ಸುದ್ದಿಮೂಲ ವಾರ್ತೆ ಔರಾದ್, ಡಿ.04:
ತಾಲೂಕಿನ ಕೌಠಾ ಬಿ ಗ್ರಾಾಮದ ಸರ್ಕಾರಿ ಹಿರಿಯ ಪ್ರಾಾಥಮಿಕ ಶಾಲೆಯಲ್ಲಿ ವಿದ್ಯಾಾರ್ಥಿಗಳಿಗೆ ಸರಿಯಾಗಿ ಕನ್ನಡ ಬರೆಯಲು ಬರುತ್ತಿಿಲ್ಲ ಎಂದು ಇತ್ತೀಚೆಗೆ ಸುದ್ದಿಮೂಲದಲ್ಲಿ ಬಂದ ವರದಿ ಹಿನ್ನಲೆ ಶಾಸಕ ಪ್ರಭು ಚವ್ಹಾಾಣ್ ಬಿಇಓ ರಂಗೇಶ್ ಗೆ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ಪಟ್ಟಣದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದರು.
ಕೌಠಾ ಶಾಲೆಯಲ್ಲಿ ಮಕ್ಕಳಿಗೆ ಕನ್ನಡವೇ ಸರಿಯಾಗಿ ಬರುತ್ತಿಿಲ್ಲ ಎಂದು ಮಾಧ್ಯಮದಲ್ಲಿ ವರದಿ ಪ್ರಕಟವಾಗಿದೆ. ಏಕೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಿಲ್ಲ ಎಂದು ಪ್ರಶ್ನಿಿಸಿದ್ದಾರೆ.
ಇದಕ್ಕೆೆ ಪ್ರತಿಕ್ರಿಿಯಿಸಿದ ಬಿಇಓ ರಂಗೇಶ್, ವರದಿ ಹಿನ್ನಲೆ ಈಗಾಗಲೇ ತಾವು, ಬಿಆರ್ಸಿ ಹಾಗೂ ಡಿಡಿಪಿಐ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಶೈಕ್ಷಣಿಕ ಗುಣಮಟ್ಟ ಕುಸಿತ ಕಂಡುಬಂದಿದೆ. ಈ ಬಗ್ಗೆೆ ವರದಿ ಸಲ್ಲಿಸಲಾಗಿದೆ ಎಂದು ಸಭೆಗೆ ತಿಳಿಸಿದ್ದಾರೆ.
ವರದಿ ನೀಡಿದರೆ ಸಾಲದು, ಅಗತ್ಯ ಬಿದ್ದರೆ ನಿಷ್ಕ್ರೀಯ ಶಿಕ್ಷಕರಿಗೆ ಅಮಾನತ್ ಮಾಡುವಂತೆ ಸೂಚನೆ ನೀಡಿದರು.
ತಾಲೂಕಿನ ಎಷ್ಟು ಶಾಲೆಯಲ್ಲಿ ಕನ್ನಡ ಶಿಕ್ಷಕರಿಲ್ಲದೇ ತರಗತಿ ನಡೆಯುತ್ತಿಿಲ್ಲ ಎಂದು ಶಾಸಕ ಪ್ರಭು ಚವ್ಹಾಾಣ ಪ್ರಶ್ನಿಿಸಿದರು. ಇದಕ್ಕೆೆ ಉತ್ತರಿಸಿದ ಬಿಇಒ ತಾಲೂಕಿನ 32 ಶಾಲೆಯಲ್ಲಿ ಕನ್ನಡ ಶಿಕ್ಷಕರ ಕೊರತೆಯಿದ್ದು, ಅಲ್ಲಿ ಅತಿಥಿ ಶಿಕ್ಷಕ ನೇಮಕ ಮಾಡುವ ಮೂಲಕ ಶಿಕ್ಷಣ ನೀಡಲಾಗುತ್ತಿಿದೆ ಎಂದು ಉತ್ತರಿಸುತ್ತಿಿದ್ದಂತೆ ಆಕ್ರೋೋಶಗೊಂಡ ಚವ್ಹಾಾಣ ಕನ್ನಡ ರಾಜ್ಯೋೋತ್ಸವದಲ್ಲಿ ಕಸಾಪ ಅಧ್ಯಕ್ಷ ಜನರಿಗೆ ಸುಳ್ಳು ಮಾಹಿತಿ ನೀಡಿದಾಗ ನೀವು ಅಲ್ಲಿಯೇ ಯಾಕೆ ಉತ್ತರಿಸಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಎಸ್ಸೆೆಸ್ಸೆೆಲ್ಸಿಿ ಲಿತಾಂಶ ಕಳೆದ ಬಾರಿ ಶೇ. 56ರಷ್ಟು ಬಂದಿದ್ದು, ಈ ಭಾರಿ ಶೇ. 85ರಷ್ಟು ತರುವುದಾಗಿ ಬಿಇಒ ರಂಗೇಶ ಭರವಸೆ ನೀಡಿದರು. ರಾಜಕೀಯ ಮಾಡುವ ಶಿಕ್ಷಕರನ್ನು ಕುಡಲೇ ಅಮಾನತು ಮಾಡುವಂತೆ ಚವ್ಹಾಾಣ ಖಡಕ್ ಸೂಚನೆ ನೀಡಿದರು. 6-7 ತರಗತಿಗೆ ಬಂದರೂ ಮಕ್ಕಳಿಗೆ ಕನ್ನಡ ಓದಲು ಬರುತ್ತಿಿಲ್ಲ. ಪ್ರಾಾಥಮಿಕ ಶಾಲೆಯ ಶಿಕ್ಷಕರು ಸರಿಯಾಗಿ ಕೆಲಸ ಮಾಡುತ್ತಿಿಲ್ಲ. ತಾಂಡಗಳಲ್ಲಿ ಶಿಕ್ಷಕರು ನಿತ್ಯ ಸರತಿಯಂತೆ ಕೆಲಸ ಮಾಡುತ್ತಿಿದ್ದಾರೆ ಎಂದು ದೂರಿದರು. ಲಿಂಗಿ ಶಾಲೆಯ ಶಿಕ್ಷಕರೊಬ್ಬರು ಸರಾಯಿ ಕುಡಿದು ಬರುತ್ತಿಿದ್ದಾರೆ. ಭಂಡಾರಕುಮಟಾ ಶಾಲೆ ಒತ್ತುವರಿ ಮಾಡಿಕೊಂಡ ವ್ಯಕ್ತಿಿಯ ಮೇಲೆ ಕ್ರಿಿಮಿನಲ್ ಕೇಸು ದಾಖಲು ಮಾಡುವಂತೆ ಸೂಚಿಸಿದರು. ಎಲ್ಲ ರೈತರಿಗೆ ಅತಿವೃಷ್ಟಿಿ, ಬೆಳೆ ವಿಮೆ ಪರಿಹಾರ ಬರಬೇಕು. ಕೆಲವರಿಗೆ ಬಂದಿಲ್ಲ. ಆನ್ಲೈನ್ ಅರ್ಜಿ ಬಾರದ ರೈತರಿಗೆ ಆ್ಲೈನ್ ದಾಖಲೆ ಪಡೆದು ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಚವ್ಹಾಾಣ್ ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ ಅವರಿಗೆ ಸೂಚಿಸಿದರು. ಔರಾದ್ನಲ್ಲಿ 34826, ಕಮಲನಗರನಲ್ಲಿ 32099 ರೈತರು ಬೆಳೆ ವಿಮೆ ಕಟ್ಟಿಿದ್ದಾರೆ. ಈ ಪೈಕಿ ಔರಾದನಿಂದ 13600, ಕಮಲನಗರನಲ್ಲಿ 15284 ಜನರು ದೂರು ನೋಂದಣೆ ಮಾಡಿದ್ದಾರೆ. 7-8 ಕೋಟಿ ವಿಮೆ ಬರಲಿದೆ ಎಂದು ಧೂಳಪ್ಪ ಮಾಹಿತಿ ನೀಡಿದರು. ತಹಸೀಲ್ದಾಾರ್ರಾದ ಮಹೇಶ ಪಾಟೀಲ್, ಅಮಿತ ಕುಲಕರ್ಣಿ, ತಾಪಂ ಇಒಗಳಾದ ಕಿರಣ ಪಾಟೀಲ್, ಹಣಮಂತ ಕೌಟಗೆ ಸೇರಿದಂತೆ ಅನೇಕರಿದ್ದರು.
ಔರಾದ್ ಕೆಡಿಪಿ ಸಭೆ : ಕನ್ನರಾ, ಯಿಗಲಿಷ್…. ಬಿಇಓಗೆ ಶಾಸಕ ಚವ್ಹಾಾಣ್ ತರಾಟೆ !

