ವೆಂಕಟೇಶ ಹೂಗಾರ ರಾಯಚೂರು, ಡಿ.04:
ರಾಯಚೂರು ಜಿಲ್ಲೆೆಯ ಅತಿ ಹೆಚ್ಚು ವಿದ್ಯಾಾರ್ಥಿಗಳ ದಾಖಲಾತಿ ಹೊಂದಿರುವ 39 ಸರ್ಕಾರಿ ಹಿರಿಯ ಪ್ರಾಾಥಮಿಕ, ಪ್ರೌೌಢಶಾಲೆಗಳನ್ನು ಕರ್ನಾಟಕ ಪಬ್ಲಿಿಕ್ ಮಾಗ್ನೆೆಟ್ ಶಾಲೆಗಳನ್ನಾಾಗಿ ಗುರುತಿಸಲಾಗಿದೆ.
ಶಿಕ್ಷಣ ತಜ್ಞರ, ವಿದ್ಯಾಾರ್ಥಿ ಸಂಘಟನೆಗಳ ವಿರೋಧದ ಮಧ್ಯೆೆಯೂ ರಾಜ್ಯ ಸರ್ಕಾರದ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ರಾಜ್ಯದಲ್ಲಿ ವಿಲೀನ ಎಂದು ನೇರವಾಗಿ ಹೇಳದೆ ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಗಳು ಎಂಬ ಹೆಸರಿನಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳ ಗುರುತಿಸಲಾಗಿದೆ.
ಕಲ್ಯಾಾಣ ಕರ್ನಾಟದ ಭಾಗದ ರಾಯಚೂರು ಜಿಲ್ಲೆೆಯ 39 ಸೇರಿ 199 ಸರ್ಕಾರಿ ಶಾಲೆಗಳ ಗುರುತಿಸಿ ಅವುಗಳನ್ನು ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಗಳಾಗಿ ಗುರುತಿಸಿದೆ.ಅಲ್ಲದೆ, ಬಜೆಟ್ನಲ್ಲಿ ಕಲ್ಯಾಾಣ ಕರ್ನಾಟಕದಲ್ಲಿ 50 ಕೆಪಿಎಸ್ ಶಾಲೆಗಳ ಆರಂಭಿಸಲು ಘೋಷಿಸಲಾಗಿತ್ತುಘಿ. ಅದರ ಜೊತೆಗೆ ಕೆಪಿಎಸ್ ಮ್ಯಾಾಗ್ನೆೆಟ್ ಹೆಸರಲ್ಲಿ 149 ಸರ್ಕಾರಿ ಹಿರಿಯ ಪ್ರಾಾಥಮಿಕ, ಪ್ರೌೌಢ ಶಾಲೆಗಳ ಗುರುತಿಸಿದೆ. ಈ ಶಾಲೆಗಳನ್ನು ಆಯಾ ತಾಲೂಕಿನ ಇಲಾಖೆಯ ಅಧಿಕಾರಿಗಳು ವಿಸ್ತೃತವಾದ ವರದಿಯೊಂದಿಗೆ ಇಲಾಖೆಗೆ ಸಲ್ಲಿಸಿದ್ದಾಾರೆ.
ಅದರ ಮುಂದುವರಿದ ಭಾಗವಾಗಿ ಸ್ಥಳೀಯ ಅಧಿಕಾರಿಗಳ ವರದಿಯನ್ನಾಾಧರಿಸಿಯೇ ರಾಯಚೂರು ಜಿಲ್ಲೆೆಯ ಸಿಂಧನೂರಲ್ಲಿ 9, ಲಿಂಗಸೂಗೂರಿನ 11, ಮಾನ್ವಿಿಯ 7, ದೇವದುರ್ಗ ಹಾಗೂ ರಾಯಚೂರಿನ ತಲಾ 6 ಶಾಲೆಗಳನ್ನು ಮ್ಯಾಾಗ್ನೆೆಟ್ ಶಾಲೆಗಳೆಂದು ಗುರುತಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಆದೇಶ ಮಾಡಿದ್ದಾಾರೆ.
ಈಗಿರುವ ಶಾಲೆಗಳನ್ನೇ ಮೇಲ್ದರ್ಜೆಗೇರಿಸುವ ಉದ್ದೇಶ ಸರ್ಕಾರದ ಶಿಕ್ಷಣ ಇಲಾಖೆ ಹೊಂದಿರುವುದು ಗುರುತಿಸಿದ ಶಾಲೆಗಳ ಪಟ್ಟಿಿ ಸಾಕ್ಷಿಿಕರಿಸುವಂತಿದೆ.ಅಲ್ಲದೆ, ಅತೀ ಹೆಚ್ಚು ದಾಖಲಾತಿ ಹೊಂದಿದ ಹೊಂದಿರುವ ಶಾಲೆಗಳನ್ನೇ ಕೇಂದ್ರವಾಗಿರಿಸಿ ಈ ಮ್ಯಾಾಗ್ನೆೆಟ್ ಶಾಲೆಗಳಾಗಿ ಗುರುತಿಸಲಾಗಿದೆ.
ಗ್ರಾಾಮೀಣ ಭಾಗದಲ್ಲಿ ಕನಿಷ್ಟ 1 ಎಕರೆ, ನಗರ ಪ್ರದೇಶದಲ್ಲಿ ಒಂದುವರೇ ಎಕರೆ ಸ್ಥಳ ಗುರುತಿಸಿ ವಿಧಾನಸಭಾ ಕ್ಷೇತ್ರವಾರು ಪಟ್ಟಿಿ ಸರ್ಕಾರಕ್ಕೆೆ ಸ್ಥಳೀಯ ಅಧಿಕಾರಿಗಳು ಸಲ್ಲಿಸಿದ್ದಾಾರೆ.
ಈಗ ಸರ್ಕಾರ ವಿವಿಧ ತಾಲೂಕಿನಲ್ಲಿ ಗುರುತಿಸಿದ ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಗಳ ಅಭಿವೃದ್ದಿಘಿ, ಸೌಕರ್ಯಗಳಿಗಾಗಿ ಕಲ್ಯಾಾಣ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಮೂಲಕ ಅವುಗಳನ್ನು ಕೆಪಿಎಸ್ ಶಾಲೆಗಳಾಗಿ ಗುರುತಿಸಿ ಸರ್ಕಾರ ವಿಸ್ತೃತ ಯೋಜನಾ ವರದಿಗೆ ಅಧಿಕಾರಿಗಳಿಗೆ ಸೂಚಿಸಿದೆ.
ಶಾಲೆ ಅಭಿವೃದ್ದಿಗೆ ಕೆಕೆಆರ್ಡಿಬಿ ಮೂಲಕ ಎರಡು ವರ್ಷಕ್ಕೆೆ ಒಂದು ಮ್ಯಾಾಗ್ನೆೆಟ್ ಕೆಪಿಎಸ್ ಶಾಲೆಗೆ 2 ರಿಂದ 4 ಕೋಟಿ ಅನುದಾನ ಬಳಕೆಗೆ ನಿಗದಿ ಪಡಿಸಿದ್ದು ಷರತ್ತುಗೊಳಪಟ್ಟು ಶಾಲಾ ಶಿಕ್ಷಣ ಇಲಾಖೆ ಆಯುಕ್ತರಿಗೆ ಅನುದಾನ ಒದಗಿಸುವ ಭರವಸೆ ನೀಡಿ ಮಂಡಳಿ ಆದೇಶ ಮಾಡಿದೆ.
1ರಿಂದ 12ನೇ ತರಗತಿಯಲ್ಲಿ ಅಭ್ಯಾಾಸ ಮಾಡುವ 1200 ವಿದ್ಯಾಾರ್ಥಿಗಳಿರುವಂತೆ ನೋಡಿಕೊಳ್ಳಲು ಶಾಲಾ ಶಿಕ್ಷಣ ಇಲಾಖೆ ಸೂಚಿಸಿದ್ದು ಅದರಂತೆ ಜಿಲ್ಲೆೆಯಲ್ಲಿನ ಸೂಚನೆಯಂತೆ ಮಾಡಲಾಗಿದೆ.
ಅಲ್ಲದೆ, ಗುರುತಿಸಿದ ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಯ 1 ರಿಂದ 5 ಕಿ ಮೀ ವ್ಯಾಾಪ್ತಿಿಯೊಳಗಿನ ಸಣ್ಣ ಸಣ್ಣ ಸರ್ಕಾರಿ ಶಾಲೆಗಳನ್ನು ಕರ್ನಾಟಕ ಪಬ್ಲಿಿಕ್ ಶಾಲೆಗಳೊಂದಿಗೆ ಸುಲಲಿತ ಸಮ್ಮಿಿಳಿತಗೊಳಿಸಿ ಆ ಶಾಲೆಗೆ ಯುಡಿಐಎಸ್ಇ ಕೋಡ್ ಬಳಸಿ ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿ ಸೇವೆ ಕೆಪಿಎಸ್ ಶಾಲಾ ನಿರ್ವಹಣಾ ಅನುದಾನಗಳನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಳ್ಳಲು ಖಾತ್ರಿಿ ಪಡಿಸಿಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕರಿಗೆ ಸೂಚಿಸಲಾಗಿದೆ.
ಒಟ್ಟಾಾರೆ, ಜಿಲ್ಲೆೆಯಲ್ಲಿ ಈಗಿರುವ ಸರ್ಕಾರಿ ಶಾಲೆಗಳನ್ನೇ ಕೆಪಿಎಸ್ ಮ್ಯಾಾಗ್ನೆೆಟ್ ಶಾಲೆಗಳಾಗಿ ಗುರುತಿಸಿದ್ದು ವಿಲಿನಗೊಳಿಸುವ ಪ್ರಕ್ರಿಿಯೆ ಮುಂಬರುವ ಶೈಕ್ಷಣಿಕ ವರ್ಷದಿಂದ ಯಾವ ರೂಪದಲ್ಲಿ ನಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

