ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.04:
ದೇಶದ ಶಕ್ತಿಿ ಪೀಠಗಳಲ್ಲಿ ಒಂದಾಗಿರುವ ತಾಲೂಕಿನ ಸಿದ್ದಪರ್ವತ ಅಂಬಾಮಠದ ದೇವಸ್ಥಾಾನ ಶಿಲಾನ್ಯಾಾಸ ಕಾಮಗಾರಿ ಕೈಗೊಳ್ಳಲಾಗಿದ್ದು, ಅಂಬಾದೇವಿಯ ಶ್ರೀಚಕ್ರ ವನ್ನು ಸ್ವರ್ಣಪ್ರಶ್ನೆೆ ಮೂಲಕ ಕೇಳಿದಾಗ ದೇವಿ ಅನುಗ್ರಹಿಸದ ಹಿನ್ನಲೆಯಲ್ಲಿ ಮೇಲೆತ್ತದಿರಲು ನಿರ್ಧರಿಸಲಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.
ಜನೆವರಿ-3 ರಂದು ನಡೆಯಲಿರುವ ಅಂಬಾದೇವಿ ಜಾತ್ರಾಾ ಮಹೋತ್ಸವ ಹಿನ್ನಲೆಯಲ್ಲಿ ಗುರುವಾರ ಪೂರ್ವಸಿದ್ದತೆಗಳನ್ನು ವೀಕ್ಷಣೆ ಮಾಡಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮುಜರಾಯಿ ಇಲಾಖೆ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ವೀರಾಪುರ ಶ್ರೀಗಳು, ಬೈಲಹೊಂಗಲದ ಮಹಾಂತೇಶ ಶಾಸಿಗಳ ಮಾರ್ಗದರ್ಶನದಲ್ಲಿ ಶಿಲಾಮಂಟಪ ನಿರ್ಮಾಣ ಕೆಲಸ ನಡೆದಿದೆ. ಸೆಪ್ಟೆೆಂಬರ್-12 ರಂದು ಬುನಾದಿ ಹಾಗೂ ಬೇಸ್ಮೆಂಟ್ ಪೂರ್ಣಗೊಳಿಸಿ ಶಿಲೆಯ ಉಪಪೀಠದ ಕಲ್ಲುಗಳನ್ನು ಜೋಡಣೆ ಮಾಡಲಾಗಿತ್ತು. ಜೊತೆಗೆ ದೇವಸ್ಥಾಾನವನ್ನು ಇನ್ನಷ್ಟು ಎತ್ತರ ಮಾಡುವ ನಿಟ್ಟಿಿನಲ್ಲಿ ಶ್ರೀಚತ್ರವನ್ನು 4 ಫೀಟ್ ಎತ್ತರ ಮಾಡಬೇಕು ಎಂದು ನಿರ್ಧರಿಸಿ ಗರ್ಭಗುಡಿಯ ಸುತ್ತಲು 21 ಫೀಟ್ ಆರ್ಸಿಸಿ ಮಾಡಲಾಗಿತ್ತು ಎಂದರು.
ಅರ್ಚಕರ ಕೋರಿಕೆ ಮೇರೆಗೆ ಶಕ್ತಿಿಪೀಠದ ಶ್ರೀಚಕ್ರ ಮೇಲೆತ್ತುವ ಸಂಬಂಧ ತಜ್ಞ ಅರ್ಚಕರಿಂದ ಸ್ವರ್ಣಪ್ರಶ್ನೆೆ ಕೇಳುವದು ಸೂಕ್ತ ಎಂದು ಸಲಹೆ ನೀಡಿದರು. ಈ ಹಿನ್ನಲೆಯಲ್ಲಿ ಸ್ವರ್ಣಪ್ರಶ್ನೆೆ ಕೇಳಿದಾಗ ದೇವಿಯ ಅನುಗ್ರಹವಾಗದ ಹಿನ್ನಲೆಯಲ್ಲಿ ಮೇಲೆತ್ತುವ ಪ್ರಸ್ತಾಾವನೆ ಕೈಬಿಡಲಾಯಿತು. ಇದರಿಂದಾಗಿ 4 ಫೀಟ್ ಆರ್ಸಿಸಿ ತೆರವು ಮಾಡಲಾಗಿದೆ. ಸುಮಾರು 10-12 ಲಕ್ಷ ರೂ.ಗಳ ಹಾನಿಯಾಗಿರಬಹುದು. ಆದರೂ ಅದರ ತ್ಯಾಾಜ್ಯ ಬಳಸಿಕೊಳ್ಳಲಾಗಿದೆ. ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಪವಿತ್ರ ದೇವಸ್ಥಾಾನವಾಗಿದ್ದು, ನಯಾಪೈಸೆಯೂ ಅವ್ಯವಹಾರವಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದರು.
ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿ, ದೇವಸ್ಥಾಾನದ ಶಿಲಾನ್ಯಾಾಸ ಕಾಮಗಾರಿಯನ್ನು ಯಾರು ಉದ್ದೇಶ ಪೂರ್ವಕ ವಿಳಂಬ ಹಾಗೂ ಹಾನಿ ಮಾಡಿಲ್ಲ. ದೇವಸ್ಥಾಾನದ ವಾಸ್ತು, ಆಯ, ಪರಿಣಿತರ ಅಭಿಪ್ರಾಾಯಗಳ ಆಧಾರದ ಮೇಲೆ ತೀರ್ಮಾನಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಶ್ರೀಚಕ್ರ ಮೇಲೆತ್ತಬೇಕು ಎನ್ನುವದು ಕೆಲವರ ಅಭಿಪ್ರಾಾಯವಾಗಿದ್ದರೆ, ಅದೇ ಸ್ಥಳದಲ್ಲೇ ಇರಲಿ ಎನ್ನುವದು ಇನ್ನೂ ಕೆಲವರ ಅಭಿಪ್ರಾಾಯವಾಗಿರಬಹುದು. ಇದನ್ನು ರಾಜಕೀಯಗೊಳಿಸುವದು ಸರಿಯಲ್ಲ. ಕಲ್ಲಿನ ಶಿಲಾಮಂಟಪವಾಗಿದ್ದರಿಂದ ಕಾಮಗಾರಿ ಅವಸರ ಮಾಡುವದು ಸರಿಯಲ್ಲ. ಇದೊಂದು ಶಕ್ತಿಿಪೀಠವಾಗಿರುವುದರಿಂದ ಅಂಬಾಮಠ ಪ್ರವಾಸಿ ತಾಣವಾಗಿ ಅಭಿವೃದ್ದಿಯಾಗಬೇಕು ಎಂದರು.
ಈ ಸಂದರ್ಭದಲ್ಲಿ ದೇವಸ್ಥಾಾನ ವ್ಯವಸ್ಥಾಾಪನಾ ಸಮಿತಿ ಅಧ್ಯಕ್ಷ ರಂಗನಗೌಡ ಗೊರೇಬಾಳ, ತಹಶೀಲ್ದಾಾರ ಅರುಣ ಹೆಚ್.ದೇಸಾಯಿ, ತಾ.ಪಂ.ಇಓ ಚಂದ್ರಶೇಖರ, ನಗರಸಭೆ ಪೌರಾಯುಕ್ತ ಪಾಂಡುರಂಗ ಇಟಗಿ, ಕಾಂಗ್ರೆೆಸ್ ಮುಖಂಡರಾದ ರಾಜುಗೌಡ ಬಾದರ್ಲಿ, ಬಸವರಾಜ ಹಿರೇಗೌಡರ್, ಶ್ರೀದೇವಿ ಶ್ರೀನಿವಾಸ, ಎನ್.ಅಮರೇಶ, ರಾಮನಗೌಡ ಮಲ್ಕಾಾಪುರ, ರಂಗಾರೆಡ್ಡಿಿ ಸಾಸಲಮರಿ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಜನೆವರಿ 3 ರಂದು ಅಂಬಾದೇವಿ ಜಾತ್ರಾ ಮಹೋತ್ಸವ ಸ್ವರ್ಣಪ್ರಶ್ನೆ ಮೂಲಕ ಶ್ರೀಚಕ್ರ ಮೇಲೆತ್ತದಿರಲು ನಿರ್ಧಾರ: ಬಾದರ್ಲಿ

