ಸುದ್ದಿಮೂಲ ವಾರ್ತೆ ಮಸ್ಕಿ, ಡಿ.04:
ತಾಲ್ಲೂಕಿನ ಗುಡದೂರು ಗ್ರಾಾಮ ಪಂಚಾಯಿತಿ ವ್ಯಾಾಪ್ತಿಿಯ ಮೇರನಾಳ ಗ್ರಾಾಮದಲ್ಲಿ ಬುಧವಾರದಂದು ಮಧ್ಯಾಾಹ್ನ 2ರ ಸುಮಾರಿಗೆ ಆಕಸ್ಮಿಿಕವಾಗಿ ಅಗ್ನಿಿ ಅವಘಡದಲ್ಲಿ ಭತ್ತದ ಹುಲ್ಲಿನ ಬಣವೆ ಭಸ್ಮವಾಗಿದೆ.
ಈ ಬಾರಿ ಬೇಸಿಗೆಯ ಎರಡನೇ ಬೆಳೆಗೆ ನೀರು ಇಲ್ಲದ ಕಾರಣ ಭತ್ತದ ಹುಲ್ಲಿಗೆ ಬೇಡಿಕೆ ಹೆಚ್ಚಾಾಗಿದ್ದು ಮೇರನಾಳ ಗ್ರಾಾಮದ ರೈತರದ ವಾಜಿದ್ ಎಂಬುವವರು 8 ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದು ಭತ್ತದ ಕಟಾವು ಮುಗಿದ ನಂತರ 7 ಟ್ರಾಾಕ್ಟರ್ ಗೂ ಅಧಿಕ ಭತ್ತದ ಹುಲ್ಲಿನ ಹೊರೆಯ ಬಣವೆ ಸಂಗ್ರಹಿಸಿಟ್ಟಿಿದ್ದರು.
ಬುಧವಾರದಂದು ಮಧ್ಯಾಾಹ್ನದ ವೇಳೆಗೆ ಆಕಸ್ಮಿಿಕವಾಗಿ ಹುಲ್ಲಿಗೆ ಬೆಂಕಿ ಹೊತ್ತಿಿಕೊಂಡಿದ್ದು. ಸ್ಥಳೀಯವಾಗಿ ಇದ್ದ ಅನೇಕ ವ್ಯಕ್ತಿಿಗಳು ಅಗ್ನಿಿಶಾಮಕ ಠಾಣೆಗೆ ದೂರವಾಣಿ ಸಂಪರ್ಕದ ಮೂಲಕ ಮಾಹಿತಿ ನೀಡಿದ್ದು ಸಿಂಧನೂರು ತಾಲೂಕಿನ ಅಗ್ನಿಿಶಾಮಕ ದಳದ ಠಾಣೆಯಿಂದ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ.
ರೈತರು ಆರ್ಥಿಕ ಸಂಕಷ್ಟದಲ್ಲಿದ್ದರೂ ಸಾಲ ಮಾಡಿ ವ್ಯವಸಾಯ ಮಾಡಿದ್ದರು. ಹುಲ್ಲಿಗೆ ಬೆಂಕಿ ಬಿದ್ದ ಕಾರಣ ಮತ್ತಷ್ಟು ನಷ್ಟವಾಗಿದೆ. ಆಕಳು ಮೇವಾಗಿರುವ ಒಣ ಹುಲ್ಲನ್ನು 50,000ಕ್ಕೂ ಅಧಿಕ ಹಣ ಖರ್ಚು ಮಾಡಿ ಸಂಗ್ರಹಿಸಲಾಗಿತ್ತು ಎಂದು ರೈತ ವಾಜಿದ್ ಅಳಲು ತೋಡಿಕೊಂಡಿದ್ದಾರೆ.
ಮಸ್ಕಿಿ ತಾಲೂಕಾಗಿ ಎಂಟು ವರ್ಷಗಳು ಕಳೆದರೂ ಇಲ್ಲಿಯವರೆಗೂ ಬೆಂಕಿ ನಂದಿಸಲು ಅಗ್ನಿಿಶಾಮಕ ಠಾಣೆ ಆಗದಿರುವುದು ವಿಪರ್ಯಾಸ ಮಸ್ಕಿಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಅನೇಕ ಬಾರಿ ಬೆಂಕಿ ಹೊತ್ತಿಿಕೊಂಡ ಸಂದರ್ಭದಲ್ಲಿ ಹತ್ತಿಿರವಾಗಿ ಬೆಂಕಿ ನಂದಿಸಲು ಅಗ್ನಿಿಶಾಮಕ ಸಿಬ್ಬಂದಿಗಳು ಇಲ್ಲದ ಕಾರಣ ಅನೇಕ ನಷ್ಟಗಳು ಸಂಭವಿಸಿದೆ ಇದರಿಂದಾಗಿ ಸಚಿವರು, ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳು ಗಮನ ಹರಿಸಿ ಮಸ್ಕಿಿ ತಾಲೂಕಿಗೆ ಅಗ್ನಿಿಶಾಮಕ ಠಾಣಾ ನಿರ್ಮಿಸಬೇಕೆಂದು ಮೇರನಾಳ ಗ್ರಾಾಮದ ಸ್ಥಳೀಯ ಜಿಲಾನಿ ಮಿಯಾ ಮನವಿ ಮಾಡಿದ್ದಾರೆ.
ಭತ್ತದ ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ: 50 ಸಾ.ರೂ.ಗಳಿಗೂ ಅಧಿಕ ನಷ್ಟ

