ಸುದ್ದಿಮೂಲ ವಾರ್ತೆ ಬೆಂಗಳೂರು, ಡಿ.04:
ಕಲ್ಯಾಾಣ ಕರ್ನಾಟಕದ ಕಲಬುರಗಿ ಸೇರಿದಂತೆ ಗದಗ, ದಾವಣಗೆರೆ, ಮೈಸೂರು ಹಾಗೂ ಬೆಂಗಳೂರಿನ ಕೆಂಗೇರಿಯಲ್ಲಿ ಕೌಶಲ್ಯಾಾಧಾರಿತ ಪ್ರಯೋಗಾಲಯಗಳ ಸ್ಥಾಾಪನೆಗೆ 452 ಕೋಟಿ ಅಂದಾಜು ಮೊತ್ತಕ್ಕೆೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಿಗೆ ನೀಡಿತು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಾಲಯ ನೇತೃತ್ವದಲ್ಲಿ ಪ್ರಯೋಗಾಲಯಗಳನ್ನು ಸ್ಥಾಾಪನೆ ಮಾಡಲಾಗುವುದು. ಅಲ್ಲದೆ ಕೊಪ್ಪಳ ಜಿಲ್ಲೆಯ ಆಸ್ಪತ್ರೆೆ ಆವರಣದಲ್ಲಿ ವಿವಿಧ ಕಾಮಗಾರಿ ಕೈಗೊಳ್ಳಲು 28 ಕೋಟಿ ರೂ. ವೆಚ್ಚದ ಕ್ರಿಿಯಾ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದರು.
ಕಲಬುರಗಿಯಲ್ಲಿ ಹಸಿತ್ಯಾಾಜ್ಯ ಸಂಸ್ಕರಣಾ ಘಟಕ ಸ್ಥಾಾಪನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕಲಬುರಗಿಯ ಹೊರ ವಲಯದಲ್ಲಿ ಜಾಗ ನೀಡಿ ಅಲ್ಲಿನಿತ್ಯ 120ರಿಂದ 150 ಹಸಿ ಕಸ ಸಂಸ್ಕರಣೆ ಮಾಡಲು ಭಾರತೀಯ ಅನಿಲ ಪ್ರಾಾಧಿಕಾರಕ್ಕೆೆ 25 ವರ್ಷಗಳವರೆಗೆ ಘಟಕ ನಿರ್ವಹಣೆಯನ್ನು ಗುತ್ತಿಿಗೆ ನೀಡಲಾಗುವುದು. ಈ ಘಟಕದಲ್ಲಿ ಪ್ರಾಾಧಿಕಾರ ಹಸಿ ತ್ಯಾಾಜ್ಯ ಸಂಸ್ಕರಿಸಿ ಅನಿಲ ತಯಾರಿಸಲಿದೆ. ಅಲ್ಲದೆ ಬಳ್ಳಾಾರಿ, ತುಮಕೂರುಗಳಲ್ಲೂ ಘಟಕ ಸಂಸ್ಕರಣ ತ್ಯಾಾಜ್ಯ ಸ್ಥಾಾಪಿಸಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.
ಬೆಳಗಾವಿ ಅಧಿವೇಶನದಲ್ಲಿ ಜಾನುವಾರು ಹತ್ಯೆೆ ಪ್ರತಿಬಂಧಕ ಕಾಯ್ದೆೆ ಮಂಡಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ. ಅಲ್ಲದೆ ಕುರಿ, ಮೇಕೆಗಳ ನೀಲಿ ನಾಲಿಗೆ ರೋಗಕ್ಕೆೆ ಲಸಿಕೆ ನೀಡಲು ನಿರ್ಧರಿಸಿದ್ದು ಇದಕ್ಕಾಾಗಿ ಲಸಿಕೆ ಹೊಸದಾಗಿ ಲಸಿಕೆ ತಯಾರಿಸಲು ಸಚಿವ ಸಂಪುಟ ಒಪ್ಪಿಿಗೆ ನೀಡಿದೆ ಎಂದರು.
ಹೊಸದಾಗಿ ಲಸಿಕೆ ತಯಾರಿಸಲು ಹೆಬ್ಬಾಾಳದಲ್ಲಿ ಪಶು ವೈದ್ಯಕೀಯ ವಿವಿಗೆ ಅವಕಾಶ ನೀಡಲಾಗಿದೆ. ಇದಕ್ಕಾಾಗಿ 27 ಕೋಟಿ ವೆಚ್ಚಕ್ಕೆೆ ಸಂಪುಟ ಅನುಮೋದನೆ ನೀಡಿದೆ ಎಂದರು.
334 ಆಯುಷ್ಮಾಾನ್ ಆರೋಗ್ಯ ಕೇಂದ್ರಗಳ ಸ್ಥಾಾಪನೆಗೆ 216 ಕೋಟಿ ವೆಚ್ಚಕ್ಕೆೆ ಸಂಪುಟದ ಒಪ್ಪಿಿಗೆ ಕೊಟ್ಟಿಿದೆ. 25 ಪ್ರಾಾಥಮಿಕ ಆರೋಗ್ಯ ಕೇಂದ್ರಗಳ ಅಭಿವೃದ್ಧಿಿಗೆ 80 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.
19 ಮೊರಾರ್ಜಿ ದೇಸಾಯಿ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆೆ 304 ಕೋಟಿ ರೂ. ವೆಚ್ಚಕ್ಕೆೆ ಸಂಪುಟ ಒಪ್ಪಿಿಗೆ ನೀಡಿದೆ. ಡಿಪ್ಲೊೊಮಾ ತೇರ್ಗಡೆಯಾದ ವಿದ್ಯಾಾರ್ಥಿಗಳನ್ನು ಅಪ್ರೆೆಂಟಿಸ್ ಹುದ್ದೆಗೆ ಆಯ್ಕೆೆ ಮಾಡಲು ನಿರ್ಧರಿಸಲಾಗಿದೆ. 1000 ಡಿಪ್ಲೊೊಮಾ ಪಾಸಾದ ವಿದ್ಯಾಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿಿದೆ. ಈ ವೇಳೆ ಅವರಿಗೆ ಉದ್ಯೋೋಗ ಭತ್ಯೆೆ ನೀಡಲು ಸಚಿವ ಸಂಪುಟ ಒಪ್ಪಿಿಗೆ ನೀಡಿದೆ ಎಂದರು.
ವಿಜಯಪುರ ಜಿಲ್ಲೆಯ ಚಡಚಡ ವ್ಯಾಾಪ್ತಿಿಯ 9016 ಹೆಕ್ಟೇರ್ ಪ್ರದೇಶಕ್ಕೆೆ ಏತ ನೀರಾವರಿ ಯೋಜನೆ ಕಾಮಗಾರಿಗೆ . 485 ಕೋಟಿ ಅನುದಾನಕ್ಕೆೆ ಒಪ್ಪಿಿಗೆ ನೀಡಿದೆ. 800 ಸರ್ಕಾರಿ ಶಾಲೆಗಳ ಉನ್ನತೀಕರಣ ಮಾಡಲಾಗುತ್ತಿಿದೆ. ಕರ್ನಾಟಕ ಪಬ್ಲಿಿಕ್ ಶಾಲೆಗಳನ್ನಾಾಗಿ ಮಾಡಲು ಅವಕಾಶ ನೀಡಲಾಗುತ್ತಿಿದೆ. ಪರಿಷ್ಕೃತ ಡಿಪಿಆರ್ ತಯಾರಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಬಾಕ್ಸ್
ಮೆಕ್ಕೆೆಜೋಳ ಖರೀದಿಗೆ ಸರ್ಕಾರ ಯತ್ನ
ರಾಜ್ಯದಲ್ಲಿ ಈ ಬಾರಿ ಹದಿನೇಳುವರೆ ಲಕ್ಷ ಹೆಕ್ಟೇರ್ನಲ್ಲಿ ಜೋಳ ಬೆಳೆಯಲಾಗಿದೆ. ಮೆಕ್ಕೆೆ ಜೋಳದ ಇಳುವರಿ ಅಧಿಕವಾಗಿದ್ದು ಖರೀದಿಗೆ ಸಮಸ್ಯೆೆಯಾಗಿದೆ. ಇದನ್ನು ನಿವಾರಿಸಲು ಸರ್ಕಾರ ಮುಂದಾಗಿದೆ. ಈ ಬಗ್ಗೆೆ ಸಚಿವ ಸಂಪುಟದಲ್ಲೂ ಚರ್ಚೆ ನಡೆಯಿತು ಎಂದು ಕಾನೂನು ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಅಂದಾಜು 54 ಲಕ್ಷ ಟನ್ ಬೆಳೆ ಬಂದಿದೆ. ಜೋಳ ಖರೀದಿಗೆ ಎಥೆನಾಲ್ ಕಂಪನಿಗಳಿಗೆ ಸೂಚಿಸಿದ್ದೇವೆ. ಕೇಂದ್ರದ ಸೂಚನೆ ಮೇರೆಗೆ ಸೂಚಿಸಿದ್ದೇವೆ. 238 ರೂ ರಾಜ್ಯ ಸರ್ಕಾರ ನೆರವು ನೀಡಲಿದೆ. ರೈತರಿಗೆ 2400 ರೂ ಬೆಂಬಲ ಬೆಲೆ ನೀಡಿ ಖರೀದಿಸುವಂತೆ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಕೂಡಲೇ ಖರೀದಿ ಕೇಂದ್ರಗಳನ್ನು ಆರಂಭಿಸಿ ಮೆಕ್ಕೆೆಜೋಳ ಖರೀದಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕೆಎಂಎ್ 25 ಲಕ್ಷ ಟನ್ ಹಾಗೂ ಡಿಸ್ಲರಿಗಳು ಕೂಡ ಮೆಕ್ಕೆೆಜೋಳ ಖರೀದಿಗೆ ಮುಂದೆ ಬಂದಿವೆ. ಪೌಲ್ಟ್ರಿಿಯವರು ಖರೀದಿಗೆ ಆಸಕ್ತಿಿ ಹೊಂದಿದ್ದಾರೆ. ಇವರು ಖರೀದಿಗೆ ಮುಂದಾದರೆ ರೈತರಿಗೆ ಪರಿಹಾರ ಸಿಗಲಿದೆ ಎಂಬುದಾಗಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದರು.

