್ರೋೋ ಅಕ್ಷರ ಆವಿಷ್ಕಾಾರ ಯೋಜನೆಯಡಿ 1.99 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸರಕಾರಿ ಪ್ರೌೌಢಶಾಲೆಯ ನೂತನ ಕಟ್ಟಡ ಉದ್ಘಾಾಟಿಸಿ ಅವರು ಮಾತನಾಡಿದರು. ಗುಣಮಟ್ಟದ ಶಿಕ್ಷಣಕ್ಕಾಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಿಸಲು ಎರಡು ವರ್ಷದಲ್ಲಿ ಕೆಕೆಆರ್ಡಿಬಿಯಿಂದ ಶಿಕ್ಷಣ ಇಲಾಖೆಗೆ 1500 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. 70 ವರ್ಷಗಳ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಶಿಕ್ಷಣ ಇಲಾಖೆಗೆ ಇಷ್ಟೊೊಂದು ದೊಡ್ಡ ಮಟ್ಟದ ಅನುದಾನ ನೀಡಲಾಗಿದೆ. ಗ್ರಾಾಮೀಣ ವಿದ್ಯಾಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು. ಎಲ್ಲಾಾ ರಂಗದಲ್ಲೂ ನಮ್ಮ ಭಾಗದ ವಿದ್ಯಾಾರ್ಥಿಗಳು ಛಾಪು ಮೂಡಿಸಬೇಕು ಎನ್ನುವ ಗುರಿ ಹೊಂದಿದ್ದೇವೆ ಎಂದರು.
ಸಿಂಧನೂರು ಮತಕ್ಷೇತ್ರಕ್ಕೆೆ 11 ಕರ್ನಾಟಕ ಪಬ್ಲಿಿಕ್ ಶಾಲೆಗಳು ಮಂಜೂರಾಗಿವೆ. ಪ್ರಸಕ್ತ ವರ್ಷ 20 ಶಾಲೆಗಳಲ್ಲಿ ಎಲ್ಕೆಜಿ ಆರಂಭಿಸಲು ಸರಕಾರ ಅನುಮೋದನೆ ನೀಡಿದೆ. ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಸಂಸ್ಕಾಾರ, ಪರಂಪರೆ, ದೇಶದ ಇತಿಹಾಸ ತಿಳಿಸುವ ಮೂಲಕ ಸರ್ವತೋಮುಖ ಅಭಿವೃದ್ದಿಗೆ ಮುನ್ನುಡಿ ಬರೆಯಬೇಕಿದೆ. ಎಲ್ಲಾಾ ಶಾಲೆ, ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿಿದೆ. ಆದರೆ ಲಿತಾಂಶದಲ್ಲಿ ಪ್ರಗತಿ ಕಾಣದಿರುವದು ವಿಷಾದನೀಯ. ಶಿಕ್ಷಕರಿಗೆ ಪಾಠ ಕಲಿಸುವ ಅಗತ್ಯವಿದೆ. ಕೂಡಲೇ ನನ್ನ ನೇತೃತ್ವದಲ್ಲಿ ಸಭೆ ಕರೆಯಿರಿ ಎಂದು ಕ್ಷೇತ್ರಶಿಕ್ಷಣಾಧಿಕಾರಿಗೆ ಸೂಚಿಸಿದ ಶಾಸಕ ಬಾದರ್ಲಿ ಈ ಶಾಲೆಗೆ ಬೇಕಾದ ರಸ್ತೆೆ, ಕಾಂಪೌಂಡ್ ನಿರ್ಮಾಣಕ್ಕೆೆ ಆದ್ಯತೆ ನೀಡಲಾಗುವುದು ಎಂದರು.
ವಿಧಾನ ಪರಿಷತ್ ಶಾಸಕ ಬಸನಗೌಡ ಬಾದರ್ಲಿ ಮಾತನಾಡಿ, ಶಿಕ್ಷಣ ಅತ್ಯಂತ ಮಹತ್ವದ್ದು, ಹಣ ಇರುವವರಿಗೆ ಮಾತ್ರ ಗುಣಮಟ್ಟದ ಶಿಕ್ಷಣವಲ್ಲ. ನಮ್ಮ ಸರಕಾರ ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಕ್ರಾಾಂತಿ ಮಾಡಿದೆ. ಶಿಕ್ಷಣಕ್ಕೆೆ ಬೇಕಾಗುವ ಅಗತ್ಯ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿಿದೆ. ಗ್ರಾಾಮೀಣ ವಿದ್ಯಾಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕಿದೆ. 371(ಜೆ) ಜಾರಿಯಿಂದ ನಮ್ಮ ಭಾಗಕ್ಕೆೆ ಶಿಕ್ಷಣ, ಉದ್ಯೋೋಗ ಕ್ಷೇತ್ರದಲ್ಲಿ ಹೆಚ್ಚು ಅವಕಾಶಗಳನ್ನು ಕಲ್ಪಿಿಸಿದೆ. ವಿದ್ಯಾಾರ್ಥಿಗಳು ಇದನ್ನು ಬಳಸಿಕೊಳ್ಳಬೇಕು. ತಾಲೂಕಿನ 264 ಶಾಲೆಗಳಿಗೆ ತಮ್ಮ ಅನುದಾನದಲ್ಲಿ ಸ್ಮಾಾರ್ಟ್ಕ್ಲಾಾಸ್ ಮಾಡಲು ಈಗಾಗಲೇ ಅನುಮೋದನೆ ಸಿಕ್ಕಿಿದೆ. ಶೀಘ್ರವೇ ಎಲ್ಲಾಾ ಶಾಲೆಗಳಿಗೂ ಸ್ಮಾಾರ್ಟ್ಕ್ಲಾಾಸ್ ಅಳವಡಿಸಲಾಗುವುದು ಎಂದರು.
ಗ್ರಾಾ.ಪಂ.ಅಧ್ಯಕ್ಷೆ ರೇಣುಕಮ್ಮ ಹುಸೇನಪ್ಪ, ಉಪಾಧ್ಯಕ್ಷೆ ನಾಗಮ್ಮ ಅಂಬಣ್ಣ, ಗ್ರಾಾಮೀಣ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಲಿಂಗಪ್ಪ ದಡೇಸ್ಗೂರು, ನಗರ ಬ್ಲಾಾಕ್ ಕಾಂಗ್ರೆೆಸ್ ಅಧ್ಯಕ್ಷ ಖಾಜಿ ಮಲಿಕ್, ಕಾಂಗ್ರೆೆಸ್ ಮುಖಂಡರಾದ ರಾಜುಗೌಡ ಬಾದರ್ಲಿ, ಅಶೋಕ ಉಮಲೂಟಿ, ಬಸವರಾಜ ಹಿರೇಗೌಡರ್, ಎನ್.ಅಮರೇಶ, ಮಲ್ಲನಗೌಡ ಮಾವಿನಮಡ್ಗು, ರಾಮನಗೌಡ ಮಲ್ಕಾಾಪುರ, ಬಿಇಓ ಬಸಲಿಂಗಪ್ಪ, ಎಸ್ಡಿಎಂಸಿ ಅಧ್ಯಕ್ಷ ಚಂದ್ರಶೇಖರಗೌಡ, ಮುಖ್ಯಗುರು ನಿರ್ಮಲಾ ಡಿ ಸೇರಿದಂತೆ ಅನೇಕರು ಇದ್ದರು.
ಸೋಮಲಾಪುರ, ಮಾಡಶಿರವಾರ ಸರಕಾರಿ ಪ್ರೌೌಢಶಾಲಾ ಕಟ್ಟಡ ಉದ್ಘಾಾಟನೆ ಶಿಕ್ಷಣ, ಆರೋಗ್ಯಕ್ಕೆ ಮೊದಲ ಆದ್ಯತೆ – ಹಂಪನಗೌಡ ಬಾದರ್ಲಿ

