ಸುದ್ದಿಮೂಲ ವಾರ್ತೆ ರಾಯಚೂರು , ಡಿ.03:
ತಾಲೂಕಿನ ಸುಕ್ಷೇತ್ರ ಮನ್ಸಲಾಪುರದಲ್ಲಿ ಡಿ.4 ಹಾಗೂ 5ರಂದು ಶ್ರೀ ಸಿದ್ದಲಿಂಗೇಶ್ವರ ಜಾತ್ರಾಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.
ನ.4 ಗುರುವಾರ ಪೂರ್ಣಿಮೆಯಂದು ಸಂಜೆ 5-30ಕ್ಕೆೆ ಮಹಾರಥೋತ್ಸವಸಕಲ ವಾದ್ಯ ಗಳೊಂದಿಗೆ ಜರುಗಲಿದ್ದು, ರಾಯಚೂರು ಕಿಲ್ಲೇ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರು ಹಾಗೂ ಸೋಮವಾರಪೇಟೆ ಹಿರೇಮಠದ ಶ್ರೀ ಅಭಿನವ ರಾಚೋಟಿವೀರ ಶಿವಾಚಾರ್ಯರು ರಥೋತ್ಸವಕ್ಕೆೆ ಚಾಲನೆ ನೀಡಲಿದ್ದಾಾರೆ.
ನ.5 ಶುಕ್ರವಾರ ಸಂಜೆ 5-30ರಿಂದ ಪಲ್ಲಕ್ಕಿಿ, ಪುರವಂತಿಕೆ ಸೇವೆ,ನಂದಿಕೋಲು ಕುಣಿತದೊಂದಿಗೆ ಉಚ್ಛಾಾಯ ಮಹೋತ್ಸವವು ಜರುಗಲಿದ್ದು, ಭಕ್ತಾಾದಿಗಳು ಜಾತ್ರಾಾ ಮಹೋತ್ಸವದಲ್ಲಿ ಪಾಲ್ಗೊೊಳ್ಳುವಂತೆ ದೇವಸ್ಥಾಾನದ ಸೇವಾ ಸಮಿತಿ ಕೋರಿದೆ.

