ಸುದ್ದಿಮೂಲ ವಾರ್ತೆ ಮಾನ್ವಿ, ಡಿ.02:
ಸಂವಿಧಾನ ಸಮರ್ಪಣಾ ದಿನಾಚರಣೆಯ ಅಂಗವಾಗಿ ಪೋತ್ನಾಾಳ್ ಜಾಗೃತ ಮಹಿಳಾ ಸಂಘಟನೆ ವತಿಯಿಂದ ಸಂವಿಧಾನದ ಕಡೆ ನಮ್ಮ ನಡಿಗೆ ಅಭಿಯಾನದ ಸಮಾರೋಪ ಸಮಾರಂಭವನ್ನು ಪೋತ್ನಾಾಳ್ ಗ್ರಾಾಮದಲ್ಲಿ ಹಮ್ಮಿಿಕೊಳ್ಳಲಾಗಿತ್ತು.
ಸಂಪನ್ಮೂಲ ವ್ಯಕ್ತಿಿಗಳಾದ ರಮೇಶ ಹಲಗಿ, ರವಿಕುಮಾರ ವಕೀಲರು, ಈರೇಶ ಹುಲಗುಂಚಿ, ಭಾಗ್ಯಲಕ್ಷ್ಮೀ ಹೊಸಪೇಟೆ ಇವರು ಸಂವಿಧಾನದ ಮಹತ್ವ, ರಚನೆ, ಮೂಲಭೂತ ಹಕ್ಕುಗಳು, ಕರ್ತವ್ಯಗಳು, ಸ್ವಾಾತಂತ್ರ್ಯ, ಸಮಾನತೆ, ಕೋಮು ಸೌಹಾರ್ದತೆ ಮತ್ತು ಅಂಬೇಡ್ಕರ್ ಅವರ ಜೀವನ ಸಾಧನೆಗಳ ಕುರಿತು ಮಾತನಾಡಿದರು.
ಈ ಅಭಿಯಾನವು ಪೋತ್ನಾಾಳ್, ಬಾಗಲವಾಡ, ರಾಮತ್ನಾಾಳ್, ಬುದ್ದಿನ್ನಿಿ ಗ್ರಾಾಮಗಳಲ್ಲಿ ನೆರವೇರಿ ಪೋತ್ನಾಾಳ್ ಗ್ರಾಾಮದಲ್ಲಿ ಸಮಾರೋಪಗೊಂಡಿತು
ಈ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿಿತ ವಿದ್ಯಾಾರ್ಥಿಗಳನ್ನು ಪುರಸ್ಕರಿಸಲಾಯಿತು.
ಸಂಘಟನೆಯ ಅಧ್ಯಕ್ಷೆ ಚಿನ್ನಮ್ಮ ಮುದ್ದಂಗುಡ್ಡಿಿ, ಉಪಾಧ್ಯಕ್ಷೆ ಲಕ್ಷ್ಮಿಿ ಪೋತ್ನಾಾಳ್, ಕಾರ್ಯಕರ್ತರಾದ ದೇವಪುತ್ರ, ಕರಿಯಪ್ಪ, ರೂಪಾ, ಮೌನೇಶ, ದೇವಮ್ಮ, ರಾಜೇಶ್ವರಿ, ಮರಿಯಮ್ಮ, ಅರೋಗ್ಯಮ್ಮ, ಹನುಮಂತಿ ಮುಂತಾದವರು ಭಾಗವಹಿಸಿದ್ದರು.
ಪೋತ್ನಾಳ್ : ಜಾಗೃತ ಮಹಿಳಾ ಸಂಘಟನೆಯಿಂದ ಸಂವಿಧಾನದ ಕಡೆ ನಮ್ಮ ನಡೆ ಅಭಿಯಾನ ಕಾರ್ಯಕ್ರಮ

