ಸುದ್ದಿಮೂಲ ವಾರ್ತೆ ಬೀದರ್, ಡಿ.02:
ರಾಜ್ಯ ಸರ್ಕಾರ ಘೋಷಣೆ ಮಾಡಿದಂತೆ ಪ್ರತಿ ಟನ್ ಕಬ್ಬಿಿಗೆ 3300 ರೂ. ದರವನ್ನು ಎಲ್ಲ ಜಿಲ್ಲೆಗಳಿಗೂ ಅನ್ವಯಿಸಬೇಕು ಸೇರಿದಂತೆ ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಮಂಗಳವಾರ ಬಿಜೆಪಿಯಿಂದ ಪ್ರತಿಭಟನೆ ನಡೆಯಿತು.
ನಗರದ ಗಾಂಧಿ ಗಂಜ್ ನಿಂದ ಕೃಷಿ ಜಂಟಿ ನಿರ್ದೇಶಕರ ಕಚೇರಿವರೆಗೆ ಟ್ರ್ಯಾಾಕ್ಟರ್ನಲ್ಲಿ ಆಗಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು, ಕಚೇರಿಗೆ ಮುತ್ತಿಿಗೆ ಹಾಕಲು ಯತ್ನಿಿಸಿದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಿ, ಬ್ಯಾಾರಿಕೇಟ್ ಅಳವಡಿಸಿದ್ದರಿಂದ ಕಚೇರಿ ಎದುರು ಜಮಾಯಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ರೈತರು ನಿರಂತರ ಹೋರಾಟ ಮಾಡಿದ ಲವಾಗಿ ಸರ್ಕಾರ ಪ್ರತಿ ಟನ್ ಗೆ 3300 ರೂ. ದರ ನಿಗದಿಗೊಳಿಸಿದ್ದು ಸ್ವಾಾಗತಿಸುತ್ತೇವೆ. ಆದರೆ ಈ ದರವನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಅನ್ವಯವಾಗುತ್ತಿಿಲ್ಲ. ಸರ್ಕಾರ ಘೋಷಣೆ ಮಾಡಿದ ಹಣಕ್ಕಿಿಂತ ಕಡಿಮೆ ದರವನ್ನು ಕೆಲ ಜಿಲ್ಲೆಗಳಲ್ಲಿ ನೀಡಲಾಗುತ್ತಿಿದೆ. ಒಂದು ಜಿಲ್ಲೆಯಲ್ಲಿ ಕಡಿಮೆ, ಇನ್ನೊೊಂದು ಜಿಲ್ಲೆಯಲ್ಲಿ ಹೆಚ್ಚಿಿನ ದರ ನೀಡುವ ಅನ್ಯಾಾಯಕ್ಕೆೆ ಕಡಿವಾಣ ಹಾಕಿ ಕಡ್ಡಾಾಯವಾಗಿ ಪ್ರತಿ ಟನ್ 3300 ರೂ. ನೀಡಲು ಕ್ರಮವಹಿಸಬೇಕು ಎಂದು ಒತ್ತಾಾಯಿಸಿದರು.
ಘೋಷಣೆ ಮಾಡಿದ ಅತಿವೃಷ್ಟಿಿ ಪರಿಹಾರ ಹಣವನ್ನು ಎಲ್ಲ ರೈತರ ಖಾತೆಗೆ ಶೀಘ್ರ ಜಮೆ ಮಾಡಬೇಕು. ರೈತರ ಪ್ರತಿ ಲೀಟರ್ ಹಾಲಿನ ಪ್ರೋೋತ್ಸಾಾಹ ಧನ 620 ಕೋಟಿ ಬಾಕಿಯನ್ನು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಾಯಿಸಿದರು.
ಪ್ರಧಾನಮಂತ್ರಿಿ ಕಿಸಾನ್ ಸಮ್ಮಾಾನ್ ಯೋಜನೆಯ ಭಾಗವಾಗಿ ಹಿಂದಿನ ರಾಜ್ಯದಲ್ಲಿ ಬಿಜೆಪಿ ಸರ್ಕಾರದಲ್ಲಿ ರೈತರಿಗೆ ವರ್ಷಕ್ಕೊೊಮ್ಮೆೆ ನಾಲ್ಕು ಸಾವಿರ ರೂ. ಜಮೆ ಮಾಡಲಾಗುತ್ತಿಿತ್ತು. ಕಾಂಗ್ರೆೆಸ್ ಆಡಳಿತಕ್ಕೆೆ ಬಂದ ನಂತರ ಇದನ್ನು ಬಂದ್ ಮಾಡಲಾಗಿದೆ. ಮತ್ತೆೆ ಇದನ್ನು ಜಾರಿಗೆ ತರಬೇಕು ಎಂದು ಒತ್ತಾಾಯಿಸಿದರು.
ಬೇಡಿಕೆ ಸಂಬಂಧ ರಾಜ್ಯಪಾಲರಿಗೆ ಬರೆದ ಮನವಿವನ್ನು ಕೃಷಿ ಜಂಟಿ ನಿರ್ದೇಶಕರಿಗೆ ಸಲ್ಲಿಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಸೋಮನಾಥ ಪಾಟೀಲ್, ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಮಾಜಿ ಶಾಸಕ ಪ್ರಕಾಶ ಖಂಡ್ರೆೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಶಿವರಾಜ ಅಲ್ಮಾಾಜೆ, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಮಹಾನಗರ ಪಾಲಿಕೆ ಸದಸ್ಯ ಶಶಿಧರ ಹೊಸಳ್ಳಿಿ, ಪ್ರಮುಖರಾದ ಈಶ್ವರಸಿಂಗ್ ಠಾಕೂರ್, ಗುರುನಾಥ ಜ್ಯಾಾಂತಿಕರ್, ಪೀರಪ್ಪ ಔರಾದೆ, ಗುರುನಾಥ ರಾಜಗೀರಾ ಬಗದಲ್,
ವಿಕ್ರಮ ಮುದಾಳೆ, ದೀಪಕ್ ಗಾದಗೆ, ಸಂತೋಷರಡ್ಡಿಿ, ವೀರೇಶ ಸ್ವಾಾಮಿ, ರೋಷನ್ ವರ್ಮಾ, ಗಣೇಶ ಭೋಸ್ಲೆೆ, ಉಪೇಂದ್ರ ದೇಶಪಾಂಡೆ, ಬಸವರಾಜ ಪವಾರ್ ಇತರರಿದ್ದರು.
ಬಿಜೆಪಿಯಿಂದ ಪ್ರತಿಭಟನೆ ಕಬ್ಬು ದರ 3300 ಎಲ್ಲ ಜಿಲ್ಲೆಗಳಿಗೂ ಅನ್ವಯಿಸಲಿ

