ಸುದ್ದಿಮೂಲ ವಾರ್ತೆ ರಾಯಚೂರು, ಡಿ.02:
ಜಿಲ್ಲೆಯ ಗಬ್ಬೂರು ಗ್ರಾಾಮ ಪಂಚಾಯಿತಿಗೆ ಒಲಿದ ಗಾಂಧಿ ಗ್ರಾಾಮ ಪುರಸ್ಕಾಾರವನ್ನು ಅಧ್ಯಕ್ಷರು ಹಾಗೂ ಅಭಿವೃದ್ದಿ ಅಧಿಕಾರಿ ಸ್ವೀಕರಿಸಿದ್ದಾಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಸಮಾರಂಭದಲ್ಲಿ ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತರಾಜ್ ಇಲಾಖೆ ಸಚಿವ ಪ್ರಿಿಯಾಂಕ್ ಖರ್ಗೆ ಅವರು 2023-24ನೇ ಸಾಲಿನ ಗಾಂಧಿ ಗ್ರಾಾಮ ಪುರಸ್ಕಾಾರ ಪ್ರದಾನ ಮಾಡಿದರು.
ಗಬ್ಬೂರು ಗ್ರಾಾಮ ಪಂಚಾಯಿತಿ ಅಧ್ಯಕ್ಷರಾದ ಪಾರ್ವತಿ ಬುಸ್ಸಪ್ಪ ಹಾಗೂ ಅಭಿವೃದ್ಧಿಿ ಅಧಿಕಾರಿ ತಿರುಮಲರೆಡ್ಡಿಿ ಅವರು ಪ್ರಶಸ್ತಿಿ ಸ್ವೀಕರಿಸಿದರು.
ಗ್ರಾಾಮೀಣಾಭಿವೃದ್ಧಿಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಕೊಡಲಾಗುವ ಪುರಸ್ಕಾಾರ 5 ಲಕ್ಷ ನಗದು, ಲಕ ಹಾಗೂ ಪ್ರಶಸ್ತಿಿ ಪತ್ರ ಒಳಗೊಂಡಿದೆ.
ಪಂಚಾಯತ್ ರಾಜ್ ಇಲಾಖೆ ಕೊಟ್ಟಿಿದ್ದ ಪ್ರಶ್ನಾಾವಳಿಗೆ ಸಮಂಜಸವಾಗಿ ಉತ್ತರ ನೀಡಿ ಹೆಚ್ಚು ಅಂಕ ಗಳಿಸುವ ಜೊತೆಗೆ ಯೋಜನೆಗಳ ಉತ್ತಮ ಕಡತಗಳ ನಿರ್ವಹಣೆ ಮತ್ತುಸ್ವಸಹಾಯ ಗುಂಪುಗಳಿಗೆ ಸೌಲಭ್ಯಘಿ, ಮಹಾತ್ಮ ಗಾಂಧಿ ಉದ್ಯೋೋಗ ಖಾತ್ರಿಿ ಯೋಜನೆಯಡಿ ಸಕಾಲದಲ್ಲಿ ಕೆಲಸ ನೀಡಿಕೆ, ಸಿಬ್ಬಂದಿಗೆ ವಿಮೆ, ಬೀದಿ ದೀಪಗಳ ನಿರ್ವಹಣೆ, ಡಿಜಿಟಲ್ ಗ್ರಂಥಾಲಯ, ತೆರಿಗೆ ಸಂಗ್ರಹ, ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆೆ ಜಾಗೃತಿ ಹಾಗೂ ಮೂಲಭೂತ ಸೌಕರ್ಯ, ಶುದ್ಧ ಕುಡಿಯವ ನೀರಿನ ವ್ಯವಸ್ಥೆೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು ಯಶಸ್ವಿಿಯಾಗಿ ಜನರಿಗೆ ತಲುಪಿಸಿರುವುದನ್ನು ಪರಿಗಣಿಸಿ ಪಂಚಾಯತಿಗೆ ಗಾಂಧಿ ಗ್ರಾಾಮ ಪುರಸ್ಕಾಾರ ಒಲಿದು ಬಂದಿದೆ.
ತಾಲೂಕಿನಲ್ಲಿ 8 ಗ್ರಾಾಮ ಪಂಚಾಯಿತಿಗಳು ಪುರಸ್ಕಾಾರದ ಮಾನದಂಡಗಳಂತೆ ಅರ್ಜಿ ಸಲ್ಲಿಸಿದ್ದವು. ಆದರೆ, ಗಬ್ಬೂರು ಗ್ರಾಾಮ ಪಂಚಾಯಿತಿ ಮಾನದಂಡಗಳ ಪೂರೈಸಿದ್ದರಿಂದ ಪ್ರಶಸ್ತಿಿ ಒಲಿದಿದೆ.
ಕುಡಿಯುವ ನೀರಿನ ಯೋಜನೆ ವಿಸ್ತರಣೆ, ಸಮುದಾಯ ಶೌಚಾಲಯ ಹಾಗೂ ಇತರ ಕಾರ್ಯಗಳ ಜೊತೆಗೆ ದಾಖಲೆಗಳ ಸಮರ್ಪಕ ನಿರ್ವಹಣೆಗೆ ಪ್ರಶಸ್ತಿಿ ಒಲಿದಿದೆ ಎಂದು ಪಿಡಿಓ ತಿರುಮಲರೆಡ್ಡಿಿ ತಿಳಿಸಿದ್ದಾಾರೆ.
ಗಬ್ಬೂರು ಗ್ರಾಾಮ ಪಂಚಾಯತಿ ಗಾಂಧಿ ಗ್ರಾಾಮ ಪುರಸ್ಕಾಾರ ಆಯ್ಕೆೆಯಾಗಿ ಪ್ರಶಸ್ತಿಿ ಪಡೆದಕ್ಕೆೆ ಸದಸ್ಯರು, ಸಿಬ್ಬಂದಿ, ಗ್ರಾಾಮದ ಹಿರಿಯರು ಹಾಗೂ ವಿವಿಧ ಸಂಘಟನೆಯ ಮುಖಂಡರು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದಾಾರೆ.
ಗಬ್ಬೂರು ಪಂಚಾಯತಿಗೆ ಗಾಂಧಿ ಗ್ರಾಾಮ ಪುರಸ್ಕಾರ ಪ್ರದಾನ

