ಸುದ್ದಿಮೂಲ ವಾರ್ತೆ ಕೊಪ್ಪಳ, ಡಿ.02:
ಮುಂಜಾನೆ ವೇಳೆ ಶಾಲಾ ಕಾಲೇಜಿಗೆ ಬರುವ ವಿದ್ಯಾಾರ್ಥಿಗಳು ನಗರಕ್ಕೆೆ ಬರಲು ಪರದಾಡುವಂತಾಗಿದೆ. ಬಸ್ ನಿಲುಗಡೆ. ಸಮಯಕ್ಕೆೆ ಸರಿಯಾಗಿ ಬಸ್ ಬಾರದ ಹಿನ್ನೆೆಲೆಯಲ್ಲಿ ವಿದ್ಯಾಾರ್ಥಿಗಳು ದಿಢೀರ್ ಪ್ರತಿಭಟನೆ ನಡೆಸಿದ ಘಟನೆ ಕೊಪ್ಪಳ ತಾಲೂಕಿನ ಗುಳದಳ್ಳಿಿಯಲ್ಲಿ ನಡೆದಿದೆ.
ಕೊಪ್ಪಳ ತಾಲೂಕಿನ ಗುಳದಳ್ಳಿಿಯು ರಾಜ್ಯ ಹೆದ್ದಾಾರಿ ಶಿಗ್ಗಾಾಂವ್ – ಕಲ್ಮಲ್ ರಸ್ತೆೆಯಲ್ಲಿದೆ. ಇಲ್ಲಿಂದ ನಿತ್ಯ ನೂರಾರು ವಿದ್ಯಾಾರ್ಥಿಗಳು ಕೊಪ್ಪಳಕ್ಕೆೆ ಶಾಲೆ ಹಾಗು ಕಾಲೇಜಿಗೆ ಬರುತ್ತಾಾರೆ. ಮುಂಜಾನೆ ಶಾಲಾ ಅವಧಿಗೆ ಬರುವ ವಿದ್ಯಾಾರ್ಥಿಗಳಿಗೆ ಬಸ್ ಸಮಸ್ಯೆೆಯಾಗಿದೆ. ಕೆಲವು ಬಸ್ ಗಳು ವೇಗದೂತ ಬಸ್ ಗಳಾಗಿವೆ. ಕೆಲವು ತಡೆ ರಹಿತ ಬಸ್ ಗಳಿವೆ. ಇನ್ನೂ ಕೆಲವು ಬಸ್ ಗಳು ನಿಲುಗಡೆ ಮಾಡಬೇಕಾಗಿದ್ದರೂ ಗಂಗಾವತಿ ಕಡೆಯಿಂದ ಬರುವಾಗ ಬಸ್ ಭರ್ತಿಯಾಗಿರುತ್ತದೆ. ಈ ಕಾರಣಕ್ಕೆೆ ಗುಳದಳ್ಳಿಿಯಲ್ಲಿ ಬಸ್ ನಿಲ್ಲುವುದಿಲ್ಲ.
ಶಾಲಾ ಅವಧಿಯೊಳಗೆ ಕೊಪ್ಪಳ ಮುಟ್ಟಲು ಬಂದಿರುವ ವಿದ್ಯಾಾರ್ಥಿಗಳು ಬಸ್ ನಿಲ್ಲದೆ ಇರುವದರಿಂದ ತಡವಾಗಿ ಶಾಲೆ ಕಾಲೇಜಿಗೆ ಹೋಗಬೇಕಾಗಿದೆ. ಇದು ನಿತ್ಯ ನಡೆಯುತ್ತಿಿರುವದರಿಂದ ಬೇಸತ್ತ ವಿದ್ಯಾಾರ್ಥಿಗಳು ಇಂದು ದಿಢೀರ್ ಪ್ರತಿಭಟನೆ ನಡೆಸಿದರು.
ವಿದ್ಯಾಾರ್ಥಿಗಳ ಪ್ರತಿಭಟನೆಗೆ ಗ್ರಾಾಮಸ್ಥರೂ ಸಹ ಸಹಕಾರ ನೀಡಿದ್ದು ಗುಳದಳ್ಳಿಿಗೆ ಶಾಲಾ ಕಾಲೇಜು ಅವಧಿಗೆ ಎಲ್ಲಾಾ ಬಸ್ ಗಳನ್ನು ನಿಲ್ಲಿಸಬೇಕು. ಇಲ್ಲಿ ನಿಲುಗಡೆಗೆ ನಿಗಿದಿಯಾದ ಬಸ್ ಗಳು ನಿಲ್ಲಿಸಬೇಕೆಂದು ಒತ್ತಾಾಯಿಸಿದರು.
ಶಾಲಾ ಕಾಲೇಜು ವೇಳೆಗೆ ಬಸ್ ಬಿಡಲು ಆಗ್ರಹಿಸಿ ಪ್ರತಿಭಟನೆ

