ಸುದ್ದಿಮೂಲ ವಾರ್ತೆ ಲಿಂಗಸೂಗೂರು, ನ.03:
ಜಿಲ್ಲೆೆಯಲ್ಲಿ ಅತಿವೃಷ್ಠಿಿ ಮಳೆಗೆ ತುತ್ತಾಾಗಿ ಬೆಳೆ ಹಾನಿಗೀಡಾದ ಜಿಲ್ಲೆೆಯ ರೈತರಿಗೆ ಸರಕಾರ 36 ಕೋಟಿ ಬೆಳೆ ಪರಿಹಾರ ಸರ್ಕಾರದಿಂದ ಬಿಡುಗಡೆಯಾಗಿದ್ದು ಅತಿ ಶೀಘ್ರದಲ್ಲಿ ಹಾನಿಯಾದ ರೈತರ ಖಾತೆಗೆ ಜಮೆಯಾಗಲಿದೆ ರೈತರು ಆತಂಕ ಪಡಬೇಕಿಲ್ಲವೆಂದು ಸಣ್ಣ ನೀರಾವರಿ ಸಚಿವ ಎನ್.ಎಸ್ ಬೋಸರಾಜ ಹೇಳಿದರು.
ತಾಲೂಕಿನ ಕಸಬಾ ಲಿಂಗಸುಗೂರಿನ ಕುಪ್ಪಿಿಭೀಮ ಜಾತ್ರಾಾ ಮಹೋತ್ಸವ, ಹಾಗೂ ರಥೋತ್ಸವದ ಶತಮಾನೋತ್ಸವ ಅಂಗವಾಗಿ ನಡೆದ 26ಜೋಡಿ ಸಾಮೂಹಿಕ ವಿವಾಹ ವೇಳೆ ನಡೆದ ಕುಪ್ಪಿಿಭೀಮ ಕೃತಿ ಬಿಡುಗಡೆ ಸಮಾರಂಭವನ್ನು ಮಂಗಳವಾರ ಉದ್ಘಾಾಟಿಸಿ ಮಾತನಾಡಿದ ಅವರು. ಕಾಂಗ್ರೆೆಸ್ ಸರ್ಕಾರ ರೈತರ ಪರವಾಗಿದೆ. ಕಬ್ಬು, ಹತ್ತಿಿ, ತೊಗರಿ, ಬೆಳೆ ಸೇರಿ ಇನ್ನಿಿತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸಿದೆ, ಎಲ್ಲಾಾ ಜಾತಿ ಜನಾಂಗದವರ ಹಿತ ಕಾಪಾಡುವ ದೃಷ್ಠಿಿಯಿಂದ ಶಾದಿಭಾಗ್ಯ ಯೋಜನೆ ಎಸ್.ಸಿ ಮತ್ತು ಎಸ್ಟಿ ನವವಧುವರರು ಉಪನೊಂದಣೆ ಕಚೇರಿಯಲ್ಲಿ ಮದುವೆ ನೋಂದಾಯಿಸಿದರೆ ನವ ಜೋಡಿಗಳಿಗೆ 50 ಸಾವಿರದ ಜತೆ 2ಸಾವಿರ ಪ್ರೋೋತ್ಸಾಾಹಧನ ಸೇರಿ ಒಟ್ಟು 52 ಸಾವಿರರೂಗಳ ಯೋಜನೆ ಜಾರಿಯಲ್ಲಿದೆ ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದ ಅವರು ಎಲ್ಲ ಜಾತಿ ಧರ್ಮದವರು ಸೇರಿ ಸಂಭ್ರಮದಿಂದ ರಥೋತ್ಸವದ ಶತಮಾನೋತ್ಸವದ ಶ್ರೀಕುಪ್ಪಿಿಭೀಮ ದೇವರ ಜಾತ್ರೆೆಯಲ್ಲಿ ಸಾಮೂಹಿಕ ವಿವಾಹವಾದ ವಧುವರರು ಭವಿಷ್ಯ ಉಜ್ಜಲವಾಗಲಿ ಸಹ ಬಾಳ್ವೆೆ ನಡೆಸಬೇಕೆಂದರು.
ಶಾಸಕ ಮಾನಪ್ಪ ವಜ್ಜಲ್ ಮಾತನಾಡಿ ನೂತನ ವಧು -ವರರಿಗೆ ಇಂದು ಸೌಭಾಗ್ಯದ ದಿನವಾಗಿದೆ ಎಂದ ಅವರು ಸರ್ಕಾರದ ಸಚಿವರನ್ನ ಅತಿವೃಷ್ಟಿಿಯಿಂದ ಹಾನಿಗೊಳಗಾದ ರೈತರ ಬೆಳೆಪರಿಹಾರ ಘೋಷಿಸಲು, ಮತ್ತು ತಾಲೂಕಿನ ಕೃಷಿ ಉಪನಿರ್ದೇಶಕರ ಕಛೇರಿ ಸಿಂಧನೂರಿಗೆ ಸ್ಥಳಾಂತರ ರದ್ದುಪಡಿಸಿ ಲಿಂಗಸಗೂರಿನಲ್ಲಿ ಮುಂದುವರಿಸಲು ಸರ್ಕಾರದ ಪ್ರತಿನಿಧಿಗಳಾದ ಇಲ್ಲಿಯೇ ಮುಂದುವರಿಸಲು ಸರ್ಕಾರಕ್ಕೆೆ ಒತ್ತಡ ಹಾಕಿ ಎಂದು ಕಾರ್ಯಕ್ರಮದ ವೇದಿಕೆಯಲ್ಲಿ ಸಚಿವರಿಗೆ ಮನವಿ ಮಾಡಿಕೊಂಡರು.
ಕಾರ್ಯಕ್ರಮ ಉದ್ದೇಶಿಸಿ ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಾಪುರ. ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಸೇರಿ ಹಲವು ಮುಖಂಡರು ಹಾಗೂ ಗ್ರಾಾಮದ ಸಾಹಿತಿ ಸಂಶೋಧಕ ಕೃತಿ ಕರ್ತೃ ಅಮರೇಶ ಯತಗಲ್ ಮಾತನಾಡಿದರು.
ಒಳಬಳ್ಳಾಾರಿ ಸುವರ್ಣಗಿರ್ರಿಿ ಸಿದ್ಧಲಿಂಗ ಶ್ರೀಗಳು, ಇಲಕಲ್ಲ ಗುರುಮಹಾಂತ ಶ್ರೀಗಳು, ನಂದವಾಡಗಿ ಮಹಾಂತಲಿಂಗ ಶಿವಾಚಾರ್ಯರು, ಸಂತೆಕೆಲ್ಲೂರು ಘನಮಠೇಶ್ವರ ಮಠದ ಗುರುಬಸವ ಸ್ವಾಾಮೀಜಿ, ದೇವರಭೂಪುರ ಗಜದಂಡ ಶಿವಾಚಾರ್ಯರು ಆಶೀರ್ವಚನ ನೀಡಿದರು ಇಸ್ಲಾಾಂ ಧರ್ಮದ ಧಾರ್ಮಿಕ ಗುರು ಸೈಯದ್ ಮುಜಾಮಿಲ್ಲ ಖಾದ್ರಿಿ ಸೇರಿ ನಾಡಿನ ಹರಗುರು ಚರಮೂರ್ತಿಗಳು ಹಾಗೂ ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ನ.ಯೋಪ್ರಾಾ ಅಧ್ಯಕ್ಷ ಭೂಪನಗೌಡ ಕರಡಕಲ್, ರಾಜ ಶ್ರೀನಿವಾಸ್ ನಾಯಕ, ಅಮರಗುಂಡಪ್ಪ ಮೇಟಿ, ಶ್ರೀನಿವಾಸ ಅಮ್ಮಾಾಪುರ, ವೀರನಗೌಡ ಲೆಕ್ಕಿಿಹಾಳ, ಗೋವಿಂದನಾಯಕ, ಅಮರೇಶಹೆಸರೂರ, ಬಾಬುರೆಡ್ಡಿಿಮುನ್ನೂರು ಸೇರಿ ರಾಜಕೀಯ ಗಣ್ಯರು ಗ್ರಾಾಮಸ್ಥರು ಸಾವಿರಾರು ಭಕ್ತಸಮೂಹ ಭಾಗಿಯಾಗಿದ್ದರು.
ಕುಪ್ಪಿಭೀಮ ರಥೋತ್ಸವ : ದಾಂಪತ್ಯ ಜೀವನಕ್ಕೆ ಕಾಲಿಟ್ಟ 26ಜೋಡಿ ನವ ವಧುವರರು ಜಿಲ್ಲೆಯ ರೈತರಿಗೆ 36ಕೋಟಿ ಬೆಳೆಪರಿಹಾರ ಬಿಡುಗಡೆ: ಶೀಘ್ರ ರೈತರ ಖಾತೆಗೆ ಜಮೆ: ಸಚಿವ ಬೋಸರಾಜ್

