ಸುದ್ದಿಮೂಲ ವಾರ್ತೆ ರಾಯಚೂರು, ಡಿ.04:
ಸಮುದಾಯದವರು ತಮ್ಮ ಮಕ್ಕಳಿಗೆ ಮೊದಲು ಶಿಕ್ಷಣ ಉಳಿದ ಸೌಲಭ್ಯ ನಂತರ ಎಂಬ ಮನೋಭಾವವಿದ್ದರೆ ಮಾತ್ರ ಸಮಾಜದ ಮುನ್ನೆೆಲೆಗೆ ಬರಲು ಸಾಧ್ಯ ಎಂದು ಕೇಂದ್ರದ ಮಾಜಿ ಸಚಿವ ಎ.ನಾರಾಯಣ ಸ್ವಾಾಮಿ ಪ್ರತಿಪಾದಿಸಿದರು.
ನಗರದ ಪಂ. ಸಿದ್ಧರಾಮ ಜಂಬಲದಿನ್ನಿಿ ರಂಗಮಂದಿರದಲ್ಲಿ ಶ್ರೀ ಶಿವಶರಣ ಮಾದಾರ ಚನ್ನಯ್ಯ ಸೇವಾ ಸಮಿತಿ ಸಹಯೋಗದಲ್ಲಿ ಹಮ್ಮಿಿಕೊಂಡಿದ್ದ ಮಹಾಶಿವಶರಣ ಮಾದಾರ ಚೆನ್ನಯ್ಯರವರ ಜಯಂತಿ ಕಾರ್ಯಕ್ರಮ ಉದ್ಘಾಾಟಿಸಿ ಮಾತನಾಡಿದರು. ಶರಣ ಮಾದಾರ ಚೆನ್ನಯ್ಯ ಕಾಯಕದೊಳಗೆ ಶಿವನನ್ನು ಕಂಡು ಕೊಂಡವರು. ಇಡೀ ಶರಣ ಸಮೂಹದಲ್ಲಿ ಚೆನ್ನಯ್ಯನಂತಹ ವ್ಯಕ್ತಿಿತ್ವವುಳ್ಳ ಮತ್ತೊೊಬ್ಬ ವ್ಯಕ್ತಿಿ ಬಸವಣ್ಣನವರಿಗೆ ಗೋಚರಿಸಿರಲಿಲ್ಲ ಅದಕ್ಕಾಾಗಿಯೇ ಅತ್ಯಂತ ವಿನಮ್ರವಾಗಿ ಬಸವಣ್ಣನವರು ತಲೆಬಾಗಿದ್ದು ಚೆನ್ನಯ್ಯನವರೊಬ್ಬರಿಗೆ ಮಾತ್ರ ಎಂದರು.
ಅಂತ ಸಮುದಾಯದಲ್ಲಿರುವ ನಾವು ನಮ್ಮ ಮಕ್ಕಳಿಗೆ ಮೊದಲ ಆದ್ಯತೆಯಾಗಿ ಶಿಕ್ಷಣವನ್ನು ನೀಡಿದಾಗ ಮಾತ್ರ ಸಮುದಾಯ ಮುಂದುವರೆಯಲು ಸಾಧ್ಯವಾಗುತ್ತದೆ. ಯಾವ ಸಮುದಾಯ ಶಿಕ್ಷಣದಿಂದ ಉನ್ನತಿಯನ್ನು ಸಾಧಿಸುತ್ತದೆಯೊ ಅದು ಮುಂದುವರೆದ ಸಮಾಜವಾಗಬಲ್ಲದು. ಪ್ರತಿಯೊಬ್ಬರು ತಮ್ಮ ಮಕ್ಕಳನ್ನು ಕಡ್ಡಾಾಯವಾಗಿ ಶಾಲೆಗೆ ಕಳುಹಿಸಬೇಕು. ಹಲವರ ಹೆಸರಿನಲ್ಲಿ ಹಣ ವೆಚ್ಚ ಮಾಡುವ ಬದಲು ನಮ್ಮ ಮಕ್ಕಳ ಶಿಕ್ಷಣಕ್ಕೆೆ ಅದನ್ನು ಮೀಸಲಿಡಿ. ಅಕ್ಷರದ ಬೆಳಕಿನ ಕಿರಣ ಜೀವನದಲ್ಲಿ ಮಹತ್ವ ಬದಲಾವಣೆ ತರುತ್ತದೆ ಎಂದು ತಿಳಿಸಿದರು.
ಒಳಮೀಸಲಾತಿಗಾಗಿ ಸಮುದಾಯ ಸುದೀರ್ಘ ಹೋರಾಟ ಮಾಡಿ ಪಡೆದುಕೊಂಡಿದೆ.ಆದರೆ ಅದಕ್ಕೆೆ ನಿಜವಾದ ಅರ್ಥ ಬರಬೇಕಾದರೆ ಶಿಕ್ಷಣ ಪಡೆಯಲೇಬೇಕು , ಸಮುದಾಯದ ಯುವಜನ ಉನ್ನತ ಹುದ್ದೆೆಘಿ, ಉದ್ಯೋೋಗಗಳನ್ನು ಪಡೆಯಬೇಕು ಕೇವಲ ನಮ್ಮ ಹೋರಾಟ ೇಸ್ ಬುಕ್ , ವಾಟ್ಸ್ಆ್ಯಪ್ಗಳಿಗೆ ಸೀಮಿತವಾಗಿರಬಾರದು ಎಂದು ಹೇಳಿದರು
ಆದಿಜಾಂಬವ ಮಹಾಸಂಸ್ಥಾಾನ ಕೋಡಿಹಳ್ಳಿಿಯ ಸ್ವಾಾಮಿಗಳಾದ ಷಡಕ್ಷರಿ ದೇಶೀಕೇಂದ್ರ ಸ್ವಾಾಮೀಜಿ ಮಾತನಾಡಿ ಚೆನ್ನಯ್ಯರವರು ಪ್ರತಿಪಾದಿಸಿದ ಸಮಾನತೆ ,ಶ್ರಮದ ಗೌರವ,ಮಾನವ ಸೇವೆಯ ಸಿದ್ಧಾಾಂತಗಳು ಇಂದಿನ ಸಮಾಜಕ್ಕೆೆ ಅಗತ್ಯವಾಗಿದೆ ಎಂದರು.
ಶರಣರು ಕೇವಲ ಒಂದು ಸಮಾಜ ಅಥವಾ ಸಮುದಾಯಕ್ಕೆೆ ಮಾತ್ರ ಸೀಮಿತವಲ್ಲ , ಶೋಷಣೆಯಿಂದ ಆಚೆ ಬಂದು ಸಮಾಜ ಈಗಲೂ ಬದುಕುತ್ತಿಿಲ್ಲ ಈಗಿನ ಕಾಲಘಟ್ಟಕ್ಕೆೆ ತಕ್ಕಂತೆ ಸಮುದಾಯದವರು ಶಿಕ್ಷಣವಂತರಾದಾಗ ಮಾತ್ರ ಗೌರವ ಸಿಗಲು ಸಾಧ್ಯ. ನಮ್ಮ ಮಕ್ಕಳಿಗೆ ಉತ್ತಮ ಉನ್ನತ ಶಿಕ್ಷಣ ನೀಡಲು ಶ್ರಮಿಸಿ ಆ ಮೂಲಕ ಸಮಾಜ ಕಟ್ಟೋೋಣವೆಂದು ಹೇಳಿದರು.
ಭಾವಚಿತ್ರದ ಭವ್ಯ ಮೆರವಣಿಗೆ :
ಇದಕ್ಕೂ ಮುನ್ನ ವಚನ ಪಿತಾಮಹ ಶರಣ ಶ್ರೀ ಮಾದಾರ ಚನ್ನಯ್ಯ ಅವರ ಜಯಂತಿ ಅಂಗವಾಗಿ ರಾಯಚೂರು ನಗರದಲ್ಲಿ ಅಶೋಕ ಡಿಪೋ ಬಳಿಯ ಮಾದಾರ ಚನ್ನಯ್ಯ ವೃತ್ತದಲ್ಲಿ ನಾಮಲಕಕ್ಕೆೆ ಮಾಲೆ ಹಾಕಿ, ಪುಷ್ಪಾಾರ್ಚನೆ ಮಾಡಲಾಯಿತು. ಅಲ್ಲದೆ, ಅಲ್ಲಿಂದ ನಗರದ ಪಂ.ಸಿದ್ದರಾಮ ಜಂಬಲದಿನ್ನಿಿ ರಂಗಮಂದಿರದವರೆಗೆ ಪ್ರಮುಖ ವೃತ್ತಗಳ ಮೂಲಕ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
ವಾದ್ಯಘಿ, ಕಲಾ ತಂಡಗಳೊಂದಿಗೆ ಮೆರವಣಿಗೆ ಗಮನ ಸೆಳೆಯಿತು. ಅಲ್ಲದೆ, ವೃತ್ತದಲ್ಲಿ ಹಾಕಿದ್ದ ವೇದಿಕೆಯಲ್ಲಿ ಮಾದಿಗರ ಜಾಗೃತಿ ಕುರಿತು ಕ್ರಾಾಂತಿಕಾರಿ ಗೀತೆಗಳನ್ನು ಕಲಾವಿದರು, ಹೋರಾಟಗಾರರು ಹಾಡಿದರು.
ವೇದಿಕೆಯಲ್ಲಿ ಶಾಸಕ ಡಾ.ಶಿವರಾಜ್ ಪಾಟೀಲ್, ವಿಧಾನ ಪರಿಷತ್ ಶಾಸಕ ಎ.ವಸಂತಕುಮಾರ, ಜೆಡಿಎಸ್ ಜಿಲ್ಲಾಾಧ್ಯಕ್ಷ ಎಂ.ವಿರೂಪಾಕ್ಷಿ, ಗ್ಯಾಾರಂಟಿ ಅನುಷ್ಠಾಾನ ಸಮಿತಿ ಜಿಲ್ಲಾಾಧ್ಯಕ್ಷ ಪಾಮಯ್ಯ ಮುರಾರಿ , ಆದಿಕವಿ ಶ್ರೀ ಮಹರ್ಷಿ ವಾಲ್ಮೀಕಿ ವಿಶ್ವವಿದ್ಯಾಾಲಯದ ಕುಲಪತಿ ಪ್ರೊೊ.ಶಿವಾನಂದ ಕೆಳಗಿನಮನಿ, ಮುಖಂಡರಾದ ರವೀಂದ್ರ ಜಲ್ದಾಾರ್, ಬಿ.ನರಸಪ್ಪ , ಪಿ.ಯಲ್ಲಪ್ಪ, ಯಮುನಪ್ಪ ಗಿರಿಜಾಲಿ, ಅಂಬಣ್ಣ ಆರೋಲಿಕರ ,ರಾಮಣ್ಣ ಇರಬಗೇರಾ, ಎಂ.ಮಾರೆಪ್ಪ , ಎನ್.ಕೆ.ನಾಗರಾಜ, ಹೇಮಲತಾ ಸತೀಶ್ , ಜೆ.ಬಿ.ರಾಜು , ದಾನಪ್ಪ ನೀಲಗಲ್ , ಮಹಾವೀರ , ತಿಮ್ಮಪ್ಪ ಆಲ್ಕೂರು , ಆಂಜನೇಯ್ಯ ಯಕ್ಲಾಾಸಪುರ, ಎಸ್.ರಾಜು, ಹೇಮಲತಾ ಬೂದೆಪ್ಪಘಿ, ಎಚ್.ಪದ್ಮಾಾಘಿ, ಸೇರಿದಂತೆ ಇನ್ನಿಿತರ ಮುಖಂಡರು, ಸಮಾಜದವರು ಉಪಸ್ಥಿಿತರಿದ್ದರು.
* ಶ್ರೀ ಶರಣ ಮಾದಾರ ಚನ್ನಯ್ಯ ಜಯಂತಿ, ಭವ್ಯ ಮೆರವಣಿಗೆ ಮೊದಲು ಶಿಕ್ಷಣ ಉಳಿದ ಸೌಲಭ್ಯ ನಂತರ ಭಾವನೆ ಬೆಳೆದರೆ ವಿಕಾಸ ಸಾಧ್ಯ-ಎ.ನಾರಾಯಣಸ್ವಾಾಮಿ

