ಸುದ್ದಿಮೂಲ ವಾರ್ತೆ ರಾಯಚೂರು, ಡಿ.04:
ರಾಯಚೂರಿನ ವಾರ್ಡ್ 33ರ ಯರಮರಸ್ನ ಕೆಐಎಡಿಬಿ ಬಡಾವಣೆ ಬಳಿ ಖಸಾಯಿ ಖಾನೆಗೆ ಸರ್ಕಾರ ನೀಡಿದ ಅನುಮತಿಗೆ ಸ್ಥಳೀಯರು ಆಕ್ಷೇಪಿಸಿ ಆಕ್ರೋೋಶ ವ್ಯಕ್ತಪಡಿಸಿದರು.
ಇಂದು ಸಹಾಯಕ ಆಯುಕ್ತರ ಕಚೇರಿಯಲ್ಲಿ ಯರಮರಸ್ ನಿವಾಸಿಗಳು ಭೇಟಿ ಮಾಡಿ ಈ ಪ್ರದೇಶದಲ್ಲಿ ಖಾಸಾಯಿಖಾನೆ ಸ್ಥಾಾಪನೆ ತಕ್ಷಣವೇ ನಿಲ್ಲಿಸಬೇಕೆಂದು ಆಗ್ರಹಿಸಿದರು.
ಮೋರಾರ್ಜಿ, ಎಪಿಜೆ ಅಬ್ದುಲ್ ಕಲಾಂ ವಸತಿ ಶಾಲೆ, ಅನೇಕ ದೇವಾಲಯಗಳು, ಸಾವಿರಾರು ಜನ ವಾಸ, ಲಕ್ಷಾಂತರ ಬೆಲೆಯ ಮನೆ ಕಟ್ಟಿಿಕೊಂಡಿದ್ದಲ್ಲದೆ, ಸಮೀಪದಲ್ಲೇ ಸುಂದರ, ನೈಸರ್ಗಿಕ ಕೆರೆ ಮತ್ತು ನ್ಯಾಾಯಾಧೀಶರ ಬಡಾವಣೆ ಇದ್ದು ಸುಮಾರು 250 ಎಕರೆ ವಿಸ್ತೀರ್ಣದ ಕೆಐಎಡಿಬಿ ಬಡಾವಣೆ ಇರುವ ಉತ್ತಮ ವಾತಾವರಣದ ವಸತಿ ವಲಯವಿದ್ದು ಈ ರೀತಿಯ ಸ್ಥಳದಲ್ಲಿ ಖಸಾಯಿಖಾನೆ ಸ್ಥಾಾಪನೆ ಮಾಡಿದರೆ ಅಸುರಕ್ಷತೆ, ಮಾಲಿನ್ಯಘಿ, ಸಭ್ಯತೆ ಕುಟುಂಬಗಳಿಗೆ ಧಕ್ಕೆೆ ಆಗಲಿದೆ.
ಪರಿಸರ ಮಾಲಿನ್ಯ, ದುರ್ವಾಸನೆ, ಜಾಗ ಖರೀದಿಸಿರುವ ಸಾವಿರಾರು ಸಾರ್ವಜನಿಕರಿಗೆ ನಷ್ಟವಾಗಲಿದ್ದು ರಾಯಚೂರಿನ ವೃದ್ಧಿಿಯಾಗುತ್ತಿಿರುವ ಯರಮರಸ್ ಪ್ರದೇಶದ ಅಭಿವೃದ್ಧಿಿಗೆ ದೊಡ್ಡ ಧಕ್ಕೆೆಯಾಗಲಿದೆ ಎಂದು ಆಪಾದಿಸಿದರು.
ಆಶಾಪುರ ರಸ್ತೆೆ, ಮಾಲಿಯಾಬಾದ್ ಗ್ರಾಾಮ, ಎಕ್ಲಾಾಸ್ಪುರ ಹತ್ತಿಿರ ಗುದ್ದಲಿ ಪೂಜೆ ಮಾಡಿ ಕೆಲಸ ಆರಂಭಿಸುವ ಪ್ರಯತ್ನ ನಡೆದರೂ, ಸಾರ್ವಜನಿಕರ ವಿರೋಧದಿಂದ ಅದನ್ನು ನಿಲ್ಲಿಸಬೇಕಾಯಿತು. ಈಗ ಯರಮರಸ್ ನಿವಾಸಿಗಳ ಮೇಲೆ ಬಲವಂತವಾಗಿ ಹೇರುವುದು ಅನ್ಯಾಾಯ ಮತ್ತು ಅಸಂವಿಧಾನಿಕ ಸರ್ಕಾರ ಮತ್ತು ಅಧಿಕಾರಿಗಳಿಗೆ ಸ್ಪಷ್ಟ ಎಚ್ಚರಿಸಲಾಯಿತು.
ಯರಮರಸ್ ನಿವಾಸಿಗಳ, ವಿದ್ಯಾಾರ್ಥಿಗಳ, ಹಿರಿಯ ನಾಗರಿಕರ ಹಿತಾಸಕ್ತಿಿ ಗಂಭೀರವಾಗಿ ಪರಿಗಣಿಸಿ ಈಗಲೇ ಖಸಾಯಿ ಖಾನೆ ನಿರ್ಮಾಣ ಕೆಲಸ ಸಂಪೂರ್ಣವಾಗಿ ನಿಲ್ಲಿಸಿ, ಜನವಸತಿ ಇಲ್ಲದ, ಶಾಲೆ, ಕಾಲೇಜು, ವಸತಿ ಇಲ್ಲದ ಯುಕ್ತವಾದ ಪ್ರದೇಶಕ್ಕೆೆ ಸ್ಥಳಾಂತರಿಸಬೇಕು.
ಉಚಿತ ಸ್ಥಳ ವಿಜ್ಞಾನಾಧಾರಿತವಾಗಿ, ಪರಿಸರ ತಜ್ಞರ ಅಭಿಪ್ರಾಾಯ ಪಡೆದು ಸರ್ಕಾರವೇ ಗುರುತಿಸಬೇಕು ಎಂದು ಆಗ್ರಹಿಸಿದರು.
ಒಂದೊಮ್ಮೆೆ ನ್ಯಾಾಯಬದ್ಧ ಬೇಡಿಕೆ ನಿರ್ಲಕ್ಷಿಸಿದರೆ, ಮುಂದಿನ ದಿನಗಳಲ್ಲಿ ರಸ್ತೆೆ ತಡೆ ಚಳುವಳಿ, ಕಾಮಗಾರಿ ತಡೆ, ಶಾಂತಿಪೂರ್ಣ ಬೃಹತ್ ಪ್ರತಿಭಟನೆ ಮತ್ತಷ್ಟು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸಭೆಯಲ್ಲಿ
ಸಹಾಯಕ ಆಯುಕ್ತರಿಗೆ ಮನವಿ ಖಸಾಯಿ ಖಾನೆ ನಿರ್ಮಾಣಕ್ಕೆೆ ಯರಮರಸ್ ನಿವಾಸಿಗಳ ವಿರೋಧ

