ಸುದ್ದಿಮೂಲ ವಾರ್ತೆ ಹೊಸಪೇಟೆ, ಡಿ.02:
ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ ತರಬೇತಿಯಲ್ಲಿ ಭಾಗವಹಿಸಿದ ವಿ ದ್ಯಾಾರ್ಥಿಗಳಲ್ಲಿ ಸ್ವಯಂಶಿಸ್ತು ಮೈಗೂಡಿಸುತ್ತದೆ.ಮಕ್ಕಳು ದೇಶಕ್ಕೆೆ ಕೊಡುಗೆ ನೀಡು ವ ಉತ್ತಮ ಪ್ರಜೆ ಗಳಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಹಾಗೂ ಭಾರತ್ ಸ್ಕೌೌಟ್ಸ್-ಗೈಡ್ ಜಿಲ್ಲಾ ಮುಖ್ಯ ಆಯುಕ್ತ ವೆಂಕಟೇಶ್ ರಾಮಚಂದ್ರ ಪ್ಪ ಹೇಳಿದರು.
ನಗರದ ಸುರಭಿ ವಿದ್ಯಾಾನಿಕೇತನ ಶಾಲೆ-ಕಾಲೇಜು ಹೊಸೂರಿನಲ್ಲಿ ಭಾರತ್ ಸ್ಕೌೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಹಾಗೂ ಜಿಲ್ಲಾ ಸಂಸ್ಥೆೆ ವಿಜಯನಗರ ಹಾಗೂ ಸುರಭಿ ವಿದ್ಯಾಾನಿಕೇತನ ಶಾಲೆ ಕಾಲೇಜಿನ ಸಹಯೋಗದಲ್ಲಿ ಹಮ್ಮಿಿಕೊಂಡಿದ್ದ ರಾಜ್ಯ ಮಟ್ಟದ ರಾಜ್ಯ ಪುರಸ್ಕಾಾರ ಪರೀಕ್ಷೆ ಶಿಬಿರವನ್ನು ಉದ್ಘಾಾಟಿಸಿ ಅವರು ಮಾತನಾಡಿದರು. ರಾಜ್ಯದ ಅತ್ಯುನ್ನತ ಪರೀಕ್ಷೆಯಾದ ರಾಜ್ಯ ಪುರಸ್ಕಾಾರ ಪರೀಕ್ಷೆಯನ್ನು ಬರೆಯುತ್ತಿಿರುವ ಎಲ್ಲಾ ವಿದ್ಯಾಾರ್ಥಿಗಳು ಉತ್ತೀರ್ಣರಾಗಿ. ಇಂದಿನ ಮಕ್ಕಳೇ ಮುಂದಿನ ಪ್ರಜೆಗ ಳು ಎಂಬ ನಾಣ್ನುಡಿಯಂತೆ, . ಬಾಲ್ಯದಿಂದಲೇ ಮಕ್ಕಳಿಗೆ ಸ್ಕೌೌಟ್ಸ್-ಗೈಡ್ಸ್ ಸಂಸ್ಥೆೆ ಯು ಚಟುವಟಿಕೆ, ಶಿಬಿರಗಳ ಮೂಲಕ ಸರ್ವಾಂಗೀಣ ಬದುಕು ಕಟ್ಟಿಿಕೊಳ್ಳುವುದ ನ್ನು ಕಲಿಸುತ್ತಿಿರುವುದು ಶ್ಲಾಾಘನೀಯವಾಗಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಶೇಖರಪ್ಪ ಹೊರಪೇಟೆ ಮಾತನಾಡಿ, ಮಕ್ಕಳು ಪಠ್ಯ ಶಿಕ್ಷ ಣದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ಮಾನಸಿಕವಾ ಗಿ ಹಾಗೂ ದೈಹಿಕವಾಗಿ ಬಲಿಷ್ಠರಾಗಲು ಸಾಧ್ಯವಾಗುತ್ತದೆ. ಸ್ಕೌೌಟ್ಸ್-ಗೈಡ್ಸ್ ಕೆಲವು ಸಾಹಸಮಯ ಚಟುವಟಿಕೆಗಳು, ಶಿಬಿರಗಳು ಮಕ್ಕಳನ್ನು ಧೈರ್ಯವಂತರನ್ನಾಾಗಿ ಸುತ್ತದೆ ಎಂದು ಹೇಳಿದರು
ಈ ಸಂಧರ್ಭದಲ್ಲಿ ಶಾಲೆಯ ಆಡಳಿತಾಧಿಕಾರಿ ಶ್ರೀಧರ್, ಸಂಸ್ಥೆೆಯ ಉಪಾಧ್ಯಕ್ಷೆ ಕಮಲಾ ದೀಕ್ಷಿತ್, ಸ್ಕೌೌಟ್ಸ ಜಿಲ್ಲಾ ಆಯುಕ್ತರು ಎಲ್.ಬಸವರಾಜ್, ಗೈಡ್ನ ಜಿಲ್ಲಾ ಆಯುಕ್ತರು ಪಿ.ಸುನಂದ, ಜಿಲ್ಲಾ ಕಾರ್ಯದರ್ಶಿ ಕೆ.ರಾಜಶೇಖರ, ಜಿಲ್ಲಾ ಜಂಟಿ ಕಾರ್ಯದರ್ಶಿ ಅಕ್ಕಮಹಾದೇವಿ, ಶಿಬಿರದ ನಾಯಕರಾದ ನಾಗರಾಜ್, ಅಕ್ಕಮಹಾದೇವಿ, ಜಿಲ್ಲಾ ತರಬೇತಿ ಆಯುಕ್ತೆೆ ಎ.ರೇಣುಕಾ, ಸ್ಥಳೀಯ ಸಂಸ್ಥೆೆ ಕಾರ್ಯದರ್ಶಿ ತಿಪ್ಪೇಸ್ವಾಾಮಿ, ನಟರಾಜ್, ಜಿಲ್ಲಾ ಸಂಘಟಕ ಪಾಟೀಲ್ ಜಿಬಿಸಿ, ಶರೀಪ್ ಹತ್ತಿಿಮತ್ತೂರ ಇತರರು ಭಾಗವಹಿಸಿದ್ದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯಿಂದ ದೇಶದ ಉತ್ತಮ ಪ್ರಜೆಗಳಾಗಲು ಸಾಧ್ಯ : ಡಿಡಿಪಿಐ ವೆಂಕಟೇಶ್ ರಾಮಚಂದ್ರಪ್ಪ

