ಸುದ್ದಿಮೂಲ ವಾರ್ತೆ ದೇವದುರ್ಗ, ಡಿ.02:
ತಾಲೂಕಿನ ಪ್ರತಿ ಗ್ರಾಾಮ, ಹಳ್ಳಿಿ, ತಾಂಡಗಳಲ್ಲಿರುವ ಕನಿಷ್ಟ ಪ್ರಮಾಣದ ಮೂಲಭೂತ ಸೌಕರ್ಯಗಳನ್ನು ಜನರಿಗೆ ನೀಡಲು ತಳಮಟ್ಟದಿಂದ ಅಂದರೆ ಗ್ರಾಾಮ ಪಂಚಾಯತ ಮಟ್ಟದಿಂದ ಕೈಜೋಡಿಸಿದರೆ ಮಾತ್ರ ತಾಲೂಕಿನ ಅಭಿವೃದ್ಧಿಿ ಕಾಣಲು ಸಾಧ್ಯವೆಂದು ಸ್ಥಳೀಯ ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.
ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ದೇವದುರ್ಗ ಮತ್ತು ಅರಕೇರ ಅವಳಿ ತಾಲೂಕಿನ 2026-27ನೇ ಸಾಲಿನ ತಾಲೂಕ ಪಂಚಾಯತ ವಾರ್ಷಿಕ ಕರಡು ಅಭಿವೃದ್ಧಿಿ ಯೋಜನಾ ಸಭೆಯಲ್ಲಿ ಮಾತನಾಡಿ, ಅರಕೇರ ತಾಲೂಕಿನ 18 ಗ್ರಾಾಮ ಪಂಚಾಯತಗಳು ಮತ್ತು ದೇವದುರ್ಗ ತಾಲೂಕಿನ 15 ಗ್ರಾಾಮ ಪಂಚಾಯತಗಳ ಹಾಗು ದೇವದುರ್ಗ ಪುರಸಭೆ ವ್ಯಾಾಪ್ತಿಿಯ ವಿವಿಧ ಇಲಾಖೆಗಳ ವಿವಿಧ ಕಾಮಗಾರಿಗಳ ಕರಡು ಯೋಜನೆಗಳು ತಯಾರಿಸಿದ್ದು, ಗ್ರಾಾಮ ಪಂಚಾಯತ ವ್ಯಾಾಪ್ತಿಿಯ ಗ್ರಾಾಮಗಳ ಅಭಿವೃದ್ಧಿಿಗೆ ಸಾಕಷ್ಟು ಅನುದಾನ ನೀಡಿದ್ದು, ಆದರೆ ಪ್ರತಿ ಹಳ್ಳಿಿಯ, ಗ್ರಾಾಮ, ವಾರ್ಡ್ಗಳಲ್ಲಿ ಸಭೆಗಳನ್ನು ಮಾಡಿ ಕ್ರಿಿಯಾ ಯೋಜನೆ ರೂಪಿಸಿದ್ದರು ಕೂಡ ನಾನು ಪ್ರತಿ ಹಳ್ಳಿಿಗಳಿಗೆ ಹೋದರೆ ಪ್ರತಿ ಗ್ರಾಾಮದಲ್ಲಿ ಸಮಸ್ಯಗಳನ್ನು ಜನರು ನನಗೆ ಹೇಳುತ್ತಾಾರೆ. ಗ್ರಾಾಮಗಳ ಅಭಿವೃದ್ಧಿಿ ಸರಕಾರ ನೀಡಿದ ಹಣ ಖರ್ಚು ಆಗಿ ದಾಖಲೆಗಳಲ್ಲಿ ಮಾತ್ರ ಕಾಣುತ್ತಿಿದೆ.
ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರ ವರ್ಗದವರು ಜನರ ಸಮಸ್ಯೆೆಗಳಿಗೆ ಸ್ಪಂದನೆ ಮಾಡುವ ಬದಲು ಒಬ್ಬರೇ ಮೇಲೆ ಒಬ್ಬರು ಹಾಕಿಬಾರದು, ಗ್ರಾಾಮ ಪಂಚಾಯತಿಯ ಮಹಿಳಾ ಅಧ್ಯಕ್ಷರು ಮುಂದೆ ಬಂದು ಪ್ರತಿಹಳ್ಳಿಿಯಲ್ಲಿ ಖುದ್ದಾಾಗಿ ಹೋಗಿ ಜನರ ಸಮಸ್ಯಗಳನ್ನು ಆಲಿಸಬೇಕು, ಮಹಿಳಾ ಅಧ್ಯಕ್ಷರು ಪತಿ, ಅಣ್ಣ ಇತರರಿಗೆ ಅವಕಾಶ ನೀಡದೇ ನೀವು ಖುದ್ದಾಾಗಿ ಹೋಗಿ ಅವಶ್ಯಕತೆ ಇದ್ದರೆ ನನಗೆ ಸಂಪರ್ಕ ಮಾಡಿ ನಾನು ನಿಮ್ಮ ಜತೆಯಲ್ಲಿ ಬರುತ್ತೇನೆಂದು ಮಹಿಳಾ ಅಧ್ಯಕ್ಷರಿಗೆ ಧೈರ್ಯ ಹೇಳಿದರು.
2026-27ನೇ ಸಾಲಿನ ದೇವದುರ್ಗ ವಿಧಾನ ಸಭಾ ಕ್ಷೇತ್ರದ ಅರಕೇರ ಮತ್ತು ದೇವದುರ್ಗ ತಾಲೂಕಿನಲ್ಲಿ ಈಗಾಗಲೇ ಗ್ರಾಾಮ ಪಂಚಾಯತಿಗಳ ವಾರ್ಷಿಕ ಕರಡು ಯೋಜನೆ ಮಾಡಲು ರಾಜ್ಯ ಸರಕಾರದ ಆದೇಶದನ್ವಯ ಕ್ರಿಿಯಾ ಯೋಜನೆ ಮಾಡಿದ್ದು, ಆದರೆ ಇನ್ನೂ ಹಲವಾರು ಸಮಸ್ಯೆೆಗಳಿದ್ದು, ಗ್ರಾಾಮಗಳಲ್ಲಿರುವ ಮಹಿಳಾ ಶೌಚಾಲಯಗಳು, ರಸ್ತೆೆ, ಶಾಲಾ ಕೌಂಪೌಂಡ, ಸೇರಿದಂತೆ ಇಲಾಖೆಯ ಮಾನದಂಡ ಒಳಗೊಂಡ ಕ್ರೀೆಯಾ ಯೋಜನೆ ಮಾಡಿ ಜಿಲ್ಲಾಾ ಮತ್ತು ರಾಜ್ಯ ಸರಕಾರಕ್ಕೆೆ ಪ್ರಸ್ತಾಾವನೆ ಸಲ್ಲಿಸಲಾಗುವದೆಂದು ಶಾಸಕಿ ಕರೆಮ್ಮ ಜಿ. ನಾಯಕ ಹೇಳಿದರು.
ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ ಗಾಂಧಿ ಗ್ರಾಾಮ ಪುರಸ್ಕಾಾರಕ್ಕೆೆ ಆಯ್ಕೆೆಯಾದ ಗ್ರಾಾಮ ಪಂಚಾಯತ ಅಧ್ಯಕ್ಷರಿಗೆ ಈ ಸಂದರ್ಭದಲ್ಲಿ ಸನ್ಮಾಾನಿಸಿ ಗೌರವಿಸಿದರು. ದೇವದುರ್ಗ ಮತ್ತು ಅರಕೇರ ತಾಲೂಕಿನ ತಹಶೀಲ್ದಾಾರರಾದ ನಾಗಮ್ಮ ಕಟ್ಟಿಿಮನಿ, ಅಮರೇಶ ಬಿರಾದಾರ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಹಟ್ಟಿಿ, ಅಣ್ಣಾಾರಾವು, ಅರಕೇರ ಆಡಳಿತಾಧಿಕಾರಿ ರಾಜೇಂದ್ರ ಕುಮಾರ ಮಾತನಾಡಿದರೆ, ಗ್ರಾಾಮ ಪಂಚಾಯತ ಅಧ್ಯಕ್ಷರು ವಿವಿಧ ಇಲಾಖೆಯ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥಿಿತರಿದ್ದರು.
ಅಭಿವೃದ್ಧಿ ಕಾಣದ ಗ್ರಾಮೀಣ ಭಾಗ : ಶಾಸಕಿ ಕರೆಮ್ಮ ಜಿ. ನಾಯಕ ವಿಷಾದ

