ಸುದ್ದಿಮೂಲ ವಾರ್ತೆ ಬೆಂಗಳೂರು, ನ.03:
ತನುವಿನ ಮೂಲಕ ಬಂದ ಮನ ಮಲಿನವಾಗಿದೆ. ತನು ಮತ್ತು ಮನವನ್ನು ಮಲಿನತೆಯಿಂದ ಹೊರಗಿಡುವುದೇ ಅರಿವು. ಇದನ್ನೇ ಅಲ್ಲಮ ಪ್ರಭು ಕೂಡ ಹೇಳುತ್ತಾಾನೆ ಎಂದು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಾಲಯದ ವಿಶ್ರಾಾಂತ ಕುಲಪತಿ ಪ್ರೊೊ. ಮಲ್ಲೇಪುರಂ ಜಿ. ವೆಂಟಕೇಶ ನುಡಿದರು.
ರಾಯಚೂರಿನ ಶ್ರೀ ಬಸವಸೇವಾ ಪ್ರತಿಷ್ಠಾಾನ ಹಾಗೂ ಸುದ್ದಿಮೂಲ ದಿನಪತ್ರಿಿಕೆ ಸಂಯುಕ್ತಾಾಶ್ರಯದಲ್ಲಿ ಗಾಂಧೀ ಭವನದಲ್ಲಿ ಬುಧವಾರ ಹಮ್ಮಿಿಕೊಂಡಿದ್ದ ಸುದ್ದಿಮೂಲ ಪತ್ರಿಿಕೆ ಸಂಪಾದಕ ಹಾಗೂ ಲೇಖಕ ಬಸವರಾಜಸ್ವಾಾಮಿ ಅವರ ಬಸವಗೀತೆ (9 ಸಂಪುಟಗಳ ಗುಚ್ಛ)ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಗ್ರಂಥ ಕುರಿತು ಅವರು ಮಾತನಾಡಿದರು.
ಲೋಕಮೀಮಾಂಸೆ ಅರ್ಥ ಮಾಡಿಕೊಳ್ಳಬೇಕಾದರೆ ಅರಿವಿನ ಮೀಮಾಂಸೆ ಬೇಕು. ಅರಿವಿನ ಮೀಮಾಂಸೆ ಮೂಲಕ ಅರ್ಥ ಮಾಡಿಕೊಳ್ಳಬೇಕು. 12ನೇ ಶತಮಾನದ ವಚನಕಾರರು ತಮ್ಮ ಅನುಭವದ ಮೂಲಕ ಲೋಕದ ಮೀಮಾಂಸೆ ನೋಡುತ್ತಾಾ ಅದನ್ನು ಸಮ್ಯಕ್ ರೂಪಕ್ಕೆೆ ತಂದುಕೊಂಡರು. ಇದನ್ನು ಆರ್ಥ ಮಾಡಿಕೊಳ್ಳಲು ಅರಿವಿನ ಮೀಮಾಂಸೆ ಮುಖ್ಯ. ಬಸವರಾಜಸ್ವಾಾಮಿ ಅವರು ಲೋಕ ಮೀಮಾಂಸೆ ಅರ್ಥ ಮಾಡಿಕೊಳ್ಳಲು ಅರಿವಿನ ಮೀಮಾಂಸೆ ವಿಸ್ತಾಾರಗೊಳಿಸಿದ್ದಾರೆ ಎಂದು ಅವರು ಅಭಿಪ್ರಾಾಯಪಟ್ಟರು.
ಕೃತಿಕಾರ ಬಸವರಾಜ ಸ್ವಾಾಮಿ ಅವರು ಯಾವ ಪಂಥಕ್ಕೂ ಸೇರಿದವರಲ್ಲ. ಯಾವ ಸಿದ್ಧಾಾಂತಕ್ಕೂ ಕಟಿಬದ್ಧರಾದವರಲ್ಲ. ವಿದ್ಯಾಾನಂದ ಶರಣರು ಇವರ ಗುರು. ಅವರನ್ನು ಅನುಸರಿಸುತ್ತಾಾ ಬಸವಣ್ಣನ ವಚನಗಳ ಮೇಲೆ ವಿಶ್ಲೇಷಣೆ ನಡೆಸಿ ಬೆಳಕು ಚೆಲ್ಲಿದ್ದಾರೆ ಎಂದು ಹೇಳಿದರು.
ವಚನಕ್ಕೆೆ ಒಂದು ಚೌಕಟ್ಟು ಇರುತ್ತದೆ. ಅದರಲ್ಲಿ ಅಂತರ ಅರ್ಥ ಇರುತ್ತದೆ. ಯಾವುದೇ ಒಂದು ಓದುವಿನಲ್ಲಿ ಹಲವು ಮುಖಗಳು ಇರುತ್ತವೆ. ಬಸವಣ್ಣ ಅವರ 959 ವಚಗಳ ಮೇಲೆ ಟೀಕಾಕಾರರು ವಿಶ್ಲೇಷಣೆ ಮಾಡಿದ್ದಾರೆ. ವಚನಗಳ ಮೇಲೆ ವ್ಯಾಾಖ್ಯಾಾನ ಬರೆದಿದ್ದಾರೆ. ಬಸವಣ್ಣ ಅವರ ಮೇಲೆ ದೀರ್ಘ ಕಾಲದಲ್ಲಿ ವ್ಯಾಾಖ್ಯಾಾನಗಳು ಬಂದಿವೆ. ಆದರೆ ಬಸವರಾಜ ಸ್ವಾಾಮಿ ಅವರು ಬಸವಣ್ಣ ಅವರ 959 ವಚಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವಚನಗಳ ಬಗ್ಗೆೆ ಸಂವಾದ ನಡೆಸುವುದು ಸಲಭವಲ್ಲ. ಆದರೆ ಲೇಖಕರು ಇದನ್ನು ಮಾಡಿದ್ದಾರೆ ಎಂದು ಅವರು ಶ್ಲಾಾಘಿಸಿದರು.
ಬಸವರಾಜ ಸ್ವಾಾಮಿ ಅವರ ಈ ಗ್ರಂಥಗಳು ತನು, ಮನ ಹಾಗೂ ಅರಿವು ಎಂಬ ಮೂರು ತತ್ವಗಳ ಮೇಲೆ ನಿಂತಿವೆ. ಜ್ಞಾನಕ್ಕಿಿಂತ ಅರಿವು ಕಡೆ ಹೆಚ್ಚು ಒಲವು ಹೊಂದಿದ್ದಾರೆ. ಇವರು ಇಂದು ಲೋಕಾರ್ಪಣೆಗೊಂಡ ತಮ್ಮ ಗ್ರಂಥಗಳಲ್ಲಿ ವೀರಶೈವ ಲಿಂಗಾಯತ ಪರಿಭಾಷೆಯನ್ನು ಬಳಸಿಲ್ಲ. ವಿದ್ಯಾಾನಂದ ಶರಣರಿಂದ ಬಂದ ಅರಿವಿನ ಸ್ಫೋೋಟವನ್ನು ಬಳಸಿಕೊಂಡಿದ್ದಾರೆ. ಕನ್ನಡದಲ್ಲಿ ಈ ರೀತಿ ಬರೆದಿರುವುದು ಇದೇ ಮೊದಲು. ಹೀಗಾಗಿ ಈ ಕೃತಿಗಳು ವಿಶೇಷ ಸಾಲಿಗೆ ನಿಲ್ಲುತ್ತವೆ. ಎಂದು ಶ್ಲಾಾಘಿಸಿದರು.
ಲೇಖಕ ಬಸವರಾಜಸ್ವಾಾಮಿ ಅವರು ಮಾತನಾಡಿ, ಮನುಷ್ಯರ ಪೂರ್ವಜರು ಎಲ್ಲ 750 ಕೋಟಿ ಜನರಿಗೂ ತನು ಒಂದೇ ಆದರೆ ಅರಿವು ಎಲ್ಲರಿಗೂ ಒಂದೆ ಅಲ್ಲ. ಅದು ಬೇರೆ, ಬೇರೆಯಾಗಿರುತ್ತದೆ ಎಂದು ನಂಬಿ ಗೊಂದಲ ಮಾಡಿಕೊಂಡಿದ್ದರು. ಈ ಗೊಂದಲದಿಂದ ಮನುಷ್ಯರನ್ನು ಹೊರ ತರಲು ಗೀತೆ ರಚನೆಯಾಯಿತು ಎಂದರು.
ವಚನಕಾರ ಚನ್ನಬಸವಣ್ಣ ಹೇಳುತ್ತಾಾರೆ. ಬೈಯಲು ಹಾಗೂ ಹೊಗಳಲು ಒಂದೇ ಶಬ್ದ ಬಳಸುತ್ತಾಾರೆ. ಪ್ರತಿ ಶಬ್ದದಲ್ಲೂ ಬ್ರಹ್ಮ ಇದ್ದಾನೆ. ಭ್ರಮೆ ಇಲ್ಲ. ಅರಿವು ಇಲ್ಲ. ಪುಸ್ತಕಗಳಲ್ಲಿರುವ ಜ್ಞಾನ ಎಲ್ಲಿಂದ ಬಂತು. ಜ್ಞಾನ ಕಣ್ಣಲ್ಲಿ ಇದೆ. ಗುರುವಾಗಿ ಪಾಠ ಮಾಡಿಸುತ್ತದೆ. ಬಸವಾದಿ ಶರಣರು ಲೋಕಕ್ಕೆೆ ಹೇಳಲಿಲ್ಲ. ತಮಗೇ ತಾವೇ ಹೇಳಿಕೊಂಡರು. ಸಿದ್ಧಾಾರ್ಥ ಸಂಬುದ್ಧವಾದಂತೆ ಎಂದು ಅಭಿಪ್ರಾಾಯಪಟ್ಟರು.
ಶಾಲೆ ಹಾಗೂ ಕಾಲೇಜುಗಳಲ್ಲಿ 25 ವರ್ಷ ಕಲಿತವರು ಸಂಬಳ ತೆಗೆದುಕೊಳ್ಳಲು ಮಾತ್ರ ಅರ್ಹರಾಗಿರುತ್ತಾಾರೆ. ಇವರು ತಂದೆ ತಾಯಿಗಳಿಗೆ ನ್ಯಾಾಯ ಕೊಡಿಸುವುದಿಲ್ಲ. ವಿದ್ಯೆೆಯೂ ಇಲ್ಲ. ಶಿಕ್ಷಕರೂ ಇಲ್ಲ. ಹಗರಣಗಳಲ್ಲಿ ಭಾಗಿಯಾಗುತ್ತಾಾರೆ. ಜಗ್ಗಿಿ ವಾಸುದೇವನಂತವರು ಜ್ಞಾನವನ್ನು ಮಾರಾಟ ಮಾಡುತ್ತಾಾರೆ. ಡೋಂಗಿ ಗುರುಗಳು, ಡೋಂಗಿ ಶಿಷ್ಯರು ಅರಿವನ್ನು ನೋಡಿದವರು ವಿರಳ. ಇವರಿಗೆ ದೇಹದ ಭಾಗಗಳು ಒಂದೇ ಎನಿಸುವುದಿಲ್ಲ. ದೇಹದ ಭಾಗಗಳು ಬೇರೆ ಬೇರೆ ಎನಿಸುತ್ತವೆ. ಗುರು ಎಂದರೆ ಅರಿವು. ಗುರುವೇ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರ. ಇವರ ಹೊರತಾಗಿ ದೇವರಿಲ್ಲ. ದೇವರು ಮನುಷ್ಯನನ್ನು ಸೃಷ್ಟಿಿಸಿದ. ದೇವರು ಮುನುಷ್ಯನಲ್ಲಿ ಸೇರಿಕೊಂಡ. ಮನುಷ್ಯ ದಾರಿ ತಪ್ಪದಂತೆ ಮಾಡುವುದೇ ಅರಿವು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ ವಿದ್ವಾಾನ್ ಡಾ. ಎಂ.ಖಾಸೀಮ್ ಮಲ್ಲಿಗೆಮಡುವು ಹಾಗೂ ಪುಸ್ತಕ ವಿನ್ಯಾಾಸಕಾರ ಮುರಳೀಧರ ವಿ. ರಾಠೋಡ ಅವರನ್ನು ಸನ್ಮಾಾನಿಸಲಾಯಿತು.
ರಾಯಚೂರಿನ ಶ್ರೀ ಬಸವ ಸೇವಾ ಪ್ರತಿಷ್ಠಾಾನ ಹಾಗೂ ಪ್ರಕಾಶಕ ವಿಶ್ವನಾಥ ಬಸವರಾಜ ಸ್ವಾಾಮಿ ಹಾಜರಿದ್ದರು.
———————-
ಬಾಕ್ಸ್
ಭಾವ ಸ್ಪಂದನೆ ಮುಖ್ಯ: ತೋಳ್ಪಾಾಡಿ
ಕೇಂದ್ರ ಸಾಹಿತ್ಯಪ್ರಶಸ್ತಿಿ ಪುರಸ್ಕೃತ ಸಾಹಿತಿ ಲಕ್ಷ್ಮೀಶ ತೋಳ್ಪಾಾಡಿ ಅವರು ಮಾತನಾಡಿ, ಒಂದು ವಚನ ಓದುಗರಲ್ಲಿ ಯಾವ ಭಾವ ಸ್ಪಂದನೆ ಉಂಟು ಮಾಡುತ್ತದೆ ಎಂಬುದು ಮುಖ್ಯ. ನಮ್ಮದೇ ಒಂದು ಮಾತನ್ನು ಹೇಳುವುದು ಕಷ್ಟ. ಆದರೆ ನಮ್ಮ ಸ್ವರದಲ್ಲಿ ಇನ್ನೊೊಬ್ಬರ ಮಾತನ್ನು ಹೇಳುತ್ತೇವೆ. ಆದರೆ ವಚನಕಾರರು ನಮ್ಮದೇ ಒಂದು ಮಾತನ್ನು ಅವರು ಹೇಳಿದರು ಎಂದರು.
ಆಧ್ಯಾಾತ್ಮ ಎಂದರೆ ನಮ್ಮ ಒಳಗೆ ನಡೆಯುವ ಒಂದು ಸ್ಪಂದನೆ. ಇದು ಆಗಬೇಕಿರುವುದು ತಮ್ಮ ಅನುಭವವನ್ನು ಅರಿಯಲು. ತಾನು ಪಟ್ಟ ಅನುಭವವನ್ನು ಹೇಳಲು ಗುರುಗಳು ಕಷ್ಟಪಟ್ಟರು. ಅಲ್ಲದೆ ಎಲ್ಲರಿಗೂ ಹಂಚಿದರು. ಅದನ್ನು ಬಸವರಾಜಸ್ವಾಾಮಿ ಅವರು ತಮ್ಮ ಗುರುಗಳಿಂದ ಪಡೆದರು. ಅವರು ಪಡೆದಿರುವುದನ್ನು ಈಗ ಕೃತಿಗಳ ಮೂಲಕ ಎಲ್ಲರಿಗೂ ಹಂಚುತ್ತಿಿದ್ದಾರೆ ಎಂದು ನುಡಿದರು.
ವಚನ ಸಾಹಿತ್ಯಕ್ಕೆೆ ನಿಮ್ಮ ಮನ ಅರ್ಪಿಸಿದರೆ ಅದು ನಿಮ್ಮದೆ ಸ್ವ ಅಧ್ಯಾಾಯನವಾಗುತ್ತದೆ. ಸ್ವರ ಬಿಟ್ಟ ಪದವೇ ಇಲ್ಲ. ಸ್ವರಗಳಿಲ್ಲದೆ ಒಂದು ಪದ ಹೇಳುವುದು ಸಾಧ್ಯವಿಲ್ಲ. ಶಬ್ಧದೊಳಗಣ ಅರ್ಥ ನಿಶಬ್ದತೆ. ಇದನ್ನು ಬಸವರಾಜಸ್ವಾಾಮಿ ತಮ್ಮ ಕೃತಿಗಳಲ್ಲಿ ದಾಖಲಿಸಿದ್ದಾರೆ ಎಂದು ಹೇಳಿದರು.
————
ಬಾಕ್ಸ್
ಸಮಾಜದಲ್ಲಿ ಬದಲಾವಣೆ ತರುವುದೇ ಉದ್ದೇಶ: ಸಚಿವ ಭೋಸರಾಜು
ಲೇಖಕ ಹಾಗೂ ಸಂಪಾದಕ ಬಸವರಾಜಸ್ವಾಾಮಿ ಅವರು ಕಲ್ಯಾಾಣ ಕರ್ನಾಟಕದಲ್ಲಿ ಶಿಕ್ಷಣದಲ್ಲಿ ಕ್ರಾಾಂತಿ ಮಾಡಿದ್ದಾಾರೆ. ತಮ್ಮ ಪತ್ರಿಿಕೆಯ ಮೂಲಕ ಗ್ರಾಾಮೀಣ ಪ್ರದೇಶದ ಸಮಸ್ಯೆೆಗಳ ಬಗ್ಗೆೆ ಬೆಳಕು ಚೆಲ್ಲಿ ಅವುಗಳನ್ನು ಬಗೆಹರಿಸಲು ಮುಂದಾಗಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.
ಸಮಾಜದಲ್ಲಿ ಬದಲಾವಣೆ ತರಬೇಕು ಎಂಬುದು ಬಸವರಾಜಸ್ವಾಾಮಿ ಅವರ ಧ್ಯೇಯ. ಇದಕ್ಕಾಾಗಿ ಅವರು ಪಟ್ಟು ಹಿಡಿದು ಕೆಲಸ ಮಾಡುತ್ತಿಿದ್ದಾರೆ. ಜನರನ್ನು ಉತ್ತಮ ಮಾರ್ಗದಲ್ಲಿ ಕರೆದೊಯ್ಯಲು ಮುಂದಾಗಿದ್ದಾರೆ. ಸಮಾಜಕ್ಕೆೆ ಏನಾದರೂ ಕೊಡುಗೆ ನೀಡಬೇಕು ಎಂಬುದು ಅವರ ಗುರಿಯಾಗಿದೆ ಎಂದರು.
ಸುದ್ದಿಮೂಲ ಸಂಪಾದಕ, ಲೇಖಕ ಬಸವರಾಜಸ್ವಾಾಮಿ ಅವರ ’ಬಸವಗೀತೆ’ ಗ್ರಂಥ ಲೋಕಾರ್ಪಣೆ ತನು, ಮನವನ್ನು ಮಲಿನತೆಯಿಂದ ಹೊರಗಿಡುವುದೇ ಅರಿವು: ಪ್ರೊೊ. ಮಲ್ಲೇಪುರಂ ಜಿ. ವೆಂಕಟೇಶ

