ಸುದ್ದಿಮೂಲ ವಾರ್ತೆ ಲಿಂಗಸೂಗೂರ, ಡಿ.03:
ತಾಲೂಕಿನ ಗುಂತಗೋಳ ಸಿ.ಆರ್.ಸಿ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಮಂಗಳವಾರದಂದು ಗೋನವಾಟ್ಲ ತಾಂಡಾ ಶಾಲೆಯಲ್ಲಿ ಜರುಗಿತು.
12 ಶಾಲೆಯ 150 ಹೆಚ್ಚು ಮಕ್ಕಳು 36 ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.
ಪ್ರಾಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕಾದ್ಯಕ್ಷ ಗುರುಸಂಗಯ್ಯ ಗಣಾಚಾರಿ ನಗಾರಿ ಬಾರಿಸಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿ ಮಕ್ಕಳ ಪ್ರತಿಭೆ ಹೊರ ಹೊಮ್ಮಲು ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಅತ್ಯುತ್ತಮ ವೇದಿಕೆಯಾಗಿವೆ. ಮಕ್ಕಳು ಮತ್ತು ಶಿಕ್ಷಕರ ಸಮನ್ವಯದಲ್ಲಿ ಹಲವು ಹೊಸತನಗಳು ಕಾಣ ಸಿಗುತ್ತವೆ ಎಂದರು. ಶಿಕ್ಷಣ ಸಂಯೋಜಕ ಬಸವರಾಜ ಗುಡಿಹಾಳ ಗುಂತಗೋಳ ಗ್ರಾಾ.ಪಂ, ಅಧ್ಯಕ್ಷ ಶಿವಾಜಿ ರಾಠೋಡ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಗ್ರಾಾ.ಪಂ, ಸದಸ್ಯರಾದ ಗದ್ದೆೆಪ್ಪ ಸಿದ್ದಾಾಪುರ, ಚಂದ್ರಶೇಖರ, ನೀಲಪ್ಪ ಡಾಕ್ಟರ್, ನೀಲೇಶ ಪವಾರ್, ಮಂಜುನಾಥ ಶಿಕ್ಷಕರಾದ ಶರಣಬಸವ ಕೆ.ಗುಡದಿನ್ನಿಿ, ಈಶ್ವರಪ್ಪ ಮಲ್ನಾಾಡ್, ತಿಪ್ಪಣ್ಣ ರಾಠೋಡ್, ಹುಲಗಪ್ಪ ನಾಯಕ, ರಂಗಣ್ಣ ದೇವರಮನಿ, ವಿಶ್ವರಾಧ್ಯ, ಮೈಲಾರಪ್ಪ. ಶಾಂತಮ್ಮ, ದೇವಮ್ಮ, ಮೋತಿಲಾಲ್, ದಳಪತಿ,ಡಾಕಪ್ಪ, ಕಾರಬಾರಿ , ಸಂತೋಷ, ಗೋಪಿಚಂದ್ ಇತರರಿದ್ದರು. ಸಿದ್ದಾಾರೂಢ ಶಿಕ್ಷಕರು ಪರವೀನ, ಕವಿತಾ ಶಿಕ್ಷಕರು ನಿರ್ವಹಿಸಿದರು.
ಗೊನವಾಟ್ಲ ತಾಂಡದಲ್ಲಿ ಮಕ್ಕಳ ಪ್ರತಿಭಾ ಕಾರಂಜಿ

