ಸುದ್ದಿಮೂಲ ವಾರ್ತೆ ಕೊಪ್ಪಳ , ಡಿ.01:
ತಾಲೂಕಿನ ಹಾಲವರ್ತಿ ಗ್ರಾಾಮದ ಹತ್ತಿಿರ ಸ್ಥಾಾಪನೆಗೊಳ್ಳಲಿರುವ ಬಲ್ಡೋೋಟ ಸ್ಟೀಲ್ ಅಂಡ್ ಐರನ್ ಪರ್ವ ಲಿಮಿಟೆಡ್ (ಆಖಔ) ಕಾರ್ಖಾನೆ ಆರಂಭಿಸಲು ಸರ್ಕಾರ ತಕ್ಷಣ ಅನುಮತಿ ನೀಡಬೇಕು. ಇಲ್ಲದಿದ್ದರೆ ಭೂಮಿ ಕಳೆದುಕೊಂಡ ರೈತ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಭೂಮಿ ಕಳೆದುಕೊಂಡ ರೈತ ಹನುಮಂತಪ್ಪ ಕೌದಿ ಸರ್ಕಾರವನ್ನು ಒತ್ತಾಾಯಿಸಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ಇತ್ತಿಿಚೆಗೆ ಸುದ್ದಿಗೋಷ್ಠಿಿ ನಡೆಸಿ ಮಾತನಾಡಿದರು.
ಹಾಲವರ್ತಿ, ಬಸಾಪುರ ಮತ್ತು ಕೊಪ್ಪಳ ಗ್ರಾಾಮಗಳ ರೈತರು 2006-07ರಲ್ಲಿ ತಮ್ಮ ಭೂಮಿಯನ್ನು ಓಐಅಈಆ ಮೂಲಕ ಆಖಔ ಕಂಪನಿಗೆ ನೀಡಿದ್ದರು. ಆ ವೇಳೆ ಪ್ರತಿಯೊಂದು ಭೂಮಿ ಕಳೆದುಕೊಂಡ ಕುಟುಂಬಕ್ಕೂ ಅರ್ಹತೆಯ ಆಧಾರದ ಮೇಲೆ ಒಂದೇ ಉದ್ಯೋೋಗ ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಸರ್ವೋಚ್ಚ ನ್ಯಾಾಯಾಲಯದಲ್ಲಿ ನಡೆದಿದ್ದ ವ್ಯಾಾಜ್ಯಗಳ ಕಾರಣ ಕಳೆದ 18 ವರ್ಷಗಳಿಂದ ಕಾರ್ಖಾನೆ ಸ್ಥಾಾಪನೆ ಆಗದೇ ಇರುವುದರಿಂದ ನಾವು ಭೂಮಿಯನ್ನೂ ಕಳೆದುಕೊಂಡು, ಉದ್ಯೋೋಗವಿಲ್ಲದೆ ಸಂಕಷ್ಟದಲ್ಲಿದ್ದೇವೆ ಎಂದರು.
ಕಂಪನಿ ಸ್ಥಾಾಪನೆಯಾಗದಿದ್ದರೆ ನಮ್ಮ ಪರಿಸ್ಥಿಿತಿ ಇನ್ನಷ್ಟು ಅನಿಶ್ಚಿಿತವಾಗುತ್ತದೆ. ಕೆಲವು ಪಟ್ಟಭದ್ರ ಹಿತಶಕ್ತಿಿಗಳು ಕಾರ್ಖಾನೆ ಬರದಂತೆ ಸುಳ್ಳುಪ್ರಚಾರ ನಡೆಸುತ್ತಿಿದ್ದಾರೆ. ಇದರ ಪರಿಣಾಮವಾಗಿ ನಮ್ಮ ಮತ್ತು ನಮ್ಮ ಮಕ್ಕಳ ಭವಿಷ್ಯ ಕತ್ತಲೆಯಲ್ಲಿದೆ. ಈ ಕುರಿತು ಸ್ಥಳೀಯ ಜನಪ್ರತಿನಿಧಿಗಳು, ಮುಖ್ಯಮಂತ್ರಿಿ ಸಿದ್ದರಾಮಯ್ಯ ಹಾಗೂ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.
ಕಾರ್ಖಾನೆ ಆರಂಭವಾದರೆ ಸುತ್ತಮುತ್ತಲಿನ ಗ್ರಾಾಮಸ್ಥರ ಜೀವನೋಪಾಯ ಸುಧಾರಿಸುತ್ತದೆ. ಆದ್ದರಿಂದ ಕಾರ್ಖಾನೆ ಸ್ಥಾಾಪನೆಗೆ ಯಾವುದೇ ವಿಳಂಬ ಮಾಡದೇ ಸರ್ಕಾರವು ತಕ್ಷಣ ಅನುಮತಿ ನೀಡಬೇಕು. ಇಲ್ಲದಿದ್ದರೆ ಪ್ರತಿಯೊಂದು ಭೂಮಿ ಕಳೆದುಕೊಂಡ ಕುಟುಂಬಕ್ಕೆೆ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಾಯಿಸಿದರು.
ಸುದ್ದಿಗೋಷ್ಠಿಿಯಲ್ಲಿ ನಾಗರಾಜ ಗುರಿಕಾರ, ಹನುಮಗೌಡ ರೆಡ್ಡಿಿ, ಅಮರೇಶ್ ಕಂಬಳಿ, ರಾಮಣ್ಣ ಕಂಬಳಿ, ಕೇಮಪ್ಪ, ನಾಗರಾಜ್ ಕೌದಿ ಸೇರಿದಂತೆ ಅನೇಕರು ಉಪಸ್ಥಿಿತರಿದ್ದರು.

